ಕೊರೋನಾ ಮಹಾಮಾರಿ ಹಿನ್ನೆಲೆ ಎಲ್ಲಾ ಸೇವೆಗಳಲ್ಲಿಯೂ ವ್ಯತ್ಯಯ ಉಂಟಾಗಿದೆ. ಇದೀಗ ಬ್ಯಾಂಕ್ ಸೇವಗಳ ಸಮಯವೂ ಬದಲಾಗಿದೆ. ಯಾವ ಸಮಯಕ್ಕೆ ಇಲ್ಲಿದೆ ಮಾಹಿತಿ
ಮಂಡ್ಯ (ಏ.23): ಕೋವಿಡ್ ತೀವ್ರತೆಯಿಂದ ರಾಜ್ಯ ಸಲಹಾ ಸಮಿತಿ 2021 - 22ರ ಆದೇಶದ ಅನ್ವಯ ಬ್ಯಾಂಕ್‌ಗಳ ವ್ಯವಹಾರವನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಂತರಿಕ ಕೆಲಸಕ್ಕಾಗಿ ತೆರದಿರುತ್ತದೆ.
ಈ ಆದೇಶವು ಜಿಲ್ಲೆಯಾದ್ಯಂತ ಏ.22 ರಿಂದ ಮೇ 31ರವರೆಗೆ ಜಾರಿಯಲ್ಲಿರುತ್ತದೆ. ಹಣ ಪಾವತಿಸಲು ಪಡೆಯಲು ಕ್ಲಿಯರಿಂಗ್ ಸರ್ವೀಸ್ ಹಾಗೂ ಸರ್ಕಾರಿ ವ್ಯವಹಾರಗಳಿಗೆ ಮಾತ್ರ ಅವಕಾಶವಿರುತ್ತದೆ.
undefined
ಉಳಿತಾಯ ಖಾತೆಗೆ ಅತೀ ಹೆಚ್ಚು ಬಡ್ಡಿ ನೀಡುತ್ತೆ ಈ ಬ್ಯಾಂಕ್‌ಗಳು! ...
ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಹಕರು ಬ್ಯಾಂಕುಗಳಿಗೆ ಭೇಟಿ ನೀಡುವ ಬದಲು ಎಟಿಎಂ. ಡಿಜಿಟಲ್ ಬ್ಯಾಂಕಿಂಗ್ ಮತ್ತು ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಬ್ಯಾಂಕ್ ಮಿತ್ರ ಬಳಿ ಹೆಚ್ಚಿನ ವ್ಯವಹಾರ ನಡೆಸಲು ಸಾರ್ವಜನಿಕರು ಈ ಬದಲಾದ ಸಮಯವನ್ನು ಗಮನಿಸಿ ತಮ್ಮ ವ್ಯವಹಾರವನ್ನು ಮಾಡಿಕೊಳ್ಳಲು ಮತ್ತು ಬ್ಯಾಂಕಿನ ಅಧಿಕಾರಿಗಳೊಂದಿಗೆ ಸಂಯಮದಿಂದ ವರ್ತಿಸಿ ಸಹಕರಿಸಲು ಬ್ಯಾಂಕ್ ವ್ಯವಸ್ಥಾಪಕರು ಪ್ರಕಟಣೆಗಳ ಮೂಲಕ ತಿಳಿಸಿದ್ದಾರೆ.