ಗೌರಿಬಿದನೂರಿನ ವ್ಯಕ್ತಿಗೆ ಕೊರೋನಾ ಸೋಂಕು ಇರೋದು ದೃಢ: ಶ್ರೀರಾಮುಲು

Suvarna News   | Asianet News
Published : Mar 21, 2020, 01:29 PM IST
ಗೌರಿಬಿದನೂರಿನ ವ್ಯಕ್ತಿಗೆ ಕೊರೋನಾ ಸೋಂಕು ಇರೋದು ದೃಢ: ಶ್ರೀರಾಮುಲು

ಸಾರಾಂಶ

ಕೊರೋನಾ ಸೋಂಕು ಇರುವ ಮೆಸೇಜ್ ಸುಧಾಕರ್‌ಗೆ ಲೇಟ್ ಆಗಿ ಮೆಸೆಜ್ ತಲುಪಿರುವುದರಿಂದ ಹಾಗೆ ಹೇಳಿರಬಹುದು| ಸುಧಾಕರ್ ಸ್ನೇಹಿತರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ| ಅವರಿಗೆ ಮೆಸೇಜ್ ಹೋಗೋದು ಲೇಟ್ ಆಗಿದೆ| ನಾನು ಮತ್ತು ಸುಧಾಕರ ಯಡಿಯೂರಪ್ಪ ನೇತೃತ್ವದಲ್ಲಿ ಒಗ್ಗೂಡಿ ಕೆಲಸ ಮಾಡ್ತಿದ್ದೇವೆ|

ಬೆಳಗಾವಿ[ಮಾ. 21]: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ವ್ಯಕ್ತಿಗೆ ಕೊರೋನಾ ಸೋಂಕು ಇರುವ ಬಗ್ಗೆ ವರದಿಗಾಗಿ ಕಾಯುತ್ತಿದ್ದೇವೆ ಎಂಬ ವೈದ್ಯಕೀಯ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಗೌರಿಬಿದನೂರಿನ ವ್ಯಕ್ತಿಗೆ ಕೊರೋನಾ ಸೋಂಕು ಇರುವ ಮೆಸೇಜ್ ಸುಧಾಕರ್‌ ಅವರಿಗೆ ಲೇಟ್ ಆಗಿ ಮೆಸೆಜ್ ತಲುಪಿರುವುದರಿಂದ ಹಾಗೆ ಹೇಳಿರಬಹುದು ಎಂದು ಹೇಳಿದ್ದಾರೆ. 

ಇಂದು[ಶನಿವಾರ] ನಗರದ ಡಿಸಿ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸುಧಾಕರ್ ಸ್ನೇಹಿತರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೆಸೇಜ್ ಹೋಗೋದು ಲೇಟ್ ಆಗಿದೆ. ನಾನು ಮತ್ತು ಸುಧಾಕರ ಯಡಿಯೂರಪ್ಪ ನೇತೃತ್ವದಲ್ಲಿ ಒಗ್ಗೂಡಿ ಕೆಲಸ ಮಾಡ್ತಿದ್ದೇವೆ. ನಾನು ಹೂಂ ಅನ್ನುವುದು, ಅವರು ಇಲ್ಲ ಎನ್ನುವುದು ಹಾಗೇನಿಲ್ಲ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಮತ್ತೊಂದು ಕೊರೋನಾ ಸೋಂಕು ದೃಢ!

ಸಚಿವ ಸುಧಾಕರ್‌ಗೆ ವರದಿ ಮುಟ್ಟುವುದು ತಡವಾಗಿದೆ. ಗೌರಿಬಿದನೂರಿನ ವ್ಯಕ್ತಿಗೆ ಕೊರೋನಾ ಸೋಂಕು ಇರೋದು ದೃಢವಾಗಿದೆ. ರಾಜ್ಯದಲ್ಲಿ 16 ಕೊರೋನಾ ಪ್ರಕರಣಗಳು ಪಾಸಿಟಿವ್ ಆಗಿವೆ. ಐದು ಜನರು ಗುಣಮುಖರಾಗಿದ್ದು ಮೂವರನ್ನ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 
 

PREV
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?