ಮುಧೋಳ: ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ, ಮುಖ್ಯಗುರುಮಾತೆ ಸಸ್ಪೆಂಡ್

By Suvarna News  |  First Published Dec 22, 2019, 10:01 AM IST

ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಬಿಸಿಯೂಟ ತಿಂದು 66 ವಿದ್ಯಾರ್ಥಿಗಳು ಅಸ್ವಸ್ತರಾದ ಪ್ರಕರಣ| ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಗುರುಮಾತೆ ಎಸ್‌.ಎಲ್ ಕಠಾರೆ ಅಮಾನತು| 


ಮುಧೋಳ(ಡಿ.22): ತಾಲೂಕಿನ ರನ್ನಬೆಳಗಲಿ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಬಿಸಿಯೂಟ ತಿಂದು 66 ವಿದ್ಯಾರ್ಥಿಗಳು ಅಸ್ವಸ್ತರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಗುರುಮಾತೆ ಎಸ್‌.ಎಲ್ ಕಠಾರೆ ಅವರನ್ನು ಅಮಾನತು ಮಾಡಿ ಬಾಗಲಕೋಟೆ ಡಿಡಿಪಿಐ ಆದೇಶ ಹೊರಡಿಸಿದ್ದಾರೆ. 

ನಿಯಮದಂತೆ ಬಿಸಿಯೂಟ ಪರೀಕ್ಷಿಸಿ ಬಳಿಕ ಮಕ್ಕಳಿಗೆ ಬಿಸಿಯೂಟ ನೀಡಬೇಕಿತ್ತು. ಇದ್ರಲ್ಲಿ ಮುಖ್ಯ ಗುರುಮಾತೆ ಲೋಪ ಹಿನ್ನೆಲೆಯಲ್ಲಿ ಅಮಾನತು ಮಾಡಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Tap to resize

Latest Videos

ಈ ಬಗ್ಗೆ ಮಾತನಾಡಿದ ಮುಧೋಳ ಕ್ಷೇತ್ರ ಸಮನ್ವಯಾಧಿಕಾರಿ ಮಹಾಂತೇಶ ನರಸನಗೌಡರ ಅವರು, ಗ್ರಾಮದ ಸರ್ಕಾರಿ ಕೆಜಿಎಸ್ ಶಾಲೆಯಲ್ಲಿ ಬೆಳಿಗ್ಗೆ 10.30 ಕ್ಕೆ ಮಕ್ಕಳಿಗೆ ಅಡುಗೆ ಸಿಬ್ಬಂದಿ ಚಿತ್ರಾನ್ನ ನೀಡಿದ್ದರು. ಚಿತ್ರಾನ್ನಕ್ಕೆ ಹಾಕಿದ್ದ ಆಲೂಗಡ್ಡೆ ಸೀಮೆ ಎಣ್ಣೆ ವಾಸನೆ ಬಂದ ಹಿನ್ನೆಲೆಯಲ್ಲಿ ಚಿತ್ರಾನ್ನ ಸೇವಿಸಿದ್ದ ವಿದ್ಯಾರ್ಥಿಗಳಲ್ಲಿ ವಾಂತಿ,ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅಸ್ವಸ್ಥಗೊಂಡ ಮಕ್ಕಳನ್ನು ಅಂಬ್ಯುಲೆನ್ಸ್ ಮೂಲಕ ಮುಧೋಳದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮುಧೋಳ: ಬಿಸಿಯೂಟ ಸೇವಿಸಿ 30 ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ಚಿತ್ರನ್ನ ಅಲ್ಪೋಪಹಾರ ಸೇವಿಸಿದ ಮಕ್ಕಳು ಹೊಟ್ಟೆನೋವು ಆರಂಭಗೊಂಡು ವಾಂತಿ-ಬೇಧಿಯಾದಾಗ ಅಲ್ಲಿನ ಮುಖ್ಯೋಪಾಧ್ಯಾಯ ಎಸ್‌.ಐ.ಕಠಾರೆ ಅವರು ಚಿಕಿತ್ಸೆಗಾಗಿ 108 ಆ್ಯಂಬುಲೆನ್ಸ್‌ ವಾಹನದ ಮೂಲಕ ಮುಧೋಳ ಸರ್ಕಾರಿ ಆಸ್ಪತ್ರೆಗೆ ಕಳಿಸಿದರು. ಯಾವ ಮಕ್ಕಳಿಗೂ ತೊಂದರೆಯಾಗಿಲ್ಲ. ಪಾಲಕರು ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ. 
 

click me!