ಪ್ರವೇಶ ಶುಲ್ಕ ಕಟ್ಟದ ವಿದ್ಯಾರ್ಥಿಗಳನ್ನ ಶಾಲೆಯಿಂದ ಹೊರಹಾಕಿದ ಮುಖ್ಯೋಪಾಧ್ಯಾಯ!

By Suvarna NewsFirst Published Dec 4, 2019, 1:22 PM IST
Highlights

ಶಾಲೆಯ ಪ್ರವೇಶ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಹೊರಹಾಕಿದ ಮುಖ್ಯೋಪಾಧ್ಯಾಯ| ಇಂದು ನಡೆಯುತ್ತಿದ್ದ ಪೂರ್ವಬಾವಿ ಪರೀಕ್ಷೆ|ಮಕ್ಕಳನ್ನು ಹೊರಹಾಕಿದ್ದರ ವಿಷಯ ತಿಳಿದು ಶಾಲೆಯತ್ತ ಓಡೋಡಿ  ಬಂದ ಪೋಷಕರು|ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕೊಡದ ಹಿನ್ನೆಲೆ ಶಾಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ|ವಿದ್ಯಾರ್ಥಿಗಳಿಗೆ ಪರೀಕ್ಷೆ ಅವಕಾಶ ಮಾಡಿಕೊಟ್ಟಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟ ಪೋಷಕರು|
 

ಧಾರವಾಡ[ಡಿ.04]: ಶಾಲೆಯ ಪ್ರವೇಶ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಶಾಲಾ  ಮುಖ್ಯೋಪಾಧ್ಯಾಯ ಹೊರಹಾಕಿದ ಘಟನೆ ನಗರದ ಬಾಸೆಲ್ ಮಿಶನ್ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್ ನಲ್ಲಿ ಇಂದು[ಬುಧವಾರ] ನಡೆದಿದೆ.

ಇಂದು ನಡೆಯುತ್ತಿರುವ ಪೂರ್ವಬಾವಿ ಪರೀಕ್ಷೆ ನಡೆಯುತ್ತಿದ್ದವು. ಆದರೆ, ವಿದ್ಯಾರ್ಥಿಗಳು  ಪ್ರವೇಶ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ವಿದ್ಯಾರ್ಥಿಗಳನ್ನು ಹೊರಹಾಕಿದ್ದಾರೆ. ಶುಲ್ಕ  ಕಟ್ಟಲು ತಡವಾದ್ದರಿಂದ ನೂರಾರು ಮಕ್ಕಳನ್ನು ಪರೀಕ್ಷೆಯಿಂದ ಹೊರಕ್ಕೆ ಹಾಕಲಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಕ್ಕಳನ್ನು ಹೊರಹಾಕಿದ್ದರ ವಿಷಯ ತಿಳಿದು ಪೋಷಕರು ಸಾಲ ಮಾಡಿಕೊಂಡು ಶಾಲೆಗೆ ಓಡೊಡಿ ಬಂದಿದ್ದಾರೆ. ಮುಖ್ಯೋಪಾಧ್ಯಾಯ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕೊಡದ ಹಿನ್ನೆಲೆ ಶಾಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.‌ ಪಾಲಕರು ಶಾಲೆಯ ಮುಖ್ಯೋಪಾಧ್ಯಾಯ ಮಧ್ಯೆ ವಾಗ್ವಾದ ಕೂಡ ನಡೆದಿದೆ. ಪಾಲಕರು ಮತ್ತು ಶಾಲಾ ಸಿಬ್ಬಂದಿಯ ನಡುವೆ ವಾಗ್ವಾದದ ನಂತರ ಮಕ್ಕಳಿಗೆ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಅವಕಾಶ ಮಾಡಿಕೊಟ್ಟಿದ್ದರಿಂದ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 
 

click me!