ತಾಲೂಕಿನ ಕೀಳನಪುರ ಗ್ರಾಪಂ ವ್ಯಾಪ್ತಿಯಲ್ಲಿ ನ.15 ರಂದು ನಡೆದ ಜನಸಂಪರ್ಕ ಸಭೆಯಲ್ಲಿ ಶಾಲೆಯೊಂದಕ್ಕೆ ಸಿಎಸ್ಆರ್ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಡನೆ ಮಾತನಾಡಿದ್ದನ್ನೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೀಳನಪುರ ಗ್ರಾಪಂ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಸ್. ಮಂಜುನಾಥ್ ಆರೋಪಿಸಿದರು.
ಮೈಸೂರು : ತಾಲೂಕಿನ ಕೀಳನಪುರ ಗ್ರಾಪಂ ವ್ಯಾಪ್ತಿಯಲ್ಲಿ ನ.15 ರಂದು ನಡೆದ ಜನಸಂಪರ್ಕ ಸಭೆಯಲ್ಲಿ ಶಾಲೆಯೊಂದಕ್ಕೆ ಸಿಎಸ್ಆರ್ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಡನೆ ಮಾತನಾಡಿದ್ದನ್ನೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೀಳನಪುರ ಗ್ರಾಪಂ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಸ್. ಮಂಜುನಾಥ್ ಆರೋಪಿಸಿದರು.
ಗ್ರಾಮಸ್ಥರ ಸಮಸ್ಯೆ ಆಲಿಸಲು ಡಾ. ಯತೀಂದ್ರ ಅವರು ಆಗಮಿಸಿದ್ದರು. ಈ ವೇಳೆ ಕೆಲವು ಗ್ರಾಮಸ್ಥರು ತಮ್ಮ ಗ್ರಾಮದ ಶಾಲೆ ದುರಸ್ತಿ ಮಾಡಿಸಿಕೊಡಲು ಕೋರಿದ್ದರು. ಹೀಗಾಗಿ, ಡಾ. ಯತೀಂದ್ರ ಅವರು ತಮ್ಮ ತಂದೆಯೊಡನೆ ಮಾತನಾಡುತ್ತಾ, ಬಿಇಒ ನೀಡಿದ ಪಟ್ಟಿ ಬದಲು ತಾವು ನೀಡಿದ ಪಟ್ಟಿಯಲ್ಲಿರುವುದಕ್ಕೆ ಸಮ್ಮತಿಸಲು ಕೋರಿದರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
undefined
ಡಾ. ಯತೀಂದ್ರ ಅವರು ಕಾರ್ಯಕ್ರಮದ ಸ್ಥಳದಲ್ಲೇ ಎಲ್ಲರ ಎದುರಿಗೇ ಮಾತನಾಡಿದ್ದಾರೆ. ಒಂದು ವೇಳೆ ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದರೆ ಆ ರೀತಿ ಎಲ್ಲರೆದುರು ಮಾತನಾಡುತ್ತಿದ್ದರೇ? ಅವರು ಕ್ಷೇತ್ರದ ಜನತೆಯ ಕಷ್ಟಸುಖ ಆಲಿಸುತ್ತಿದ್ದಾರೆ. ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹೀಗಾಗಿ, ಎಲ್ಲಾ ಗ್ರಾಮಗಳಿಗೂ ತೆರಳಿ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ರಾಜಕೀಯ ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಎಚ್.ಡಿ. ಕುಮಾರಸ್ವಾಮಿ ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ವೇಳೆ ಜನರ ಸಮಸ್ಯೆಗೆ ಸ್ಪಂದಿಸಲಿ. ಆದರೆ, ಅದನ್ನು ಬಿಟ್ಟು ಈ ರೀತಿ ಇಲ್ಲಸಲ್ಲದ ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಗ್ರಾಪಂ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ದುದ್ದಗೆರೆ ಪಿ. ಮಹದೇವು, ರವಿ, ಮೇಗಳಾಪುರ ಸೋಮಣ್ಣ, ಪ್ರಸನ್ನ, ಶಿವಣ್ಣ, ಮಹದೇವಸ್ವಾಮಿ ಮೊದಲಾದವರು ಇದ್ದರು.
ಡಿಕೆಶಿ ಸಲಹೆಯಂತೆ ಯತೀಂದ್ರ ವಿಡಿಯೋಗೆ ಸಿಎಸ್ಆರ್ ಸ್ವರೂಪ
ಬೆಂಗಳೂರು (ನ.18): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಕಲಿ ಮುಖ್ಯಮಂತ್ರಿ (ಉಪಮುಖ್ಯಮಂತ್ರಿ) ಡಿ.ಕೆ.ಶಿವಕುಮಾರ್ ಕೊಟ್ಟ ಸಲಹೆಯ ಮೇರೆಗೆ ತಮ್ಮ ಪುತ್ರನ ಕಾಸಿಗಾಗಿ ಹುದ್ದೆ ವಿಡಿಯೋ ವಿವಾದಕ್ಕೆ ಸಿಎಸ್‌ಆರ್ (ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ) ಅನುದಾನದ ಸ್ವರೂಪ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ದ್ವೇಷ, ಅಸೂಯೆಯಿಂದ ಆರೋಪ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಆದರೆ, ಅವರು ಈ ವಿಡಿಯೋಗೆ ಸಂಬಂಧಿಸಿ ಸತ್ಯಗಳನ್ನು, ಸಾಕ್ಷ್ಯಗಳನ್ನು ತಿರುವಿದ ರೀತಿ ನೋಡಿದರೆ ನನಗೆ ಅಚ್ಚರಿ ಉಂಟಾಗಿದೆ. ಸಿಎಸ್‌ಆರ್ ಅನುದಾನ ಬಗ್ಗೆ ಮುಖ್ಯಮಂತ್ರಿಗಳು ಸೃಷ್ಟಿ ಮಾಡಿದ ಕಟ್ಟುಕಥೆ ಎಂದು ಟೀಕಾ ಪ್ರಹಾರ ನಡೆಸಿದರು. ಮುಖ್ಯಮಂತ್ರಿಗಳ ಪುತ್ರನ ವಿಡಿಯೋ ಬೆಳಗ್ಗೆ 7 ಗಂಟೆಗೆ ರಿಲೀಸ್ ಆಯಿತು. ಸಿದ್ದರಾಮಯ್ಯ ಅವರು ಮಧ್ಯಾಹ್ನ 3 ಗಂಟೆಗೆ ಸಿಎಸ್‌ಆರ್ ಅನುದಾನ ಪಟ್ಟಿ ರಿಲೀಸ್ ಮಾಡಿದರು. ವಿಡಿಯೋ ರಿಲೀಸ್ ಆದ ಕೂಡಲೇ ಕರೆದು ಸಿಎಸ್‌ಆರ್ ಅನುದಾನ ಎಂದು ಹೇಳಬೇಕಿತ್ತು. ಆದರೆ, 3 ಗಂಟೆವರೆಗೂ ಯಾಕೆ ಹೇಳಲಿಲ್ಲ.
ವಿದ್ಯುತ್ ಕಳವು: 68526 ರು. ದಂಡ ಕಟ್ಟಿ ಕರೆಂಟ್ ಕಳ್ಳ ಎನ್ನುವುದನ್ನು ನಿಲ್ಲಿಸಿ ಎಂದ ಎಚ್‌ಡಿಕೆ
ಇದನ್ನು ಯಾರಾದರೂ ನಂಬುತ್ತಾರಾ? ಒಂದು ಶಾಲೆಗೆ 2.5 ಲಕ್ಷ ರು. ಸಿಎಸ್‌ಆರ್ ಅನುದಾನ ತೆಗೆದುಕೊಳ್ಳುತ್ತಾರೆಯೇ? ವಿಧಾನಮಂಡಲ ಅಧಿವೇಶನದಲ್ಲಿ ಇದನ್ನು ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದರು. ವಿವೇಕಾನಂದ ಎನ್ನುವವರು ಯಾರು ಎಂಬುದನ್ನು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಯಾಕೆ ಕೇಳಿದರು? ಕ್ಷೇತ್ರದ ಕೆಡಿಪಿ ಸಮಿತಿ ಅಧ್ಯಕ್ಷರಾದ ಅವರಿಗೆ ತಮ್ಮ ಕ್ಷೇತ್ರದ ಶಿಕ್ಷಣಾಧಿಕಾರಿ ಯಾರೂ ಎಂದು ಗೊತ್ತಿಲ್ಲವೆ? ಸಿದ್ದರಾಮಯ್ಯನ ಹುಂಡಿ ಗ್ರಾಮದ ಸರ್ಕಾರಿ ಶಾಲೆಗೂ ಯಾಕೆ ಹಣ ಕೊಟ್ಟಿಲ್ಲ?
ಕಾಂಗ್ರೆಸ್ ಸೇಡಿನ ರಾಜಕೀಯಕ್ಕೆ ಜಗ್ಗೋಲ್ಲ, ಯಾವ ತನಿಖೆಗೂ ಸಿದ್ಧ: ಎಚ್‌ಡಿಕೆ ಸವಾಲ್
ಆ ಶಾಲೆ ಹೇಗಿದೆ ಎನ್ನುವುದು ಇವರಿಗೆ ಗೊತ್ತಿಲ್ಲವೇ? ವರಣಾ ನೋಡಿಕೊಳ್ಳಲು ಬೇರೆ ಅಧಿಕಾರಿ ಇದ್ದಾರೆ. ಮಹದೇವ್ ಬಳಿ ಯಾಕೆ ಹೋಯಿತು ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು. ಸತ್ಯ ಹೇಳಿದ್ದಕ್ಕೆ ನನ್ನ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದ ಪುಢಾರಿಗಳು ಏನೇ ಸರ್ಟಿಫಿಕೇಟ್ ಕೊಟ್ಟರೂ ಸಮಚಿತ್ತವಾಗಿ ಸ್ವೀಕಾರ ಮಾಡುತ್ತೇನೆ. ವಿಡಿಯೋ ಹೊರ ಬಂದ ದಿನದಂದು ನಕಲಿ ಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳ ಹೋಗಿ ಸಿಎಸ್‌ಆರ್ ಅನುದಾನ ಎಂಬುದಾಗಿ ಹೇಳುವಂತೆ ಹೇಳಿಕೊಟ್ಟಿದ್ದಾರೆ ಎಂದು ಆರೋಪಿಸಿದರು.