ತಂದೆ ರೇವಣ್ಣ ಕೆಳಕ್ಕೆ ಕುಳಿತಿದ್ದು, ಪುತ್ರ ಪ್ರಜ್ವಲ್ ವೇದಿಕೆ ಮೇಲೆ ಕುಳಿತುಕೊಂಡಿದ್ದರು. ಅಲ್ಲದೇ ಮಗನನ್ನು ಸರ್ ಎಂದು ಕರೆದಿದ್ದು ವಿಶೇಷವಾಗಿತ್ತು. ಇದೆಲ್ಲಾ ನಡೆದಿದ್ದು ಹಾಸನದಲ್ಲಿ ನಡೆದ ಸಭೆಯಲ್ಲಿ
ಹಾಸನ [ಜ.21]: ತಂದೆ ಕೆಳಗೆ ಕುಳಿತು ಸಮಸ್ಯೆಗಳನ್ನು ಹೇಳಿಕೊಳ್ಳುವ ಮತ್ತು ಮಗ ಮೇಲೆ ಕುಳಿತು ಸಮಸ್ಯೆಗಳನ್ನು ಆಲಿಸುವ ಸಂದರ್ಭ ಹಾಸನ ಜಿಲ್ಲಾ ಪಂಚಾಯ್ತಿ ಸಭಾಗಣದಲ್ಲಿ ಎದುರಾಯಿತು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಲೋಕಸಭಾ ಸದಸ್ಯನ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಮೂರನೇ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ಹೊಳೆನರಸಿಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಹಾಗೂ ಅವರ ಮಗ ಹಾಲಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಈ ದೃಶ್ಯಕ್ಕೆ ಸಾಕ್ಷಿಯಾದರು.
ಸಭೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶಾಸಕ ಎಚ್.ಡಿ ರೇವಣ್ಣ ತಮ್ಮ ತಾಲೂಕಿನ ಸಮಸ್ಯೆಗಳ ಬಗ್ಗೆ ತಮ್ಮ ಮಗನ ಬಳಿ ಹೇಳಿಕೊಂಡರು. ಅಲ್ಲದೇ, ತಮ್ಮ ಮಗನಿಂದಲೇ ಅನೇಕ ಸಲಹೆ ಸೂಚನೆ ಪಡೆದರು.
ದಳದಲ್ಲಿ ಭುಗಿಲೆದ್ದ ‘ಅಸಮಾಧಾನ’ದ ಹೊಗೆ : ಈಗ ಎಲ್ಲವೂ ಸರಿಯಿಲ್ಲ
ಮಗನನ್ನೇ ಸರ್ ಎಂದಿದ್ದು ವಿಶೇಷ: ಸಭೆಯಲ್ಲಿ ಶಾಸಕ ಎಚ್.ಡಿ ರೇವಣ್ಣ, ತಮ್ಮ ತಾಲೂಕಿನ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸುವ ಸಂದರ್ಭ ಎದುರಾದಾಗ ತಮ್ಮ ಮಗನನ್ನು ಸರ್.. ಎಂದು ಕರೆಯುತ್ತಿದ್ದರು. ಇದೊಂದು ವಿಶೇಷವಾದ ಸಂಗತಿಯಾಗಿದೆ.
ಸಂಸದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್...
ಅದಲು ಬದಲಾದ ತಂದೆ- ಮಗನ ಸ್ಥಾನ: ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂಸದರಿದ್ದಾಗ ತಂದೆ ಮೇಲೆ, ಮಗ (ರೇವಣ್ಣ) ಕೆಳಗೆ ಕುಳಿತು ಮೀಟಿಂಗ್ ಮಾಡುತ್ತಿದ್ದರು. ಆದರೆ, ಈಗ ಮಗ (ಪ್ರಜ್ವಲ್) ವೇದಿಕೆ ಮೇಲೆ ತಂದೆ (ರೇವಣ್ಣ) ಕೆಳಗೆ ಆಸೀನರಾಗಿ ಸಭೆಯಲ್ಲಿ ಪಾಲ್ಗೊಂಡಿದರು.