BSY ಸರ್ಕಾರ ಬೀಳಿಸಲು ಬಿಜೆಪಿಗನಿಂದಲೇ ತಂತ್ರ : ಹೊಸ ಬಾಂಬ್ ಸಿಡಿಸಿದ HDK

By Kannadaprabha News  |  First Published Mar 6, 2020, 7:34 AM IST

ಮೈತ್ರಿ ಸರ್ಕಾರ ಉರುಳಿಸಿದ ಬಿಜೆಪಿಗನಿಂದಲೇ ಯಡಿಯೂರಪ್ಪ ಸರ್ಕಾರ ಉರುಳಿಸಲು ತಂತ್ರ ನಡೆಯುತ್ತಿದೆ ಎಂದು ಮಾಜಿ ಸಿಎಂ ಎಚ್ ಡಿಕೆ ಹೊಸ ಬಾಂಬ್ ಸಿಡಿಸಿದ್ದಾರೆ. 


ಚನ್ನಪಟ್ಟಣ [ಮಾ.06]:  ನನ್ನ ಸರ್ಕಾರವನ್ನು ಕೆಡವಲು ಪ್ರಯತ್ನಿಸಿದ ತಂಡವೇ ಇದೀಗ ಯಡಿಯೂರಪ್ಪ ಅವರ ಸರ್ಕಾರವನ್ನು ಉರುಳಿಸಲು ತಂತ್ರ ರೂಪಿಸುತ್ತಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಸ್ವಕ್ಷೇತ್ರದಲ್ಲಿ ನಡೆದ ಬಮೂಲ್‌ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಎಚ್‌ಡಿಕೆ, ನನ್ನ ಸರ್ಕಾರ ಕೆಡವಿ ಮಂತ್ರಿಯಾಗುತ್ತೇನೆ ಎಂದು ಚನ್ನಪಟ್ಟಣದಿಂದ ಮಂಡ್ಯದ ವರೆಗೆ ಬ್ಯಾನರ್‌ ಹಾಕಿಸಿಕೊಂಡ ಈ ಕ್ಷೇತ್ರದ ಮಾಜಿ ಜನಪ್ರತಿನಿಧಿ ಮಂತ್ರಿ ಗಾದಿ ಸಿಕ್ಕಿಲ್ಲ ಎಂದು ಯಡಿಯೂರಪ್ಪ ಕುರ್ಚಿ ಅಲುಗಾಡಿಸಲು ಮುಂದಾಗಿದ್ದಾನೆ ಎಂದು ಮಾಜಿ ಸಚಿವ ಯೋಗೇಶ್ವರ್‌ ಅವರ ಹೆಸರು ಪ್ರಸ್ತಾಪಿಸದೆ ಏಕವವಚನದಲ್ಲಿ ವಾಗ್ದಾಳಿ ನಡೆಸಿದರು.

Tap to resize

Latest Videos

ಉದಯ್‌ ಕ್ಲಬ್‌ ಮೇಲೆ ದಾಳಿಯಾಗಿದ್ದೇಕೆ?:

ಈ ಮಹಾನುಭಾವ ನನ್ನ ಸರ್ಕಾರವನ್ನು ಕೆಡವಲು ಜೂಜಾಟ ನಡೆಸಿ, ಹುಡುಗರನ್ನು ಹಾಳು ಮಾಡುತ್ತಿದ್ದ ಕೆಲ ಕಿಂಗ್‌ಪಿನ್‌ಗಳ ಮೂಲಕ ಹಣ ಸಂಗ್ರಹಿಸಿ ಏನೇನು ನಡೆಸಿದ ಎಂಬುದೆಲ್ಲಾ ನನಗೆ ಗೊತ್ತಿದೆ. ನೆನ್ನೆಯಷ್ಟೇ ಈ ಕಿಂಗ್‌ಪಿನ್‌ಗಳ ಪೈಕಿ ಒಬ್ಬ ಎನಿಸಿರುವ ಉದಯ್‌ಗೌಡನ ಕ್ಲಬ್‌ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಬಿಜೆಪಿಗೆ ಬೆಸ್ಟ್, ಕಾಂಗ್ರೆಸ್‌ಗೆ ವೇಸ್ಟ್; ಜನರ ಗೊಂದಲಕ್ಕೆ ಇಲ್ಲಿದೆ ಬಜೆಟ್ 2020 ಅನಾಲಿಸಿಸ್!.

ಎರಡು ದಿನಗಳಿಂದ ಈ ಕ್ಲಬ್‌ ಮೇಲೆ ಯಾಕೆ ದಾಳಿ ನಡೆಯುತ್ತಿದೆ ಎಂಬುದನ್ನು ರಾಜ್ಯದ ಜನತೆ ತಿಳಿಯದಷ್ಟುಮೂರ್ಖರಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿತರಗೊಳಿಸಲು ಯೋಗೇಶ್ವರ್‌ ಮತ್ತವರ ಟೀಂ ಪ್ರಯತ್ನಶೀಲವಾಗಿದೆ. ಅದಕ್ಕಾಗಿ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಯುತ್ತಿದೆ ಎಂಬುದನ್ನು ಸೂಚ್ಯವಾಗಿ ಪ್ರಸ್ತಾಪಿಸಿದರು.

ನಾನು ಪಾಪದ ಕೆಲಸ ಮಾಡುವುದಿಲ್ಲ:

ನನ್ನ ಜನಪರ ಕೆಲಸವನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತೇನೆ. ಜನ ನನ್ನನ್ನು ಆಶೀರ್ವದಿಸುತ್ತಾರೆ. ಮತ್ತೆ ಮುಖ್ಯ ಮಂತ್ರಿ ಮಾಡುತ್ತಾರೆ ಎಂಬ ನಂಬಿಕೆ ಇದೆ. ಸರ್ಕಾರ ಬೀಳಿಸುವ ಪಾಪದ ಕೆಲಸವನ್ನು ನಾನು ಮಾಡುವುದಿಲ್ಲ. ಯಡಿಯೂರಪ್ಪ ಕಷ್ಟಮುಖ್ಯಮಂತ್ರಿಯಾಗಿದ್ದಾರೆ. ಅವರು ಮುಂದುವರೆಯಲಿ ಎಂದರು.

BSY ಬಜೆಟ್‌ಗೆ ಕಾಂಗ್ರೆಸ್ ನಾಯಕರ ಖಡಕ್ ಪ್ರತಿಕ್ರಿಯೆ!...

ಚನ್ನಪಟ್ಟಣ ಕ್ಷೇತ್ರ ಬಿಡೋಲ್ಲ:

ಮುಂದಿನ ವಿಧಾನಸಭಾ ಚುನಾವಣೆಗೂ ನಾನು ಇಲ್ಲಿಂದಲೇ ಸ್ಪರ್ಧಿಸುತ್ತೇನೆ. ಈ ಕ್ಷೇತ್ರದಿಂದಲೇ ಗೆದ್ದು ನಾನು ಮತ್ತೆ ಸಿಎಂ ಆಗುತ್ತೇನೆ. ಮಾಗಡಿ ಶಾಸಕರು ಸಮರ್ಥವಾಗಿದ್ದಾರೆ. ನಾನೇಕೆ ಮಾಗಡಿಗೆ ಹೋಗಲಿ. ಈ ಬಗ್ಗೆ ಯಾವುದೇ ವದಂತಿ ಬೇಡ ನಾನೇ ಮುಂದಿನ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು.

click me!