ನಾರಾಯಣ ಗೌಡ್ರ ಪತ್ರ ಓದಿದ ಎಚ್‌ಡಿಕೆ: ಲೆಟರ್‌ನಲ್ಲೇನಿತ್ತು..?

By Kannadaprabha NewsFirst Published Nov 28, 2019, 8:57 AM IST
Highlights

ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ಬರೆದಿರುವ ಪತ್ರವನ್ನು ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರು ಓದಿದ್ದಾರೆ. ಪತ್ರದಲ್ಲೇನಿದೆ..? ಯಾಕೆ ಬರೆದರು..? ಇಲ್ಲಿ ಓದಿ.

ಮಂಡ್ಯ(ನ.28): ನಾರಾಯಣಗೌಡರು ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಪತ್ರ ಬರೆದಿದ್ದರು. ಈ ಪತ್ರವನ್ನು ನಾನು ಇಲ್ಲಿ ಓದಲು ಹೋಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದಾಗ ಜನರು ಓದಿ ಸಾರ್‌, ಓದಿ ಎಂದು ಒತ್ತಾಯ ಮಾಡಿದರು. ಆಗ ಪತ್ರವನ್ನು ಕಿಕ್ಕೇರಿ ಹಾಗೂ ಸಂತೇ ಬಾಚಹಳ್ಳಿ ಪ್ರಚಾರ ಸಭೆಯಲ್ಲಿ ಕುಮಾರಸ್ವಾಮಿ ಓದಿದ್ದಾರೆ.

ಮಂಡ್ಯದ ಕಿಕ್ಕೇರಿ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ನಾರಾಯಣ ಗೌಡ ಅವರು ಬರೆದ ಪತ್ರದ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ನಂತರ ಪತ್ರವನ್ನೂ ಓದಿ ಹೇಳಿದ್ದಾರೆ.

ಆ ಪತ್ರದ ಒಕ್ಕಣಿ ಹೀಗಿದೆ

ನಾನು ರಾಜಕೀಯವಾಗಿ ಅನಾಥ, ನನಗೆ ತಂದೆ-ತಾಯಿ ಇಲ್ಲ, ದೇವೆಗೌಡರೇ ತಂದೆ, ಚೆನ್ನಮ್ಮನೇ ತಾಯಿ, ನೀವುಗಳೇ ನನ್ನ ಸಹೋದರರು. ನಿಮ್ಮ ಕುಟುಂಬದ ಸಹಕಾರದಿಂದಲೇ ನಾನು ರಾಜಕೀಯವಾಗಿ ಅಂಬೇಗಾಲು ಇಡಲು ಸಾಧ್ಯವಾಗಿದೆ. ಎರಡು ಬಾರಿ ಶಾಸಕನಾಗಲು ಅವಕಾಶ ನೀಡಿದ ನಿಮ್ಮನ್ನ ನಾನು ಮನಃಸ್ಪೂರ್ತಿಯಾಗಿ ಸ್ಮರಿಸಿಕೊಳ್ಳುತ್ತೇನೆ. ನಾನು ಬಾಂಬೆಯಲ್ಲಿನ ಸ್ಲಂಗಳಲ್ಲಿ ಓಡಾಡಿದ್ದೇನೆ.

ಮಂಡ್ಯ: ವಾಹನ ತಪಾಸಣೆ ಮಾಡದ ಪೇದೆಗಳ ಅಮಾನತು

ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಹೀಗಾಗಿ ನನ್ನನ್ನು ಸ್ಲಂ ಬೋರ್ಡ್‌ ಅಧ್ಯಕ್ಷನನ್ನಾಗಿ ಮಾಡಿ ಕೋರುತ್ತೇನೆ ಎಂದು ನಾರಾಯಣಗೌಡರ ಪತ್ರದಲ್ಲಿ ಬರೆದಿದ್ದನ್ನು ಓದಿದರು. ಇಷ್ಟೆಲ್ಲಾ ಬರೆದು ವ್ಯಕ್ತಿ ಈಗ ನನ್ನ ಹಾಗೂ ಕುಟುಂಬದ ಬಗ್ಗೆ ಊಹಾಪೋಹದ ಮಾತುಗಳು ಹೇಳುತ್ತಾನೆ. ಜನರೇ ನಿರ್ಧಾರ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕರಲ್ಲಿ ಯಾವುದೇ ಒಡಕಿಲ್ಲ : ಡಿಕೆಶಿ

click me!