'ಯಡಿಯೂರಪ್ಪನವರೇ ಮಕ್ಳನ್ನ ಹದ್ದುಬಸ್ತ್‌ನಲ್ಲಿಡ್ಕೊಳ್ಳಿ'

By Web Desk  |  First Published Aug 20, 2019, 2:14 PM IST

ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರು ಸಿಎಂ ಬಿ. ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮರ್ಯಾದೆಗೆ ಬದುಕಿರೋರು ನಾವು, ನಿಮ್ಮ ತರಹ ಬದುಕಿಲ್ಲ. ಟ್ವೀಟ್ ಮಾಡೋದು ಬಿಟ್ಟು ಮರ್ಯಾದೆಯಿಂದ ಬದುಕಿರಿ ಎಂದು ವಾರ್ನ್‌ ಮಾಡಿದ್ದಾರೆ.


ಚಿಕ್ಕಮಗಳೂರು(ಆ.20) : ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನ ಹದ್ದು-ಬಸ್ತ್ ನಲ್ಲಿ ಇಟ್ಕೊಳ್ಳಿ ಎಂದು ಮಾಜಿ ಸಿಎಂ ಹೆಚ್‌. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕೊಟ್ಟಿಗೆಹಾರದಲ್ಲಿ ಮಾತನಾಡಿದ ಅವರು, ನಿಮ್ಮ ಮಕ್ಕಳನ್ನು ವ್ಯಾಪಾರ ಮಾಡಲು ಬಿಡಬೇಡಿ. ವ್ಯಾಪಾರ ಮಾಡಲು ಬಿಟ್ರೆ, 2010ರಲ್ಲಿ ಜೈಲಿಗೆ ಹೋಗಿಬಂದಂತೆ ಮತ್ತೆ ಅದೇ ಸ್ಥಾನಕ್ಕೆ ಹೋಗಬೇಕಾಗುತ್ತೆ ಎಚ್ಚರವಹಿಸಿ ಎಂದಿದ್ದಾರೆ.

Latest Videos

undefined

'ಫೋನ್ ಟ್ಯಾಪಿಂಗ್ CBI ಗೆ ವಹಿಸಿರೋದು ಕಾಂಗ್ರೆಸ್, ಬಿಜೆಪಿ ಒಳ ಒಪ್ಪಂದ'

ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರ ಟ್ವೀಟ್‌ಗಳ ಬಗ್ಗೆ ಪ್ರತಿಕ್ರಿಯಿಸಿ, ಟ್ವೀಟ್ ಮಾಡೋದು ಸುಲಭ, ಅದು ಮುಖ್ಯವಲ್ಲ. ನಿಮ್ಮ ಕ್ರಿಯೆ ಕಡೆ ಗಮನ ಕೊಡಿ. ರಘುಪತಿ ಅನ್ನೋನ ಹಾಕೊಂಡು ಕೃಷ್ಣ ಕಚೇರಿಯಲ್ಲಿ ಮಾರ್ಕೇಟ್ ದಂಧೆ ಮಾಡ್ಕೊಂಡಿದ್ದೀರಾ. ಆ ದಂಧೆನಾ ನನ್ನ ಮಗನ ಕೈಯಲ್ಲೂ ಮಾಡ್ಸಿಲ್ಲ ಎಂದಿದ್ದಾರೆ.

ಸರ್ಕಾರ ಬೀಳಿಸೋಕೆ ನಿಮ್ಮ ಮಗ ಸಮಾಜಘಾತುಕ ಶಕ್ತಿಗಳ ಜೊತೆ ಹೊಂದಾಣಿಕೆ ಮಾಡ್ಕೊಂಡಿದ್ದು ಅವ್ರಿಗೆ ಲೀಡ್ ತೋರ್ಸಿದ್ದೀರಾ ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ ಅವರು, ನಾನು ಸಾವಿರ ಟ್ವೀಟ್ ಮಾಡಬಲ್ಲೆ. ನಾನು ಯಾವ ರೀತಿ ಬದುಕಬೇಕು ಅನ್ನೋದ್ನ ನಿಮ್ಮಿಂದ ಕಲಿಯಬೇಕಿಲ್ಲ ಎಂದಿದ್ದಾರೆ.

ಗೌಡರ ಮಕ್ಕಳೇನೆಂದು ತೋರಿಸ್ತೀವಿ: ರೇವಣ್ಣ

ಮರ್ಯಾದೆಗೆ ಬದುಕಿರೋರು ನಾವು, ನಿಮ್ಮ ತರಹ ಬದುಕಿಲ್ಲ. ಟ್ವೀಟ್ ಮಾಡೋದು ಬಿಟ್ಟು ಮರ್ಯಾದೆಯಿಂದ ಬದುಕಿರಿ ಎಂದು ವಾರ್ನ್‌ ಮಾಡಿದ್ದಾರೆ.

click me!