ಸರ್ಕಾರಿ ಶಾಲೆಯ ಎದುರು ಬಾವಲಿ ಕೊಂದು ಮೊಟ್ಟೆ, ನಿಂಬೆಹಣ್ಣು ಇರಿಸಿ ವಾಮಾಚಾರದ ಪೂಜೆ

Published : Oct 06, 2026, 07:55 AM IST
Ranebennuru

ಸಾರಾಂಶ

ಹಾವೇರಿಯ ರಾಣಿಬೆನ್ನೂರಿನ ಸರ್ಕಾರಿ ಶಾಲೆಯೊಂದರ ಎದುರು ದುರುಳರು ವಾಮಾಚಾರ ನಡೆಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬಾವಲಿಯನ್ನು ಕೊಂದು ಮೊಟ್ಟೆ, ನಿಂಬೆಹಣ್ಣು ಇಟ್ಟು ಮಾಡಲಾದ ಈ ಕೃತ್ಯದ ವಿಡಿಯೋ ವೈರಲ್ ಆಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಾವೇರಿ: ರಾಣಿಬೆನ್ನೂರು ನಗರದ ನಗರಸಭಾ ಕ್ರೀಡಾಂಗಣದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.7ರ ಎದುರು ಶನಿವಾರ ರಾತ್ರಿ ಯಾರೋ ದುರುಳರು ವಾಮಾಚಾರ ನಡೆಸಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಾಮಾಚಾರದ ವಿಡಿಯೋ ವೈರಲ್ 

ಶಾಲೆಯ ಎದುರು ಬಾವಲಿಯನ್ನು ಕೊಂದು, ಅದರ ಸುತ್ತ ಮೊಟ್ಟೆ ಹಾಗೂ ನಿಂಬೆಹಣ್ಣುಗಳನ್ನು ಇಟ್ಟು ವಾಮಾಚಾರ ನಡೆಸಲಾಗಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಶಾಲೆಯ ಸಮೀಪವೇ ಇಂತಹ ಕೃತ್ಯ ನಡೆದಿರುವುದು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಕಳವಳಕ್ಕೆ ಕಾರಣವಾಗಿದೆ. ದಸರಾ ರಜೆ ಆರಂಭವಾಗಿರುವುದರಿಂದ ಶಾಲೆಗೆ ಮಕ್ಕಳು ಬಂದಿರಲಿಲ್ಲ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಪೌರಕಾರ್ಮಿಕರು ಭಾನುವಾರ ಬೆಳಗ್ಗೆ ಸ್ಥಳಕ್ಕೆ ತೆರಳಿ ವಾಮಾಚಾರದ ವಸ್ತುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದ್ದಾರೆ.

ಶಾಲೆಯ ಸುತ್ತಮುತ್ತ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಘಟನೆಯ ಕುರಿತು ಪರಿಶೀಲನೆ ನಡೆಸಿ ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಿಗಂದೂರು ರಸ್ತೆ ಬದಿ ಮಧ್ಯರಾತ್ರಿ ರಹಸ್ಯ ಪೂಜೆ; ನಿಗೂಢ ವಸ್ತುಗಳನ್ನಿಡ್ತಿದ್ದ ವ್ಯಕ್ತಿಗೆ ಕ್ಲಾಸ್

PREV
Read more Articles on
click me!

Recommended Stories

ನಿಷೇಧದ ನಡುವೆಯೂ ಅಕ್ರಮವಾಗಿ ತುಂಗಭದ್ರಾ ನದಿಯಲ್ಲಿ ತೆಪ್ಪಗಳ ಸಂಚಾರ! ಸಾವಿರಾರು ಹಣ ವಸೂಲಿ
ಕೆರೆಗಳಿಗೆ ನೀರು ತುಂಬಿಸದಿದ್ದರೆ ಚುನಾವಣೇಲಿ ನೋಟಾಕ್ಕೆ ಮತ; ಸಿಎಂಗೆ ಈ ಊರಿನ ರೈತರಿಂದ ಎಚ್ಚರಿಕೆ!