ಕೆರೆಗಳಿಗೆ ನೀರು ತುಂಬಿಸದಿದ್ದರೆ ಚುನಾವಣೇಲಿ ನೋಟಾಕ್ಕೆ ಮತ; ಸಿಎಂಗೆ ಈ ಊರಿನ ರೈತರಿಂದ ಎಚ್ಚರಿಕೆ!

Kannadaprabha News   | Kannada Prabha
Published : Oct 06, 2026, 07:38 AM IST
Fill Lakes or We Vote NOTA Hiriyur Farmers

ಸಾರಾಂಶ

ಹಿರಿಯೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ವಾಣಿವಿಲಾಸ, ಗಾಯತ್ರಿ ಜಲಾಶಯಗಳಿಂದ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ಉಪ ಚುನಾವಣೆಯಲ್ಲಿ ನೋಟಾಕ್ಕೆ ಮತ ಹಾಕುವ ಎಚ್ಚರಿಕೆ!

ಹಿರಿಯೂರು (ಅ.6): ತಾಲೂಕಿನ ನಾಲ್ಕು ಹೋಬಳಿಗಳ ಕೆರೆಗಳಿಗೆ ನೀರು ತುಂಬಿಸದಿದ್ದರೆ ಉಪ ಚುನಾವಣೆಯಲ್ಲಿ ನೋಟಾಕ್ಕೆ ಮತ ಹಾಕಲಾಗುವುದು ಎಂದು ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವಾಣಿವಿಲಾಸ ಜಲಾಶಯ 5TMC ನೀರು ಮೀಸಲಿಡಬೇಕು

ಹಿರಿಯೂರು ತಾಲೂಕಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಕೆರೆಗಳಿಗೆ ನೀರು ತುಂಬಿಸುವಂತೆ ವಿವಿಧ ಮಾದರಿಯಲ್ಲಿ ಹೋರಾಟ ಮಾಡುತ್ತಾ ಬರಲಾಗಿದೆ. ಆದರೆ ಇದುವರೆಗೂ ಕೆರೆಗಳಿಗೆ ನೀರು ತುಂಬಿಸಿರುವುದಿಲ್ಲ. ವಾಣಿವಿಲಾಸ ಜಲಾಶಯಕ್ಕೆ ಪ್ರತಿ ವರ್ಷ ಐದು ಟಿಎಂಸಿ ನೀರು ಮೀಸಲು ಇಡಬೇಕು. ಈ ವರ್ಷ ಭದ್ರಾ ಜಲಾಶಯದಿಂದ ಎರಡು ಟಿಎಂಸಿ ನೀರು ಹರಿಸಬೇಕು.

ಗಾಯತ್ರಿ ಜಲಾಶಯದಿಂದ 16 ಕೆರೆಗಳಿಗೆ ನೀರು ತುಂಬಿಸಿ

ಜೆಜಿ ಹಳ್ಳಿ ಹೋಬಳಿಯ ಕಲ್ವಳ್ಳಿ ಭಾಗದ ಗಾಯತ್ರಿ ಜಲಾಶಯ ಸೇರಿ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಿ ನೀರು ಹರಿಸಬೇಕು. ಕಸಬಾ ಹಾಗೂ ಐಮಂಗಲ ಭಾಗದ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ ಕೆರೆಗಳಿಗೆ ನೀರು ತುಂಬಿಸಬೇಕು. ಧರ್ಮಪುರ ಹೋಬಳಿಯ ವಿವಿಧ ಕೆರೆಗಳಿಗೆ ಏತ ನೀರಾವರಿ ಮಾಡಿದ್ದು ಈ ಕೆರೆಗಳಿಗೆ ವಾಟರ್ ಅಲೋಕೇಶನ್ ಮಾಡಬೇಕು ಮತ್ತು ಇನ್ನು ಉಳಿದಿರುವ ಕೆರೆಗಳಿಗೆ ಪೈಪ್‌ಲೈನ್ ಕಾಮಗಾರಿ ಮಾಡಿ ನೀರು ತುಂಬಿಸಬೇಕು. ವಾಣಿವಿಲಾಸ ಜಲಾಶಯದಿಂದ ಯಾವುದೇ ಭಾಗಕ್ಕೂ ವಾಟರ್ ಅಲೊಕೇಶನ್ ಮಾಡಬಾರದು. ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭ ಮಾಡಬೇಕು. ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ತುರ್ತು ಕ್ರಮ ವಹಿಸದಿದ್ದರೆ ಬರಲಿರುವ ಉಪ ಚುನಾವಣೆಯಲ್ಲಿ ನೋಟಾಕ್ಕೆ ಮತ ಹಾಕುವ ಮೂಲಕ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ರೈತ ಮುಖಂಡರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ವೆಂಕಟೇಶ್, ರೈತ ಮುಖಂಡರಾದ ಸಿದ್ದರಾಮಣ್ಣ, ವೀರಣ್ಣಗೌಡ, ಕನ್ಯಪ್ಪ, ಎಂ.ಆರ್.ಈರಣ್ಣ, ಜೆಜಿಹಳ್ಳಿ ಹೋಬಳಿ ಅಧ್ಯಕ್ಷ ಈರಣ್ಣ, ಸಣ್ಣ ತಿಮ್ಮಣ್ಣ, ವಿರುಪಾಕ್ಷಪ್ಪ, ಮಂಜುನಾಥ್, ಬಾಲಕೃಷ್ಣ, ಹೊರಕೇರಪ್ಪ, ಜಗನ್ನಾಥ್, ಗಿರೀಶ್, ನಿಂಗಪ್ಪ, ಆರ್.ಕೆ.ಗೌಡ, ನಿರಂಜನ್, ಗೋವಿಂದಪ್ಪ ಸಿಂಪಣ್ಣ ಮುಂತಾದವರು ಹಾಜರಿದ್ದರು.

PREV
Read more Articles on
click me!

Recommended Stories

Jog Falls: ದಸರಾ ರಜೆ ಅಂತಾ ಜೋಗ್ ಫಾಲ್ಸ್ ನೋಡಲು ಹೋದವರಿಗೆ ಶಾಕ್! ಅಲ್ಲಿ ಕಂಡಿದ್ದೇನು?
Cabinet Meeting Today: ಹಾಲಿನ ದರ ಮತ್ತೆ ಏರಿಕೆ ಆಗುತ್ತಾ? ಇಂದಿನ ಸಂಪುಟ ಸಭೆಯಲ್ಲಿ ಫೈನಲ್?