ಕಚೇರಿ ಆರಂಭಕ್ಕೂ ಮುನ್ನವೇ ಕುಸಿದ ತೋಟಗಾರಿಕೆ ಇಲಾಖೆ ಕಟ್ಟಡ ; ಚಾಯ್‌ವಾಲಾನಿಂದ ಉಳಿತು ಜೀವ

Published : Jul 14, 2026, 07:23 AM IST
Hassan

ಸಾರಾಂಶ

ಭಾರೀ ಮಳೆಗೆ ತೋಟಗಾರಿಕೆ ಇಲಾಖೆಯ ಕಚೇರಿ ಕಟ್ಟಡ ಕುಸಿದುಬಿದ್ದಿದೆ. ಕಟ್ಟಡ ಕುಸಿಯುವ ಮುನ್ಸೂಚನೆ ನೀಡಿದ ಚಾಯ್‌ವಾಲಾ ಆದಂ ಅವರ ಎಚ್ಚರಿಕೆಯಿಂದಾಗಿ, ಸಿಬ್ಬಂದಿ ಪ್ರಮುಖ ದಾಖಲೆಗಳನ್ನು ಸ್ಥಳಾಂತರಿಸಿ ದೂರ ಉಳಿದಿದ್ದರಿಂದ ಏಳು ಮಂದಿಯ ಪ್ರಾಣ ಉಳಿದಿದೆ.

ಹಾಸನ: ಜಿಲ್ಲೆಯ ಸಕಲೇಶಪುರ ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿ ಕಟ್ಟಡ ಭಾನುವಾರ ಸಂಪೂರ್ಣ ಕುಸಿದು ಬಿದ್ದಿದ್ದು, ಕಚೇರಿ ಆರಂಭಕ್ಕೂ ಮುನ್ನವೇ ಘಟನೆ ನಡೆದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.

ಚಾಯ್‌ವಾಲ್ ಆದಂ ನೀಡಿದ್ರು ಎಚ್ಚರಿಕೆ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಕಟ್ಟಡ ಶಿಥಿಲಗೊಂಡಿತ್ತು. ಕಟ್ಟಡದಲ್ಲಿ ಐವರು ಖಾಯಂ ಸಿಬ್ಬಂದಿ ಹಾಗೂ ಇಬ್ಬರು ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಕಚೇರಿಗೆ ಟೀ ನೀಡಲು ಬಂದಿದ್ದ ಆದಂ ಎಂಬುವವರು ಕಟ್ಟಡ ಕುಸಿಯುವ ಹಂತದಲ್ಲಿದ್ದು ಅಪಾಯವಿದೆ ಎಂದು ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ ಶನಿವಾರ ಸಂಜೆ ಕಚೇರಿಯ ಪ್ರಮುಖ ಕಡತಗಳು ಹಾಗೂ ದಾಖಲೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ಭಾನುವಾರ ಮಧ್ಯರಾತ್ರಿ ಕಟ್ಟಡದ ಒಂದು ಭಾಗ ಕುಸಿಯಲಾರಂಭಿಸಿದ್ದು, ಸಿಬ್ಬಂದಿ ಮತ್ತಷ್ಟು ಎಚ್ಚರಿಕೆಯಿಂದ ಕಚೇರಿಯನ್ನು ತೆರೆಯದೆ ಇರಲು ನಿರ್ಧರಿಸಿದ್ದರು. ಬಳಿಕ ಬೆಳಗಿನ ಜಾವ ಕಟ್ಟಡ ಹಂತಹಂತವಾಗಿ ಸಂಪೂರ್ಣ ನೆಲಸಮವಾಗಿದೆ.

ಕಚೇರಿ ಆರಂಭವಾಗುವ ಮುನ್ನವೇ ಕಟ್ಟಡ ಕುಸಿದಿರುವುದು ಹಾಗೂ ಟೀ ಅಂಗಡಿಯ ನೀಡಿದ ಮುನ್ನೆಚ್ಚರಿಕೆಯಿಂದ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದಂತಾಗಿದೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ವಸತಿ ಉದ್ದೇಶಕ್ಕಾಗಿ ಮನೆ ಪರವಾನಗಿ ಪಡೆದು ಮಸೀದಿ ನಿರ್ಮಾಣದ ಆರೋಪ; ಸ್ಥಳೀಯರಿಂದ ದೂರು ದಾಖಲು

ಕಳೆದ 30 ವರ್ಷಗಳಿಂದ ಕಾಫಿ, ಟೀ ಅಂಗಡಿ ನಡೆಸುತ್ತಿರುವ ಆದಮ್ ಅವರು ಸುತ್ತಮುತ್ತಲಿನ ಸರ್ಕಾರಿ ಕಚೇರಿಗಳಿಗೆ ಟೀ ಹಾಗೂ ಕಾಫಿ ಪೂರೈಸುತ್ತಾ ಬಂದಿದ್ದಾರೆ. ಕಟ್ಟಡದ ಸ್ಥಿತಿಯನ್ನು ಚೆನ್ನಾಗಿ ಅರಿತಿದ್ದ ಅವರು ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿರುವುದನ್ನು ಗಮನಿಸಿ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿ ಎಚ್ಚರಿಕೆ ನೀಡಿದರು. ಇದರ ಪರಿಣಾಮವಾಗಿ ಏಳು ಸಿಬ್ಬಂದಿಯ ಜೀವಗಳೊಂದಿಗೆ ಕಚೇರಿಯಲ್ಲಿದ್ದ ಎಲ್ಲಾ ದಾಖಲೆಗಳು ಸುರಕ್ಷಿತವಾಗಿ ಉಳಿದವು.

ಇದನ್ನೂ ಓದಿ: ಅಂಜನಾದ್ರಿ, ಗೋಕಾಕ್, ಮಧುಗಿರಿ ಸೇರಿದಂತೆ ರಾಜ್ಯದ 13 ಕಡೆಯಲ್ಲಿ ರೋಪ್‌ವೇ: ಜಾರ್ಜ್

PREV
Read more Articles on
click me!

Recommended Stories

ವಸತಿ ಉದ್ದೇಶಕ್ಕಾಗಿ ಮನೆ ಪರವಾನಗಿ ಪಡೆದು ಮಸೀದಿ ನಿರ್ಮಾಣದ ಆರೋಪ; ಸ್ಥಳೀಯರಿಂದ ದೂರು
Bengaluru: ಹೆಬ್ಬಾಳ ಫ್ಲೈಓವರ್‌ ಕೆಳಗೆ ಅಕ್ರಮ ಪಾರ್ಕಿಂಗ್‌, ಓಣಿಯಂತಿರುವ ಸರ್ವೀಸ್‌ ರಸ್ತೆ