ಮಲೆನಾಡ ಪ್ರತಿಭೆ ಐಎಎಸ್ ಪರೀಕ್ಷೆಯಲ್ಲಿ ರ‍್ಯಾಂಕ್

By Kannadaprabha News  |  First Published Sep 25, 2021, 3:55 PM IST
  •   ಮಲೆನಾಡ ಪ್ರತಿಭೆ ಕೇಂದ್ರ ಲೋಕ ಸೇವಾ ಆಯೋಗದ ಐಎಎಸ್ ಪರೀಕ್ಷೆಯಲ್ಲಿ 752ನೇ ರ‍್ಯಾಂಕ್
  •  ಹಾಸನ ಹೆದ್ದುರ್ಗ ಗ್ರಾಮದ ಕಾಫಿ ಬೆಳೆಗಾರರಾದ ನಂದಿನಿ ಮತ್ತು ವಿಶ್ವನಾಥ್ ಅವರ ಪುತ್ರ ಅಮೃತ್ ಐಎಎಸ್ ನಲ್ಲಿ ರ‍್ಯಾಂಕ್

ಹಾಸನ  (ಸೆ.25):  ಜಿಲ್ಲೆಯ ಮಲೆನಾಡ ಪ್ರತಿಭೆ ಕೇಂದ್ರ ಲೋಕ ಸೇವಾ ಆಯೋಗದ (UPSC) ಐಎಎಸ್ (IAS) ಪರೀಕ್ಷೆಯಲ್ಲಿ 752ನೇ ರ‍್ಯಾಂಕ್ (Rank) ಗಳಿಸುವ ಮೂಲಕ ಹಾಸನ ಜಿಲ್ಲೆಯ ಹೆಸರನ್ನು ಉಜ್ವಲಗೊಳಿಸಿದ್ದಾರೆ. ಜಿಲ್ಲೆಯ ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದ ಕಾಫಿ ಬೆಳೆಗಾರರಾದ ನಂದಿನಿ ಮತ್ತು ವಿಶ್ವನಾಥ್ ಅವರ ಪುತ್ರ ಅಮೃತ್ ಐಎಎಸ್ ನಲ್ಲಿ ರ‍್ಯಾಂಕ್ ಗಳಿಸಿದ್ದಾರೆ. 

ಕಾಫಿ ಬೆಳೆಗಾರರಾದ ವಿಶ್ವನಾಥ್ ಮತ್ತು ನಂದಿನಿ ಅವರ ಮಗ ಅಮೃತ್ ಐಎಎಸ್ ಪರೀಕ್ಷೆಯಲ್ಲಿ 752ನೇ ರ‍್ಯಾಂಕ್ ಗಳಿಸಿ ಜಿಲ್ಲೆಯ ಹೆಸರನ್ನು ಮಿಂಚಿಸಿದ್ದಾನೆ. ಹಾಸನದ (Hassan) ಯುನೈಟೆಡ್ ಶಾಲೆಯಲ್ಲಿ ಏಳನೇ ತರಗತಿ ವತೆಗೆ ವ್ಯಾಸಂಗ ಮಾಡಿದ್ದಾರೆ. 

Tap to resize

Latest Videos

UPSC Results 2020: ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

ನಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ 10ನೇ ತರಗತಿವರೆಗೆ ಓದಿದ್ದಾರೆ. ನಂತರದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ನಂತರ ಬೆಂಗಳೂರಿನ ಸಿಎಂಆರ್ ಐಟಿ ಕಾಲೇಜಿನಲ್ಲಿ ಇನ್‌ಫರ್ಮೇಷನ್ ಸೈನ್‌ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿದ ನಂತರ ಟಿಸಿಎಸ್ ಕಂಪನಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ ನಂತರ ಖಾಸಗಿ ಉದ್ಯೋಗ ಜಿಗುಪ್ಸೆ ಹೊಂದಿ ಸರ್ಕಾರಿ ಸೇವೆ ಸಲ್ಲಿಸಬೇಕು ಎನ್ನುವ ಹಂಬಲದೊಂದಿಗೆ ಸತತ ಮೂರು ವರ್ಷಗಳಿಂದ ಐಎಎಸ್ ಪರೀಕ್ಷೆ ಎದುರಿಸಲು ಯಾವುದೇ ತರಬೇತಿ ಕೇಂದ್ರದ ಮೊರೆ ಹೋಗದೆ ಆನ್‌ಲೈನ್ ನಲ್ಲಿಯೇ ಐಎಎಸ್ ತರಬೇತಿ ಪಡೆದು ಪ್ರಯತ್ನದಲ್ಲಿ ಯಶಸ್ಸು ಪಡೆದಿದ್ದಾರೆ.

ರಾಜ್ಯದ 16 ಮಂದಿ ಐಎಎಸ್‌ ಪಾಸ್‌ : ಕನ್ನಡ ಐಚ್ಛಿಕ ವಿಷಯ ತೆಗೆದುಕೊಂಡಿದ್ದ ಅಕ್ಷಯ್‌ ರಾಜ್ಯಕ್ಕೆ ಪ್ರಥಮ

 ನಮ್ಮ ಮಗ ಇದೇ ಓದಬೇಕು. ಹೀಗೆ ಆಗಬೇಕು ಎಂದು ನಾವು ಯಾವತ್ತೂ ಎಣಿಸಿಲ್ಲ. ಎಲ್ಲಾ ಅವರ ಅದೃಷ್ಟ. ಆತ ಐಎಎಸ್ ಅಧಿಕಾರಿಯಾಗುವುದು ನಮ್ಮ ಸೌಭಾಗ್ಯ. ಸರ್ಕಾರಿ ವ್ಯವಸ್ಥೆಯಲ್ಲಿ ಆತ ಉತ್ತಮ ಜನಸ್ನೇಹಿ ಸೇವೆ ಸಲ್ಲಿಸಲಿ ಎಂದು ಅಮೃತ್ ತಂದೆ ವಿಶ್ವನಾಥ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.  

ರ‍್ಯಾಂಕ್ ಪಡೆದ ಕರ್ನಾಟಕದ ಅಭ್ಯರ್ಥಿಗಳು

ರಾಜ್ಯದಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಐಎಎಸ್‌  (IAS) ಪರೀಕ್ಷೆಗೆ ಹಾಜರಾಗಿದ್ದರು. ಅವರುಗಳಲ್ಲಿ 50ಕ್ಕೂ ಹೆಚ್ಚು ಮಂದಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, 16 ಮಂದಿ ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಸೇರಿದಂತೆ ವಿವಿಧ ಸೇವೆಗಳಿಗೆ ಆಯ್ಕೆಗೊಂಡಿದ್ದಾರೆ.

ಕೆ.ಜೆ.ಅಕ್ಷಯ್‌ಸಿಂಹ-77, ಎಂ.ನಿಶ್ಚಯ್‌ ಪ್ರಸಾದ್‌-130, ಸಿರಿವೆನ್ನೆಲ-204, ಎಂ.ಪಿ.ಶ್ರೀನಿವಾಸ್‌ ಹುಬ್ಬಳ್ಳಿ-235, ಅನಿರುದ್‌ ಆರ್‌. ಗಂಗಾವರಂಟಿ-252, ಡಿ.ಸೂರಜ್‌ -255, ನೇತ್ರಾ ಮೇಟಿ-326, ಮೇಘಾ ಜೈನ್‌-354, ಪ್ರಜ್ವಲ್‌-367, ಸಾಗರ್‌ ಎ.ವಾಡಿ- 385, ನಾಗರಗೊಜೆ ಶುಭಂ-453, ಆರ್‌.ಎನ್‌. ಬಿಂದುಮಣಿ -468, ಶಕೀರ್‌ ಅಹ್ಮದ್‌ ತೊಂಡಿಖಾನ್‌-583, ಎಚ್‌.ಆರ್‌. ಪ್ರಮೋದ್‌ ಆರಾಧ್ಯ- 601, ಕೆ.ಸೌರಭ್‌-725, ವೈಶಾಖ್‌ ಬಗೀ-744, ಎಚ್‌.ಸಂತೋಷ್‌-751.

click me!