ಬಯಲಾಗುತ್ತಾ ಹಾಸನಾಂಬೆಯ ಪವಾಡ ರಹಸ್ಯ ..? ಡಿಸಿ ಹೇಳಿದ್ದೇನು?

By Web DeskFirst Published Oct 16, 2018, 9:20 PM IST
Highlights

ವರ್ಷದ ಹಿಂದೆ ಹಚ್ಚಿದ ದೀಪ ನಂದೊಲ್ಲ,ಹೂ ಬಾಡಲ್ಲ,ಎಡೆ ಹಳಸಲ್ಲ‌ ಎಂಬ ನಂಬಿಕೆಯ ರಹಸ್ಯ ಹೇಳಲು ಒತ್ತಾಯ ಹೇಳಿಬಂದಿದ್ದು, ಇದರ ಸಂಪುರ್ಣ ವಿವರ ಇಲ್ಲಿದೆ.

ಹಾಸನ, [ಅ.16]: ವಿವಾದದ ಸ್ವರೂಪ ಪಡೆದುಕೊಂಡಿರುವ ಹಾಸನದ ಅಧಿದೇವತೆ ಹಾಸನಾಂಬೆ ಪವಾಡ ಬಯಲು ವಿಷಯ, ಇದೀಗ ಜಿಲ್ಲಾಧಿಕಾರಿ ಅಂಗಳಕ್ಕೆ ತಲುಪಿದೆ. 

ಈವರೆಗೂ ಹಾಸನಾಂಬೆಯ ಗರ್ಭಗುಡಿಯಲ್ಲಿ ಉರಿಸಿಟ್ಟ ದೀಪ ಆರುವುದಿಲ್ಲ. ಹೂ ಬಾಡೋದಿಲ್ಲ. ಹಾಗೆಯೇ ನೈವೇದ್ಯ ಹಳಸೋದಿಲ್ಲ ಎಂದು ಜನರಲ್ಲಿ ಮೌಢ್ಯತೆ ಬಿತ್ತಲಾಗಿದೆ. ಇದನ್ನು ಬಯಲು ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಆಶ್ರಯದಲ್ಲಿ ಹಾಸನದ ಪ್ರಗತಿಪರ ಮತ್ತು ಜನಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಹಾಸನಾಂಬೆ ದೇಗುಲದ ಪವಾಡ : ಅರ್ಚಕರು ಬಿಚ್ಚಿಟ್ಟ ಆ ರಹಸ್ಯವೇನು..?

ಹಾಸನಾಂಬೆ ದೇವಾಲಯದಲ್ಲಿ ಪವಾಡ ನಡೆಯುತ್ತಿವೆ ಎಂದು ಸ್ವತಃ ಸರಕಾರವೇ ಕರಪತ್ರ ಹಂಚಿ ಜನರಲ್ಲಿ ಪ್ರಚಾರ ಮಾಡುತ್ತಿದೆ. ಇದು ಬಯಲಾಗಬೇಕು. ಈ ಸಂಬಂಧ ಜಿಲ್ಲಾಧಿಕಾರಿಗೆ ಮತ್ತು ದೇವಾಲಯದ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ.

ನಮ್ಮ ಆಗ್ರಹದಂತೆ ಜಿಲ್ಲಾಡಳಿತ ಸೂಕ್ತ ಸ್ಪಷ್ಟನೆ ನೀಡಬೇಕು. ಇಲ್ಲವಾದ್ರೆ ನಾನು ಕಾನೂನು ಹೋರಾಟಕ್ಕೂ ಸಿದ್ಧ ಎಂದು ಪ್ರಗತಿಪರರು ತಿಳಿಸಿದ್ದಾರೆ. 

ಮನವಿ ಸ್ವೀಕರಿಸಿದ ಉಪ ವಿಭಾಗಾಧಿಕಾರಿ ನಾಗರಾಜ್, ಪ್ರಗತಿಪರರು ನೀಡಿರುವ ಮನವಿಯನ್ನು ಸರಕಾರದ ಗಮನಕ್ಕೆ ತರಲಾಗುವುದು. ಹಾಗೆಯೇ ಹಾಸನಾಂಬೆ ಉತ್ಸವವನ್ನು ಯಾವುದೇ ರೀತಿಯಲ್ಲೂ ಧಕ್ಕೆ ಆಗದಂತೆ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.

click me!