ಹಾಸನದಲ್ಲಿ ಎಣ್ಣೆ ಏಟಲ್ಲಿ 50 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿದ ಕುಡುಕ

Published : Feb 15, 2024, 11:12 AM IST
ಹಾಸನದಲ್ಲಿ ಎಣ್ಣೆ ಏಟಲ್ಲಿ 50 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿದ ಕುಡುಕ

ಸಾರಾಂಶ

ಬಾದಾಮಿಯಿಂದ ಗುಳೆ ಬಂದು ಹಾಸನದ ಇಟ್ಟಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರ ನಡುವೆ ಎಣ್ಣೆ ಏಟಲ್ಲಿ 50 ರೂ.ಗೆ ಆರಂಭವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ಹಾಸನ (ಫೆ.15): ಇಬ್ಬರು ಒಂದೂ ಊರಿನ ಸ್ನೇಹಿತರು. ಇಬ್ಬರೂ ಒಂದೇ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುವವರಾಗಿದ್ದಾರೆ. ನಿನ್ನೆ ಕೂಡ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ರಾತ್ರಿ ಮದ್ಯಪಾನ ಮಾಡಲು ಬಂದಿದ್ದ ವೇಳೆ ಇಬ್ಬರ ನಡುವೆ 50 ರೂ. ವಿಚಾರಕ್ಕೆ ಜಗಳ ಆರಂಭವಾಗಿದೆ. ಹೀಗೆ ಆರಂಭವಾದ ಜಗಳ ಒಬ್ಬ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿದೆ.

ಹೌದು, ಮದ್ಯಪಾನ ಮಾಡುವ ವೇಳೆ ಐವತ್ತು ರೂಪಾಯಿಗೆ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ರಾಮಚಂದ್ರ ಸಂಜೀವಪ್ಪನವರ (42) ಕೊಲೆಯಾದ ವ್ಯಕ್ತಿ ಆಗಿದ್ದಾನೆ. ರುದ್ರಯ್ಯ ಕೊಂಗವಾಡ ಕೊಲೆ ಆರೋಪಿಯಾಗಿದ್ದಾನೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ಅರುವನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಎರಡು ವಾರಗಳ ಹಿಂದೆ ಇಟ್ಟಿಗೆ ಕಾರ್ಖಾನೆಗೆ ಕೂಲಿ ಕೆಲಸಕ್ಕೆ ಬಂದಿದ್ದ ರುದ್ರಯ್ಯ ಹಾಗೂ ರಾಮಚಂದ್ರ ಒಂದೇ ಗ್ರಾಮದವರಾಗಿದ್ದರು.

ಶಿವಮೊಗ್ಗ ಸುಂದರಿ ಸನ್ನಿಧಿಯ ರೀಲ್ಸ್ ನೋಡಿ, ಹಿಂದೆ ಬೀಳುವ ಮಲೆನಾಡು ಯುವಕರೇ ಎಚ್ಚರ!

ಅಂದರೆ, ರುದ್ರಯ್ಯ ಹಾಗೂ ರಾಮಚಂದ್ರ ಅವರು ಬಾಗಲಕೋಟೆ ಜಿಲ್ಲೆ, ಬಾದಾಮಿ ಪಟ್ಟಣದ ಕಳ್ಳಿಪೇಟೆ ಓಣಿಯವರಾಗಿದ್ದಾರೆ. ಕಳೆದ 15 ದಿನಗಳ ಹಿಂದೆ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಬಳಿಯ ಅರುವನಹಳ್ಳಿ ಗ್ರಾಮದ ಕೆಪಿಐ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಇಬ್ಬರೂ ಕುಡಿದ ಮತ್ತಿನಲ್ಲಿ 50 ರೂ. ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ಆರಂಭವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿದಾದ ರುದ್ರಯ್ಯ ತನ್ನ ಸ್ನೇಹಿತ ರಾಮಚಂದ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ರಾಮಚಂದ್ರ ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾನೆ.

ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸ್ಥಳಕ್ಕೆ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂತರ ಸ್ಥಳೀಯರ ನೆರವಿನಿಂದ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತನ ಸಂಬಂಧಿಕರಿಗೆ ಮಾಹಿತಿ ರವಾನಿಸಲಾಗಿದ್ದು, ಅವರಿಗೆ ಮೃತ ದೇಹವನ್ನು ರವಾನಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಚನ್ನಪಟ್ಟಣದಲ್ಲಿ 500 ರೂ.ಗೆ ಕೊಲೆ:
ಚನ್ನಪಟ್ಟಣ(ಫೆ.15):  
ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನ ಜೇಬಿನಲಿದ್ದ 500 ರು.ಗಾಗಿ ಕೊಲೆಮಾಡಿ ಪರಾರಿಯಾಗಿದ್ದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕನಕಪುರ ತಾಲೂಕಿನ ಕಲ್ಲಿಗೌಡನದೊಡ್ಡಿ ಗ್ರಾಮದ ಸ್ವಾಮಿ (27) ಬಂಧಿತ ಆರೋಪಿ. ಕಳೆದ ವಾರ ನಗರದ ಸಾತನೂರು ವೃತ್ತದಲ್ಲಿರುವ ಶ್ರೀ ಕಬ್ಬಾಳಮ್ಮ ಹೋಟೆಲ್ ಹಿಂಭಾಗದ ಬಯಲಿನಲ್ಲಿ ಬಿಹಾರ ಮೂಲದ ಸಂಜೀತ್ ಕುಮಾರ್‌ ಎಂಬ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಅತಿಥಿ ಶಿಕ್ಷಕನ ಕೊಲೆಗೆ ಸಿಕ್ತು ರೋಚಕ ತಿರುವು: ಪ್ರೀತಿಗೊಪ್ಪದ ತಂದೆ ಕೊಲೆಗೆ ಸುಪಾರಿ ಕೊಟ್ಟ ತಾಯಿ-ಮಗಳು

ಫೆ.7ರಂದು ಕೊಲೆ ನಡೆದ ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್ ಗುರುತಿನ ಮೇಲೆ ಮೃತ ವ್ಯಕ್ತಿಯನ್ನು ಗುರುತಿಸಲಾಗಿತ್ತು. ಸಿಸಿ ಕ್ಯಾಮೆರಾ ಫುಟೇಜ್‌ಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಕುಡಿದು ಮತ್ತಿನಲ್ಲಿದ್ದ ಕೊಲೆಯಾದ ಸಂಜೀತ್ ಕುಮಾರ್‌ಗೆ ಮಲಗಲು ಬಯಲಿನ ಜಾಗ ತೋರಿಸಿದ ಸ್ವಾಮಿ, ಆತ ಮಲಗಿದ ಮೇಲೆ ಕಲ್ಲು ಎತ್ತಿಹಾಕಿ, ಜೇಬಿನಲಿದ್ದ 500 ರು. ಎತ್ತಿಕೊಂಡು ಪರಾರಿಯಾಗಿದ್ದು ಪೊಲೀಸರು ಕಾರ್ಯಾಚರಣೆ ವೇಳೆ ತಿಳಿದುಬಂದಿದ್ದು, ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಇದೇ ಆರೋಪಿ ನಗರದ ಕುರುಬರ ಹಾಸ್ಟೆಲ್ ಬಳಿ ಇರುವ ಗಣೇಶನ ದೇವಸ್ಥಾನದ ಹುಂಡಿಯನ್ನು ಒಡೆದು ಹಣ ದೋಚಿದ್ದನ್ನು ಸಹ ತನಿಖಾ ತಂಡ ಪತ್ತೆ ಹೆಚ್ಚಿದೆ.

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು