ಮಲೆನಾಡಿನ ಹಿಂದೂ ಪರ ಸಂಘಟನೆ ಯುವಕ ಹರ್ಷನ ಕೊಲೆಗೆ ಇಡೀ ಸಮಾಜವೇ ಕಣ್ಣೀರು ಹಾಕಿತ್ತು. ಆ ಕುಟುಂಬಕ್ಕೆ ಆಧಾರವಾಗಿದ್ದ ಯುವಕ ಹತ್ಯೆಗೆ ಇಡೀ ಹಿಂದೂ ಸಮಾಜ ಆಕ್ರೋಶವನ್ನು ಹೊರಹಾಕಿತ್ತು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.01): ಮಲೆನಾಡಿನ ಹಿಂದೂ ಪರ ಸಂಘಟನೆ ಯುವಕ (Hindu Activist) ಹರ್ಷನ ಕೊಲೆಗೆ (Harsha Murder) ಇಡೀ ಸಮಾಜವೇ ಕಣ್ಣೀರು ಹಾಕಿತ್ತು. ಆ ಕುಟುಂಬಕ್ಕೆ ಆಧಾರವಾಗಿದ್ದ ಯುವಕ ಹತ್ಯೆಗೆ ಇಡೀ ಹಿಂದೂ ಸಮಾಜ ಆಕ್ರೋಶವನ್ನು ಹೊರಹಾಕಿತ್ತು. ಹರ್ಷನ ಕುಟುಂಬಕ್ಕೆ ಸರ್ಕಾರ, ವಿವಿಧ ಸಂಘಸಂಸ್ಥೆಗಳು, ರಾಜಕಾರಣಿಗಳು, ದಾನಿಗಳು ಧನ ಸಹಾಯವನ್ನು ಮಾಡಿದ್ದರು. ಆ ಮೂಲಕ ಹರ್ಷನ ಕುಟುಂಬಕ್ಕೆ ಆಸರೆಯಾಯಿತು. ಇದೀಗ ಹರ್ಷನ ಅಕ್ಕ ಅಶ್ವಿನಿ (Ashwini) ಮಾಡಿರುವ ಕೆಲಸವೂ ಮೆಚ್ಚುವಂತದ್ದು.
undefined
ವಿಶ್ವನಾಥ್ ಶೆಟ್ಟಿ ಮಗನ ಓದಿನ ಜವಾಬ್ದಾರಿ ವಹಿಸಿಕೊಂಡ ಅಶ್ವಿನಿ: ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ ಸಹೋದರಿ 2015ರಲ್ಲಿ ಶಿವಮೊಗ್ಗದಲ್ಲಿ ಕೊಲೆಯಾಗಿದ್ದ ಮತ್ತೋರ್ವ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿಯ (Vishwanath Shetty) ಮಗ ಯಶಸ್ ಓದಿನ ಜವಾಬ್ದಾರಿಯನ್ನ (Education Responsibility) ವಹಿಸಿಕೊಂಡಿದ್ದಾರೆ. ಯಶಸ್ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ಮೃತ ವಿಶ್ವನಾಥ್ ಶೆಟ್ಟಿ ಪತ್ನಿಯ ತಾಯಿಯ ಜೊತೆ ಇದ್ದು, ಕೊಪ್ಪದಲ್ಲೇ 8ನೇ ತರಗತಿ ಓದುತ್ತಿದ್ದಾನೆ. 2015ರ ಫೆಬ್ರವರಿ 19ರಂದು ಶಿವಮೊಗ್ಗದಲ್ಲಿ ನಡೆದ ಪಿ.ಎಫ್.ಐ ಸಮಾವೇಶ ಮುಗಿಸಿಕೊಂಡು ಹೋಗುವಾಗ ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪ ದುಷ್ಕರ್ಮಿಗಳು ವಿಶ್ವನಾಥ್ ಶೆಟ್ಟಿಯನ್ನ ಕೊಲೆ ಮಾಡಿದ್ದರು.
Shivamogga: ಹರ್ಷನ ಹೆಸರಲ್ಲಿ ನಡೆಯಲಿದೆ ಸಮಾಜ ಸೇವೆ: ಸಮಾಜದಿಂದ ಬಂದಿದ್ದು ಸಮಾಜಕ್ಕೆ ಮುಡಿಪು..!
ವಿಶ್ವನಾಥ್ ಶೆಟ್ಟಿ ಸಾವಿನ ಕೆಲ ತಿಂಗಳ ಬಳಿಕ ಪತ್ನಿ ಕೂಡ ಸಾವನ್ನಪ್ಪಿದ್ದರು. ವಿಶ್ವನಾಥ್ ಶೆಟ್ಟಿಯ ಮಗ ಯಶಸ್ ಅಪ್ಪ-ಅಮ್ಮ ಇಬ್ಬರೂ ಇಲ್ಲದೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಅಜ್ಜಿಯ ಜೊತೆ ವಾಸವಿದ್ದನು. ಇಂದು ಅವರ ಮನೆಗೆ ಭೇಟಿ ನೀಡಿದ ಮೃತ ಹರ್ಷ ಸಹೋದರೆ ಅಶ್ವಿನಿ ಆ ಬಾಲಕ ಓದಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವನ ಓದಿನ ಜೊತೆ ಬೇರೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ನಾನೇ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ನಿಮಗೆ ಏನಾದರೂ ಬೇಕಾದರೆ ನನಗೆ ಕರೆ ಮಾಡಿ. ಅಜ್ಜಿ ಹಾಗೂ ಯಶಸ್ ಅವರ ಇಬ್ಬರ ಜವಾಬ್ದಾರಿ ನನ್ನದು ಎಂದು ಹೇಳಿದ್ದಾರೆ. ವಿಶ್ವನಾಥ್ ಶೆಟ್ಟಿ ಪತ್ನಿಯ ತಂಗಿ ಕೂಲಿ ಕೆಲಸ ಮಾಡಿಕೊಂಡು ಯಶಸ್ ಹಾಗೂ ಅಜ್ಜಿಯನ್ನ ನೋಡಿಕೊಳ್ಳುತ್ತಿದ್ದರು.
ನಟ ಭಯಂಕರ ತಂಡದಿಂದ ವಿಶ್ವನಾಥ್ ಶೆಟ್ಟಿ ಕುಟುಂಬಕ್ಕೆ ಚೆಕ್ ಕೊಟ್ಟ ಪ್ರಥಮ್: ಬಿಗ್‌ಬಾಸ್ ವಿನ್ನರ್ ಹಾಗೂ ನಟ ಪ್ರಥಮ್ ಅವರು ಮತ್ತೊಮ್ಮೆ ತಮ್ಮ ಮಾನವೀತೆ ಮೆರೆದಿದ್ದಾರೆ. ಶಿವಮೊಗ್ಗ ನಗರದಲ್ಲಿ 2015ರಲ್ಲಿ ನಡೆದ ಕೋಮುಗಲಭೆಯಲ್ಲಿ ಸಾವು ಕಂಡ ವಿಶ್ವನಾಥ ಶೆಟ್ಟಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ಆ ಮೂಲಕ ಹೆತ್ತ ಮಗನನ್ನು ಕಳೆದುಕೊಂಡು ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ವಿಶ್ವನಾಥ್ ಶೆಟ್ಟಿ ತಾಯಿಗೆ ಧೈರ್ಯ ತುಂಬಿದ್ದಾರೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತನ ಸಾವಿನ ಹಿನ್ನೆಲೆಯಲ್ಲಿ ವಿಶ್ವನಾಥ್ ಶೆಟ್ಟಿ ಸಾವಿನ ಪ್ರಕರಣವೂ ಸದ್ದು ಮಾಡಿತು.
ಈ ಸುದ್ದಿ ತಿಳಿದ ನಟ ಪ್ರಥಮ್ ಅವರು ಶಿವಮೊಗ್ಗ ನಗರಕ್ಕೆ ಹೋಗಿ ವಿಶ್ವನಾಥ್ ಶೆಟ್ಟಿ ಅವರ ತಾಯಿಯನ್ನು ಭೇಟಿ ಮಾಡಿ ಅವರ ಕಷ್ಟವನ್ನು ಕಣ್ಣಾರೆ ನೋಡಿ ಅವರಿಗೆ ತಮ್ಮ ‘ನಟಭಯಂಕರ’ ಚಿತ್ರತಂಡದಿಂದ ಆರ್ಥಿಕ ನೆರವು ನೀಡಿದ್ದಾರೆ. ವಿಶ್ವನಾಥ್ ಶೆಟ್ಟಿ ಕುಟುಂಬಕ್ಕೆ ನೆರವು ನೀಡಿರುವ ಪ್ರಥಮ್ ಅವರನ್ನು ಮೆಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳನ್ನು ಹೆಚ್ಚಿಕೊಂಡಿದ್ದಾರೆ. ‘ಹರ್ಷ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಎಂದು ನಾನು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡೆ. ಈ ಸಮಯದಲ್ಲಿ ಮಾಧ್ಯಮ ಮಿತ್ರರು ನನ್ನ ಸಂಪರ್ಕಿಸಿ. ಇದೇ ರೀತಿಯ ಗಲಭೆಯಲ್ಲಿ ತುಂಬಾ ಹಿಂದೆ ವಿಶ್ವನಾಥ್ ಶೆಟ್ಟಿ ಎಂಬುವವರು ಸಾವು ಕಂಡಿದ್ದರು. ಅವರ ಮನೆಯಲ್ಲಿ ತುಂಬಾ ಕಷ್ಟ ಇದೆ.
Harsha Murder Case: ಆರೋಪಿಗಳ ವಿರುದ್ಧ ‘ಉಗ್ರ’ ಕಾಯ್ದೆ ಕೇಸ್ ದಾಖಲು
ಏನಾದರೂ ಅವರಿಗೆ ಸಹಾಯ ಮಾಡಿ ಅಂತ ಹೇಳಿದರು. ಹೀಗಾಗಿ ಕೆಲ ದಿನ ಬಿಟ್ಟು ನಾನು ವಿಶ್ವನಾಥ್ ಶೆಟ್ಟಿ ಅವರ ಮನೆಗೆ ಹೋದೆ. ವಯಸ್ಸಾದ ತಾಯಿ, ತಂದೆಯನ್ನು ಕಳೆದುಕೊಂಡ ವಿಶ್ವನಾಥ್ ಶೆಟ್ಟಿ ಮಗಳನ್ನು ನೋಡಿದೆ. ಮಳೆ, ಗಾಳಿಗೂ ನಿಲ್ಲದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೂಡಲೇ ನಮ್ಮ ‘ನಟ ಭಯಂಕರ’ ಚಿತ್ರತಂಡದಿಂದ 50 ಸಾವಿರ ರೂಪಾಯಿ ಚೆಕ್ ಕೊಟ್ಟು, ಇದನ್ನು ವಿಶ್ವನಾಥ್ ಶೆಟ್ಟಿ ಮಗು ಹೆಸರಿಗೆ ಎಫ್‌ಡಿ ಮಾಡುವಂತೆ ಹೇಳಿ ಬಂದಿರುವೆ. ಸಿನಿಮಾ ಬಿಡುಗಡೆ ಆದ ಮೇಲೆ ಆ ಕುಟುಂಬಕ್ಕೆ ಮತ್ತಷ್ಟು ನೆರವು ನೀಡಲಿದ್ದೇನೆ. ಸಾಧ್ಯವಾದರೆ ಬೇರೆಯವರು ಕೂಡ ಆ ಕುಟುಂಬಕ್ಕೆ ನೆರವು ನೀಡಿ’ ಎಂದು ಪ್ರಥಮ್ ಮನವಿ ಮಾಡಿಕೊಂಡಿದ್ದಾರೆ.