ಕೊಡಗು: ಸೋರಿಕೆಯಿಲ್ಲದೆ ಕೃಷಿ ಭೂಮಿಗೆ ಹರಿಯಲಿದೆಯಾ ಹಾರಂಗಿ ನೀರು?

By Girish Goudar  |  First Published Jun 6, 2024, 10:05 PM IST

ಹಾರಂಗಿ ಜಲಾಶಯದಿಂದ ಆರಂಭಿಸಿ 6.87 ಕಿಲೋಮೀಟರ್ ವರೆಗೆ ದುರಸ್ಥಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಕೊಡಗು ಜಿಲ್ಲೆ 4 ಸಾವಿರ ಎಕರೆ ಪ್ರದೇಶದ ನೂರಾರು ರೈತರಿಗೆ ಇನ್ನು ಮುಂದೆ ಸರಿಯಾಗಿ ನೀರು ಹರಿಯಲಿದೆ. ಇದರಿಂದ ಕೊಡಗಿನ ನೂರಾರು ರೈತರು ಇನ್ಮುಂದೆ ಖುಷಿಯಾಗಿ ಬೆಳೆ ಬೆಳೆಯಬಹುದು ಎನ್ನುವ ವಿಶ್ವಾಸದಲ್ಲಿ ಇದ್ದಾರೆ. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಜೂ.06): ಹಾರಂಗಿ ಜಲಾಶಯದ ಎಡದಂಡೆ ನಾಲೆ ಸಂಪೂರ್ಣ ಶಿಥಿಲಗೊಂಡು ಭಾರೀ ಪ್ರಮಾಣದಲ್ಲಿ ನೀರು ಸೋರಿಕೆಯಾಗಿ ರೈತರು ಕೃಷಿ ಮಾಡಲು ನೀರೇ ಇಲ್ಲವಂತಾಗಿತ್ತು. ಆದರೀಗ ನಾಲೆಯ ಲೈನ್ ದುರಸ್ಥಿ ಕಾಮಗಾರಿ ಮಾಡುತ್ತಿರುವುದು ಕೊಡಗು ಸೇರಿದಂತೆ ಅಕ್ಕಪಕ್ಕದ ಮೂರು ಜಿಲ್ಲೆಗಳ ಸಾವಿರಾರು ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. 

Latest Videos

undefined

ಹೌದು ಕೊಡಗು ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶದ ವಿಶಿಷ್ಠ ಜಿಲ್ಲೆಯಾಗಿದ್ದು ಇಲ್ಲಿರುವ ಏಕೈಕ ಹಾರಂಗಿ ಜಲಾಶಯ ಅರೆಮಲೆನಾಡಿನಂತಿರುವ ಉತ್ತರ ಕೊಡಗಿನ ಭಾಗದ ರೈತರು ಹಾಗೂ ಪಕ್ಕದ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಕೃಷಿಕರಿಗೆ ವರದಾನವೆಂದೇ ಭಾವಿಸಲಾಗಿತ್ತು. 40 ವರ್ಷಗಳ ಹಿಂದೆ ಮಾಡಿದ್ದ ಜಲಾಶಯದ ಎಡದಂಡೆ ನಾಲೆಯು ಮಾತ್ರ ಸಂಪೂರ್ಣ ಶಿಥಿಗೊಂಡು ರೈತರ ಭೂಮಿಗೆ ನೀರು ತಲುಪುತ್ತಿರಲೇ ಇಲ್ಲ. ಹೀಗಾಗಿ ಜಲಾಶಯವಿದ್ದರೂ ಸಾವಿರಾರು ಕೃಷಿಕರು ವ್ಯವಸಾಯಕ್ಕೆ ನೀರಿಲ್ಲದೆ ನಿರಾಸೆಗೊಂಡಿದ್ದರು. ಜಲಾಶಯ ಭರ್ತಿಯಾಗಿ ಕಾಲುವೆಗಳಲ್ಲಿ ನೀರು ಹರಿಸಿದರೂ ಶಿಥಿಲಗೊಂಡ ಕಾಲುವೆಯಲ್ಲಿ ಎತೇಚ್ಚ ಪ್ರಮಾಣದ ನೀರು ಸೋರಿಕೆಯಾಗುತಿತ್ತು. ಇನ್ನು ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ಕಾಲುವೆಯಿಂದ ಹೊರಕ್ಕೆ ಹರಿದು ರೈತರ ಭೂಮಿಗಳಿಗೆ ನುಗ್ಗಿಬಿಡುತಿತ್ತು. ಇದರಿಂದ ಎಷ್ಟೋ ರೈತರ ಭೂಮಿಯ ಬೆಳೆ ಕೊಚ್ಚಿ ಹೋಗಿರುವ ಘಟನೆಗಳು ನಡೆಯುತ್ತಿದ್ದವು. ಆದರೀಗ ಸರ್ಕಾರದಿಂದ 42 ಕೋಟಿ ರೂಪಾಯಿ ಬಿಡುಗಡೆಗೊಂಡು ಕಾಲುವೆ ಲೈನ್ ದುರಸ್ಥಿ ಕಾಮಗಾರಿ ನಡೆಯುತ್ತಿದೆ.

MYSURU LOK SABHA CONSTITUENCY : ಗೆಲ್ಲುವ ಮುನ್ನವೇ ಸಂಸದ ಯದುವೀರ್ ಒಡೆಯರ್ ನಾಮಫಲಕಕ್ಕೆ ಪೂಜೆ ಸಲ್ಲಿಕೆ

ಹಾರಂಗಿ ಜಲಾಶಯದಿಂದ ಆರಂಭಿಸಿ 6.87 ಕಿಲೋಮೀಟರ್ ವರೆಗೆ ದುರಸ್ಥಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಕೊಡಗು ಜಿಲ್ಲೆ 4 ಸಾವಿರ ಎಕರೆ ಪ್ರದೇಶದ ನೂರಾರು ರೈತರಿಗೆ ಇನ್ನು ಮುಂದೆ ಸರಿಯಾಗಿ ನೀರು ಹರಿಯಲಿದೆ. ಇದರಿಂದ ಕೊಡಗಿನ ನೂರಾರು ರೈತರು ಇನ್ಮುಂದೆ ಖುಷಿಯಾಗಿ ಬೆಳೆ ಬೆಳೆಯಬಹುದು ಎನ್ನುವ ವಿಶ್ವಾಸದಲ್ಲಿ ಇದ್ದಾರೆ. 

ಕೊಡಗಿನ ರೈತರಿಗೆ ಅಷ್ಟೇ ಅಲ್ಲ ಕೊಡಗು ಜಿಲ್ಲೆಯಲ್ಲಿ ಬರೋಬ್ಬರಿ 6.87 ಕಿಲೋಮೀಟರ್ ದೂರದವರೆಗೆ ನೀರು ಪೋಲಾಗದೆ ಸರಿಯಾಗಿ ಹರಿಯುವುದರಿಂದ ಅಲ್ಲಿಂದ ಮುಂದೆಯೂ ತುಂಬಾ ದೂರದವರೆಗೆ ನೀರು ಸರಾಗವಾಗಿ ಮತ್ತು ನಾಲೆಯ ಕೊನೆ ಭಾಗದ ಕಾಲುವೆಗಳ ವರೆಗೆ ಹರಿಯುವ ಸಾಧ್ಯತೆ ಇದೆ. ಇದರಿಂದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕುಗಳ ಸಾವಿರಾರು ರೈತರ ಕೃಷಿಗೆ ನೀರು ಸಿಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. 

ಲಿಂಗಾಯತ, ಒಕ್ಕಲಿಗರ ತಾಳಕ್ಕೆ ತಕ್ಕಂತೆ ಸಿಎಂ ಸಿದ್ದರಾಮಯ್ಯ ಕುಣಿಯುತ್ತಿದ್ದಾರೆ: ನಟ ಚೇತನ್

ಈ ಕುರಿತು ಮಾತನಾಡಿರುವ ರೈತ ಗಣೇಶ್ ಅವರು ನಾಲೆಗಳ ದುರಸ್ಥಿ ಕಾಮಗಾರಿ ಮಾಡುತ್ತಿರುವುದು ಖುಷಿಯ ವಿಚಾರ. ನಾಲೆ ಶಿಥಿಲಗೊಂಡಿದ್ದರಿಂದ ನೀರು ಬಿಟ್ಟರೂ ಕಾಲುವೆ ತೂಬುಗಳಿಗೆ ನೀರು ಬರುತ್ತಿರಲಿಲ್ಲ. ಆದರೀಗ ನೀರು ಹರಿಯುವ ವಿಶ್ವಾಸವಿದೆ. ಇದರಿಂದ ಒಳ್ಳೆಯ ಬೆಳೆ ಬೆಳೆಯುವ ಭರವಸೆಯಲ್ಲಿ ಇದ್ದೇವೆ ಎಂದಿದ್ದಾರೆ. ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ 1,34,895 ಎಕರೆ ಪ್ರದೇಶದ ಕೃಷಿ ಭೂಮಿ ಇದ್ದು ಇದರಲ್ಲಿ ಬಹುತೇಕ ಕೃಷಿ ಭೂಮಿಗೆ ನೀರು ಹರಿಯಲಿದೆ ಎನ್ನುವುದು ರೈತರಿಗೆ ಖುಷಿ ತಂದಿದೆ ಎಂದು ತಿಳಿಸಿದ್ದಾರೆ. 

6 ಕಿಲೋ ಮೀಟರ್ ಕಾಲುವೆ ಲೈನ್ ಕಾಮಗಾರಿಯಲ್ಲಿ ಶೇ 80 ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಜೂನ್ ತಿಂಗಳ ಅಂತ್ಯದ ಒಳಗೆ ಪೂರ್ಣ ಕಾಮಗಾರಿ ಮುಗಿಯಲಿದೆ ಎಂದು ಹಾರಂಗಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ತಿಳಿಸಿದ್ದಾರೆ. 

click me!