ಈಗಿನ ರಾಜಕಾರಣ ವ್ಯವಸ್ಥೆ ಹಾಗೂ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸಿರುವುದು ಸಮಾಧಾನ ತಂದಿದೆ ಎಂದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ
ಮದ್ದೂರು(ಜೂ.23): ರಾಜಕೀಯ ನಿವೃತ್ತಿ ನಂತರ ನಾನು ಸಂತೋಷವಾಗಿದ್ದೇನೆ. ಪ್ರಸ್ತುತ ರಾಜಕೀಯ ಪರಿಸ್ಥಿತಿ ನೋಡಿದರೆ ನನ್ನ ನಿರ್ಧಾರ ಸರಿಯಾಗಿದೆ ಎಂದನಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದರು.
ತಾಲೂಕಿನ ಯರಗನಹಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಿನ ರಾಜಕಾರಣ ವ್ಯವಸ್ಥೆ ಹಾಗೂ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸಿರುವುದು ಸಮಾಧಾನ ತಂದಿದೆ ಎಂದರು. ನನ್ನ ಜೀವಮಾನದಲ್ಲಿ ಮುಕ್ಕಾಲು ಭಾಗ ಆಯಸ್ಸನ್ನು ರಾಜಕಾರಣಕ್ಕೆ ಮೀಸಲಾಗಿಟ್ಟಿದ್ದೆ. ಈಗಿನ ಬೆಳವಣಿಗೆ ನೋಡಿದರೆ ನಮ್ಮ ಕಾಲದ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಕುರಿತು ಕಾದುನೋಡೋಣ ಎಂದು ಚುಟುಕಾಗಿ ಉತ್ತರಿಸಿದರು.
undefined
ಕೆಜಿಎಫ್ ರೀತಿ ಸುತ್ತಿಗೆಯಿಂದ ಹೊಡೆದು ಮಕ್ಕಳನ್ನು ಕೊಂದ ಅಪ್ಪ
ಕಳೆದ ಚುನಾವಣೆ ವೇಳೆ ಸೋದರ ಎಸ್.ಎಂ.ಶಂಕರ್ ಪುತ್ರ, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಜೆಡಿಎಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಎಸ್.ಎಂ.ಕೃಷ್ಣ, ಗುರುಚರಣ್ ರಾಜಕೀಯ ತೀರ್ಮಾನ ಕೈಗೊಳ್ಳುವಲ್ಲಿ ಸರ್ವ ಸ್ವತಂತ್ರರು. ಹೀಗಾಗಿ ಅವರ ನಿರ್ಧಾರದ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿದೆ. ಅದು ಹಳಿಗೆ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ ಅಂತ ತಿಳಿಸಿದ್ದಾರೆ.