
ಕಾರವಾರ(ಡಿ.2): ಅಳುತ್ತಿರುವ ಮಕ್ಕಳಿಗೆ ಬಲೂನ್ ಕೊಟ್ಟು ತಾಯಂದಿರರು ಸಮಾಧಾನ ಮಾಡೋದನ್ನ ನೋಡಿರುತ್ತೇವೆ. ಅಂಥಾ ತಾಯಂದಿರರು ಎಚ್ಚರಿಕೆ ವಹಿಸಬೇಕಾದಂಥ ಸುದ್ದಿ ಇದು. ಉತ್ತರ ಕನ್ನಡದ ಹಳಿಯಾಳದ ಜೋಗನಕೊಪ್ಪ ಗ್ರಾಮದಲ್ಲಿಬಲೂನು ಊದಲು ಹೋಗಿ 13 ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವು ಕಂಡಿದ್ದಾನೆ. ಬಲೂನು ಊದುವ ವೇಳೆ ಗಂಟಲಲ್ಲಿ ಬಲೂನ್ ಸಿಕ್ಕಿಹಾಕಿಕೊಂಡಿದ್ದು, ಉಸಿರಾಡಲು ಸಾಧ್ಯವಾಗದೇ ಸಾವು ಕಂಡಿದ್ದಾನೆ ಎನ್ನಲಾಗಿದೆ. 13 ವರ್ಷದ ನವೀನ್ ನಾರಾಯಣ ಬೆಳಗಾಂವಕರ ಸಾವಿಗೀಡಾದ ನತದೃಷ್ಟ ಬಾಲಕ ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನವೀನ್ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಬಲೂನ್ ಊದುವಾಗ ಬಾಯಿಯ ಒಳಗೆ ಹೋಗಿ ಗಂಟಲಲ್ಲಿ ಸಿಲುಕಿತ್ತು. ಇದರಿಂದ ಶ್ವಾಸ ತೆಗೆದುಕೊಳ್ಳಲಾಗದೇ ನೆಲಕ್ಕೆ ಬಿದ್ದು ಬಾಲಕ ಒದ್ದಾಡಿದ್ದಾನೆ. ಬಾಲಕನ ಪೋಷಕರು ಬಲೂನು ತೆಗೆಯಲು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಹಳಿಯಾಳದ ಸರಕಾರಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಿದ್ದರೂ, ಅದಾಗಲೇ ಬಾಲಕ ಸಾವು ಕಂಡಿದ್ದ. ಬಾಲಕನ ಸಾವಿನಿಂದ ಮುಗಿಲುಮುಟ್ಟಿದರ ಸಂಬಂಧಿಗಳ ಆಕ್ರಂದನ ಮುಗಿಲುಮುಟ್ಟಿದ್ದು, ಹಳಿಯಾಳ ಪೊಲೀಸರು ಸ್ಥಳಕ್ಕೆ ಭೇಟಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಮಕ್ಕಳು ಹಠ ಹಿಡಿದಾಗ ಅವರಿಗೆ ಚಾಕೋಲೆಟ್, ಬಲೂನ್‌ಗಳನ್ನು ಸಾಮಾನ್ಯವಾಗಿ ತಾಯಂದಿರು ಕೊಡುತ್ತಾರೆ. ಕೆಲವೊಮ್ಮೆ ಇವುಗಳೇ ಮಗುವಿನ ಸಾವಿಗೆ ಕಾರಣವಾಗುವ ಹಲವು ದೃಷ್ಟಾಂತಗಳನ್ನು ಈಗಾಗಲೇ ನೋಡಿದ್ದೇವೆ. 2022ರಲ್ಲಿ ಮಗುವೊಂದು ಚಾಕೋಲೆಟ್ ಗಂಟಲಲ್ಲಿ ಸಿಲುಕಿ ಸಾವು ಕಂಡಿದ್ದ. ತೆಲಂಗಾಣದ ವಾರಂಗಲ್‌ನಲ್ಲಿ ಸಂದೀಪ್ ಸಿಂಗ್ ಎಂಬ 9 ವರ್ಷದ ಬಾಲಕನೊಬ್ಬ ಚಾಕ್ಲೇಟ್ ತಿನ್ನುವಾಗ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿತ್ತು.
ಕಡಲ ತೀರದಲ್ಲಿ ಕುಣಿದು ಕುಪ್ಪಳಿಸಿದ ಸ್ವೀಟಿ ರಾಧಿಕಾ ಕುಮಾರಸ್ವಾಮಿ; ಹಾಡು ಕೇಳಿ ಶಾಕ್ ಆಗ್ಬೇಡಿ..!
ಈ ವರ್ಷದಲ್ಲಿ ಕಾನ್ಪುರದಲ್ಲಿ ನಡೆದ ಘಟನೆಯೊಂದರಲ್ಲಿ ಚೂಯಿಂಗ್‌ಗಮ್ ಗಂಟಲಲ್ಲಿ ಸಿಲುಕಿಕೊಂಡು 4 ವರ್ಷದ ಬಾಲಕ ಸಾವು ಕಂಡಿದ್ದ.ಮಗು ಹತ್ತಿರದ ಅಂಗಡಿಯಿಂದ ಫ್ರೂಟೋಲಾ ಚೂಯಿಂಗ್ ಗಮ್ ಅನ್ನು ಖರೀದಿ ಮಾಡಿತ್ತು.ಇದನ್ನು ಮಗು ತಿನ್ನುತ್ತಿದ್ದಾಗ ಅದು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿತ್ತು. ನಂತರ ಮಗುವಿನ ತಾಯಿ ಮಗುವಿಗೆ ನೀರು ಕುಡಿಸಿದ್ದರಿಂದ ಚೂಯಿಂಗ್ ಗಮ್ ಗಂಟಲಿನ ಕೆಳಕ್ಕೆ ಜಾರಿ ಮಗುವಿಗೆ ಉಸಿರಾಡಲು ಆಗಿರಲಿಲ್ಲ. ತಕ್ಷಣ ಮಗುವಿನ ಕುಟುಂಬದವರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯರಿಗೆ ಮಗುವಿನ ಗಂಟಲಿನಲ್ಲಿ ಸಿಲುಕಿದ ಚೂಯಿಂಗ್ ಗಮ್ ಹೊರಗೆತೆಗೆಯಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ತಂದೆ-ತಾಯಿಯ ಎದುರೇ ಮಗು ಉಸಿರುಕಟ್ಟಿ ಸಾವು ಕಂಡಿತ್ತು.
ಪೊಲೀಸರಿಗೆ ಸಿಕ್ತು ಶೋಭಿತಾ ಶಿವಣ್ಣ ಡೆತ್ ನೋಟ್, ಸ್ಫೋಟಕ ಮಾಹಿತಿ ಬಹಿರಂಗ..