ಆಪರೇಷನ್ ಕಮಲದ ಬಗ್ಗೆ ಪುಸ್ತಕ ಬರೀತಾರಂತೆ ಹಳ್ಳಿ ಹಕ್ಕಿ

Kannadaprabha News   | Asianet News
Published : Feb 01, 2020, 11:52 AM ISTUpdated : Feb 01, 2020, 11:59 AM IST
ಆಪರೇಷನ್ ಕಮಲದ ಬಗ್ಗೆ ಪುಸ್ತಕ ಬರೀತಾರಂತೆ ಹಳ್ಳಿ ಹಕ್ಕಿ

ಸಾರಾಂಶ

ಹಳ್ಳಿ ಹಕ್ಕಿ ನಂತರ ಇದೀಗ ಇನ್ನೊಂದು ಪುಸ್ತಲ ಬಿಡುಗಡೆಗೆ ಸಿದ್ಧರಾಗಿದ್ದಾರೆ ಎಚ್. ವಿಶ್ವನಾಥ್. ಆಪರೇಷನ್‌ ಕಮಲ’ದ ಕುರಿತು ಪುಸ್ತಕ ಬರೆಯುವ ಜತೆಗೆ ಅದರ ಹಿಂದೆ ಯಾರ್ಯಾರು ಇದ್ದಾರೆಂಬುದನ್ನು ದಾಖಲಿಸುತ್ತೇನೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

ಮೈಸೂರು(ಫೆ.01): ‘ಆಪರೇಷನ್‌ ಕಮಲ’ದ ಕುರಿತು ಪುಸ್ತಕ ಬರೆಯುವ ಜತೆಗೆ ಅದರ ಹಿಂದೆ ಯಾರ್ಯಾರು ಇದ್ದಾರೆಂಬುದನ್ನು ದಾಖಲಿಸುತ್ತೇನೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

"

ಕೆ.ಆರ್‌.ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪುಸ್ತಕದಲ್ಲಿ ಎಲ್ಲವನ್ನೂ ದಾಖಲಿಸುವ ಕೆಲಸ ಮಾಡುತ್ತಿದ್ದು, ಅದಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದೇನೆ. ಪುಸ್ತಕದಲ್ಲಿ ಸಮ್ಮಿಶ್ರ ಸರ್ಕಾರದ ಪತನ ಸೇರಿ ಇನ್ನಿತರ ವಿಚಾರಗಳನ್ನು ಜನರ ಮುಂದಿಡುತ್ತೇನೆ ಎಂದಿದ್ದಾರೆ.

ರೈತರಿಗೆ ಸಂತಸದ ಸುದ್ದಿ, ಪಶು ಆಹಾರ ಬೆಲೆ ಇಳಿಕೆ..!

ನಾನು ಬರೆಯುವ ಆಪರೇಷನ್‌ ಕಮಲದ ಪುಸ್ತಕದಲ್ಲಿ ಬಿಜೆಪಿಯವರ ಜತೆಗೆ ಕಾಂಗ್ರೆಸ್‌ನವರ ಪಾತ್ರವನ್ನೂ ಹೊರಗೆಡವಲಿದ್ದೇನೆ. ಬೆಂಗಳೂರಿನಿಂದ ಮುಂಬೈಗೆ ತೆರಳಿದ್ದು, ನಂತರ ಕೋಲ್ಕತಾಗೆ ಹೋಗಿ ಸರ್ಕಾರ ಪತನಕ್ಕೆ ಕಾರ್ಯ ಯೋಜನೆ ಮಾಡಿದ ಬಗ್ಗೆಯೂ ಸಮಗ್ರವಾಗಿ ವಿವರಿಸುತ್ತೇನೆ. ಸದ್ಯದ ಸ್ಥಿತಿಯಲ್ಲಿ ನನಗೆ ಯಾವುದೇ ಪಕ್ಷ ಮತ್ತು ಹೈಕಮಾಂಡ್‌ ಗೊತ್ತಿಲ್ಲ. ನನಗಿರುವ ಭರವಸೆ ಒಂದೇ, ಅದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಮಾತಿನ ಮೇಲಿನ ನಂಬಿಕೆ. ನಮ್ಮ ನಾಯಕರು ಕೊಟ್ಟಮಾತು ಉಳಿಸಿಕೊಳ್ಳುತ್ತಾರೆ ಎಂದರು.

ರಾಜಕಾರಣದಲ್ಲಿ ಕಾಣುವ ಕೈಗಳಿಗಿಂತ ಕಾಣದ ಕೈಗಳೇ ಹೆಚ್ಚಾಗಿದ್ದು, ಅವುಗಳ ನಾಟಕವನ್ನು ಸುಳ್ಳು ಮಾಡಿ ಮುಖ್ಯಮಂತ್ರಿಗಳು ನಮ್ಮೆಲ್ಲರನ್ನು ಕಾಪಾಡುತ್ತಾರೆ. ಮುಖ್ಯಮಂತ್ರಿಗಳು ಸಂಕಷ್ಟಕಾಲವನ್ನು ನೆನೆದುಕೊಂಡು ನಮ್ಮೆಲ್ಲರ ಧ್ವನಿಯಾಗಬೇಕೇ ಹೊರತು ವರಿಷ್ಠರ ಆದೇಶ ಪಾಲಕರಾಗಬಾರದು. ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತಾದೆ. ಹಾಗಾಗಿ ಈ ವಿಚಾರದಲ್ಲಿ ಬಿ.ಎಸ್‌.ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು ದೃಢ ನಿರ್ಧಾರ ಕೈಗೊಳ್ಳಬೇಕು ಎಂದರು.

PREV
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!