ನೂತನ‌ ಶಾಸಕರಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡಿದ್ದೇವೆ: ಹೆಚ್. ವಿಶ್ವನಾಥ್

By Suvarna News  |  First Published Jan 13, 2020, 3:18 PM IST

ನಾಲ್ಕನೇ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಹಾಲುಮತ ಸಮಾಜದ ಮುಖ್ಯ ಪಾತ್ರವೂ ಇದೆ| ಹಾಲುಮತ ಸಮಾಜದ ಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಸೇರಿ ಹಲವು ನಾಯಕರು ನಿಮ್ಮ ಜೊತೆ ಇದ್ದೇವೆ| ಹಾಲುಮತ ಸಮಾಜದಿಂದ ಬಂದ ನಾಲ್ಕು ಜನ ಶಾಸಕರು. ತಮ್ಮ ಸ್ಥಾನ ತೊರೆದು ಸಿಎಂ ಬೆನ್ನು ಹಿಂದೆ ನಿಂತಿದ್ದೇವೆ ಎಂದ ವಿಶ್ವನಾಥ್|


ರಾಯಚೂರು(ಜ.13): ದೆಹಲಿಗೆ ಹೋಗಬೇಕಿದ್ದರೂ ಕೃತಜ್ಞ ಪೂರಕವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಯಡಿಯೂರಪ್ಪ ನಾಲಿಗೆ ಮೇಲೆ ನಿಂತ ನಾಯಕರಾಗಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಿಯತ್ತಿನ ನಾಯಕರಾಗಿದ್ದಾರೆ ಎಂದು ಮಾಜಿ ಶಾಸಕ ಹೆಚ್.ವಿಶ್ವನಾಥ್ ಯಡಿಯೂರಪ್ಪ ಅವರನ್ನ ಹಾಡಿ ಹೊಗಳಿದ್ದಾರೆ. 

ಸೋಮವಾರ ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿಯಲ್ಲಿ ನಡೆಯುತ್ತಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ಕನೇ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಹಾಲುಮತ ಸಮಾಜದ ಮುಖ್ಯ ಪಾತ್ರವೂ ಇದೆ. ಹಾಲುಮತ ಸಮಾಜದ ಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಸೇರಿ ಹಲವು ನಾಯಕರು ನಿಮ್ಮ ಜೊತೆ ಇದ್ದೇವೆ. ಹಾಲುಮತ ಸಮಾಜದಿಂದ ಬಂದ ನಾಲ್ಕು ಜನ ಶಾಸಕರು. ತಮ್ಮ ಸ್ಥಾನ ತೊರೆದು ಸಿಎಂ ಬೆನ್ನು ಹಿಂದೆ ನಿಂತಿದ್ದೇವೆ ಎಂದು ಹೇಳಿದ್ದಾರೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಾಲುಮತ ಆದಿವಾಸಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಬೀದರ್‌ ಹಾಗೂ ಈ ಭಾಗದವರಿಗೆ ಗೊಂಡ, ರಾಜಗೊಂಡ ಎಸ್ಟಿ ಮೀಸಲಾತಿ ನೀಡಬೇಕು. ಮೀಸಲಾತಿ ನೀಡುವಾಗ ಅನೇಕ ದೌರ್ಜನ್ಯಗೊಳಗಾಗುತ್ತಾರೆ. ಈ ಜನರಿಗೆ ಪ್ರಮಾಣಪತ್ರ ನೀಡಬೇಕು. ಹಿಂದಿನ‌ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಆಗಿಲ್ಲ, ಯಡಿಯೂರಪ್ಪ ಅವರು ನೀಡಲಿ ಎಂದು ಹೆಚ್. ವಿಶ್ವನಾಥ ಆಗ್ರಹಿಸಿದ್ದಾರೆ. 

ಇನ್ನು ನೂತನ‌ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಎಲ್ಲರಿಗೂ ಸಚಿವ ಸ್ಥಾನ ನೀಡಲು ನಾವು‌ ಮನವಿ ಮಾಡಿದ್ದೇವೆ. ಎಲ್ಲರಿಗೂ ಸಚಿವ ಸ್ಥಾನ ಸಿಗುತ್ತೆ ಎಂಬ ನಂಬಿಕೆ ಇದೆ. ನಾವು 17 ಜನರು ಒಟ್ಟಾಗಿದ್ದೇವೆ. 17 ಜನರಿಗೂ ಸಚಿವ ಸ್ಥಾನ ನೀಡಲು‌ ಆಗ್ರಹ ಪೂರ್ವಕ ವಿನಂತಿ ಮಾಡಿದ್ದೇವೆ ಎಂದು ಹೇಳಿದ್ದಾರೆ. 
 

click me!