ಹಾಲುಮತ ಉತ್ಸವ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ| ರಾಯಚೂರು ಜಿಲ್ಲೆಯ ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿಯಲ್ಲಿ ನಡೆದ ಹಾಲುಮತ ಉತ್ಸವ| ಹಾಲುಮತ ತಮ್ಮದೇ ಆದ ವಿಶೇಷ ಸಂಸ್ಕೃತಿಯನ್ನು ಹೊಂದಿದೆ|ಹಾಲುಮತ ಜನಾಂಗದ ಅಭಿವೃದ್ಧಿಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುವೆ|
ರಾಯಚೂರು(ಜ.13): ನಾನು ಯಾವುದೇ ಕಾರಣಕ್ಕೂ ಇವತ್ತು ಇಲ್ಲಿಗೆ ಬರೋದು ಇರಲಿಲ್ಲ, ಇಷ್ಟೊತ್ತಿಗೆ ನಾನು ದೆಹಲಿಯಲ್ಲಿ ಇರಬೇಕಾಗಿತ್ತು. ಆದರೆ, ಮಾತು ಕೊಟ್ಟಿದ್ದರಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಾವು ಒಟ್ಟಾಗಿ ಸೇರಿ ಹಾಲುಮತ ಉತ್ಸವವನ್ನು ಉದ್ಘಾಟನೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿಯಲ್ಲಿ ನಡೆದ ಹಾಲುಮತ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಾಲುಮತ ತಮ್ಮದೇ ಆದ ವಿಶೇಷ ಸಂಸ್ಕೃತಿಯನ್ನು ಹೊಂದಿದೆ. ಕನಕದಾಸರು ಹಾಲುಮತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಲುಮತ ಜನಾಂಗದವರು ಸಾಮಾಜಿಕವಾಗಿ ಹಿಂದುಳಿದಿದ್ದು, ತಮ್ಮ ಬೇಡಿಕೆಯಲ್ಲಿ ಆದಿವಾಸಿ ನಿಗಮ ಮಂಡಳಿ ಸ್ಥಾಪಿಸಲು ಮನವಿ ಮಾಡಿದ್ದೀರಿ, ಸಚಿವ ಸಂಪುಟದ ಸದಸ್ಯರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಈ ಜನಾಂಗದ ಅಭಿವೃದ್ಧಿ ಗೆ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆ. ಹಾಲುಮತ ಜನಾಂಗದ ಅಭಿವೃದ್ಧಿಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ತಿಳಿಸಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಿಮಗೆ ಗೊತ್ತಿದೆ ಈ ಬಾರಿ ಕಂಡರಿಯದ ಭೀಕರ ಪ್ರವಾಹ ಎದುರಾಗಿತ್ತು. ಪ್ರವಾಹದಿಂದ 3 ಲಕ್ಷ ಮನೆಗಳು ನೆಲಸಮವಾಗಿದ್ದವು. 500 - 600 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿ, 5 ರಿಂದ 6 ಲಕ್ಷ ಹೆಕ್ಟೇರ್ ನೀರಾವರಿ ಜಮೀನು ನಾಶವಾಗಿತ್ತು. ಈ ಎಲ್ಲದಕ್ಕೂ ಪರಿಹಾರ ಒದಗಿಸಲು ನಾನು ಶ್ರಮಿಸುತ್ತಿದ್ದೇನೆ. ಅಭಿವೃದ್ಧಿ ಕಾರ್ಯಕ್ರಮಗಳ ಕಡೆಗೆ ಗಮನ ನೀಡಲು ಆಗದೇ, ಅತಿವೃಷ್ಟಿ ಕಡೆಯೇ ಗಮನ ನೀಡುವುದು ಆಗಿದೆ. ಮಾರ್ಚ್ ಬಳಿಕ ಹಣಕಾಸಿನ ಸುಧಾರಣೆ ಆಗಬಹುದು ಅಂತ ನಾನು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.