ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಪರಾಭವಗೊಂಡ ಎಚ್ ವಿಶ್ವನಾಥ್ ತಮ್ಮ ಸೋಲಿಗೆ ಕೆಲ ಬಿಜೆಪಿ ನಾಯಕರು ಕಾರಣ ಎಂದು ಹೇಳಿದ್ದಾರೆ.
ಹುಣಸೂರು [ಡಿ.19]: ಹುಣಸೂರು ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯೇ ಮಾರಾಟವಾಗಿದ್ದರು ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣೆ ಬಳಿಕ ಇಂದು ಹುಣಸೂರಿನಲ್ಲಿ ಕೃತಜ್ಞತಾ ಸಭೆ ನಡೆಸಿ ಮಾತನಾಡಿದ ವಿಶ್ವನಾಥ್, ನನ್ನನ್ನು ಮಾರಿಕೊಂಡವನು ಎನ್ನುತ್ತೀರಿ. ಪಾಪ ಜೆಡಿಎಸ್ ಅಭ್ಯರ್ಥಿಯಾಗಿ ಹುಣಸೂರಿನಲ್ಲಿ ಕಣಕ್ಕೆ ಇಳಿದಿದ್ದಸೋಮಶೇಖರ್ ಅವರನ್ನು ಕಾಂಗ್ರೆಸಿಗೆ ಮಾರಾಟ ಮಾಡಿದವರು ಯಾರು. ಅವನನ್ನು ಕಾಂಗ್ರೆಸಿಗೆ ಮಾರಿದ್ದರು ಎಂದು ವಿಶ್ವನಾಥ್ ಹೇಳಿದರು.
ಜೆಡಿಎಸ್ ನವರು ರಾಜ್ಯ ಮಾರಿದರು. ಜಾತಿಯನ್ನು ಮಾರಿದ್ದೀರಿ, ಒಕ್ಕಲಿಗ ವಿರೋಧಿ ನಾನೋ ನೀವೋ ಹೇಳಿ ಎಂದು ವಿಶ್ವನಾಥ್ ಜೆಡಿಎಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜರಾಜೇಶ್ವರಿ ಕ್ಷೇತ್ರದ ಬೈ ಎಲೆಕ್ಷನ್ ಮತ್ತಷ್ಟು ವಿಳಂಬ: ಚಿಂತೆಗೀಡಾದ ಮುನಿರತ್ನ...
ಉಪಚುನಾವಣೆಯಲ್ಲಿ ನನ್ನ ಸೋಲಿಗೆ ಕೆಲ ಬಿಜೆಪಿ ನಾಯಕರೂ ಕಾರಣ. ನನ್ನನ್ನು ಸೋಲಿಸಲು ಕೆಲ ಬಿಜೆಪಿ ನಾಯಕರು ಸೇರಿಕೊಂಡರು. ಕಾಂಗ್ರೆಸ್, ಜೆಡಿಎಸ್ ನಾಯಕರು ಒಟ್ಟಾದರು. ಈಗ ನಾನು ಇದೆಲ್ಲವನ್ನೂ ಅನಿವಾರ್ಯವಾಗಿ ಹೇಳಲೇಬೇಕಿದೆ ಎಂದು ವಿಶ್ವನಾಥ್ ಹೇಳಿದರು.
ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳ್ಲಿ ಬಿಜೆಪಿ ಜಯಗಳಿಸಿದ್ದು, ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿದ್ದರು. ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಜಯಗಳಿಸಿದ್ದು, ಬಿಜೆಪಿ ಅಭ್ಯರ್ಥಿಯಾಗಿದ್ದ ವಿಶ್ವನಾಥ್ ಪರಾಭವಗೊಂಡಿದ್ದರು.