ಜೆಡಿಎಸ್ ಮುಖಂಡಗೆ ಬಿಜೆಪಿಗೆ ಆಹ್ವಾನ : BSY ವಿರುದ್ಧ ವಿಶ್ವನಾಥ್ ಕಿಡಿ

By Kannadaprabha NewsFirst Published Jan 21, 2021, 9:40 AM IST
Highlights

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಚ್. ವಿಶ್ವನಾಥ್. ಅಲ್ಲದೇ ಜೆಡಿಎಸ್ ಮುಖಂಡರನ್ನು ಅವರು ಬಿಜೆಪಿ ಆಹ್ವಾನಿಸಿದ್ದಾರೆ. 

ಮೈಸೂರು (ಜ.21):  ಸಂಪುಟ ವಿಸ್ತರಿಸಿರುವುದರಲ್ಲಿ ಹೈಕಮಾಂಡ್‌ ಪಾತ್ರ ಇಲ್ಲ. ಅದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪರಮಾಧಿಕಾರ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಆಗಿರುವುದು ಸಿಎಂ ಪರಮಾಧಿಕಾರದಿಂದ ಸಿಎಂಗೆ ಸಂಪುಟ ರಚಿಸುವ ವಿಸ್ತರಿಸುವ ಅಧಿಕಾರ ಇದೆ. ಇದರಲ್ಲಿ ಹೈ ಕಮಾಂಡ್‌ ಪಾತ್ರ ಏನು ಇಲ್ಲ. ಯಡಿಯೂರಪ್ಪ ಸುಮ್ಮನೇ ಹೈಕಮಾಂಡ್‌ ಅಂತಾ ತೋರಿಸುತ್ತಿದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

'ಯತ್ನಾಳ್‌, ವಿಶ್ವನಾಥ್‌ ಮೆಂಟಲ್‌ ಕೇಸ್‌ಗಳು, ಪಕ್ಷದಿಂದ ಉಚ್ಚಾಟಿಸಿ' ..

ಹೈಕಮಾಂಡ್‌ಗೆ ರಾಜ್ಯದ ವಿಚಾರ ಏನು ಗೊತ್ತಿಲ್ಲ. ಯೋಗೇಶ್ವರ್‌ಗೆ ಮೈಸೂರು ಏಕೆ ರಾಜ್ಯದ ಉಸ್ತುವಾರಿನೇ ನೀಡಿ. ಎಲ್ಲಾ ಕಡೆ ಮೆಗಾಸಿಟಿ ಮಾಡುತ್ತಾರೆ. ಇಲ್ಲಿ ಬಂದು ಇನ್ನೊಂದು ಮೆಗಾಸಿಟಿ ಮಾಡಿ ಇನ್ನು ಸ್ವಲ್ಪ ಜನರಿಗೆ ಟೋಪಿ ಹಾಕುತ್ತಾನೆ ಎಂದು ಅವರು ಟೀಕಿಸಿದರು.

ಎಲ್ಲಾ ಪಕ್ಷದ ಶಾಸಕಾಂಗ ಸಭೆಯ ನಾಯಕರ ನಡವಳಿಕೆ ಸರಿ ಇಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಅದೇ ರೀತಿ ಇದ್ದಾರೆ. ಇದರಿಂದಲೇ ಪಕ್ಷಗಳು ಹಾಳಾಗುತ್ತಿವೆ. ನಾನು ನಾನು ಅನ್ನೋದು ಎಲ್ಲರಿಗೂ ಬಂದಿದೆ ಎಂದರು.

ಜಿಟಿಡಿ ಬಿಜೆಪಿಗೆ ಬರಲಿ :  ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡರು ಕಾಂಗ್ರೆಸ್‌ ಹೋಗಿ ಏಟು ತಿನ್ನುವ ಬದಲು ಬಿಜೆಪಿಗೆ ಬಂದರೆ ಒಳ್ಳೆಯದು. ಈ ಹಿಂದೆ ಕೂಡ ಬಿಜೆಪಿ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದೆ. ಆದ್ದರಿಂದ ಅವರು ಬಿಜೆಪಿಗೆ ಬರುವುದೇ ಸೂಕ್ತ ಎಂದು ಎಚ್‌. ವಿಶ್ವನಾಥ್‌ ಅವರು ಆಹ್ವಾನಿಸಿದರು.

click me!