ಕರ್ನಾಟಕದಲ್ಲಿ ವಾರದಲ್ಲಿ ಎರಡು ದಿನ ಮದ್ಯ ಮಾರಾಟ..?

By Kannadaprabha News  |  First Published Apr 19, 2020, 1:34 PM IST

ಸರ್ಕಾರ ಇತರೆ ಜೀವನಾವಶ್ಯಕ ವಸ್ತುಗಳ ವ್ಯಾಪಾರಕ್ಕೆ ಅವಕಾಶ ನೀಡಿರುವಂತೆ ವಾರದಲ್ಲಿ ಎರಡು ದಿನ ಎಂಎಸ್‌ಐಎಲ್‌ ಅಂಗಡಿಗಳ ಮೂಲಕ ಮದ್ಯ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್‌. ವಿಶ್ವನಾಥ್‌ ಒತ್ತಾಯಿಸಿದರು.


ಮೈಸೂರು(ಏ.19): ಸರ್ಕಾರ ಇತರೆ ಜೀವನಾವಶ್ಯಕ ವಸ್ತುಗಳ ವ್ಯಾಪಾರಕ್ಕೆ ಅವಕಾಶ ನೀಡಿರುವಂತೆ ವಾರದಲ್ಲಿ ಎರಡು ದಿನ ಎಂಎಸ್‌ಐಎಲ್‌ ಅಂಗಡಿಗಳ ಮೂಲಕ ಮದ್ಯ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್‌. ವಿಶ್ವನಾಥ್‌ ಒತ್ತಾಯಿಸಿದರು.

ಪಟ್ಟಣದಲ್ಲಿರುವ ಮೂಳೆತಜ್ಞ ಡಾ. ಮೆಹಬೂಬ್‌ಖಾನ್‌ ನಿವಾಸದಲ್ಲಿ ಶನಿವಾರ ದಿನಪತ್ರಿಕೆ ವಿತರಿಸುವ ಹುಡುಗರಿಗೆ ವೈಯಕ್ತಿಕವಾಗಿ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ಸರ್ಕಾರ ಮತ್ತು ಸಂಬಂಧಿತ ಇಲಾಖೆಯವರು ಗಂಭೀರವಾಗಿ ಪರಿಗಣಿಸಬೇಕು ಎಂದರು.

Latest Videos

undefined

ಮದ್ಯಪ್ರಿಯರಿಗೆ ಸಿಗುತ್ತಾ ಸಿಹಿಸುದ್ದಿ: ಮಾರಾಟಕ್ಕೆ ತಯಾರಿ...?

ಕೊರೋನಾ ವೈರಸ್‌ ಸೋಂಕಿನಿಂದ ರಾಜ್ಯದಲ್ಲಿ ಈವರೆಗೆ 13 ಮಂದಿ ಮೃತಪಟ್ಟಿದ್ದು, 359 ಜನರಿಗೆ ಸೋಂಕು ತಗುಲಿದೆ. ಇದರೊಂದಿಗೆ 20ಕ್ಕೂ ಅಧಿಕ ಮದ್ಯ ವ್ಯಸನಿಗಳು ಅಸುನೀಗಿದ್ದು, ಈ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಮದ್ಯಪಾನ ಮಾರಾಟ ಪುನರಾರಂಭಿಸುವ ಅನಿವಾರ್ಯತೆ ಇದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ವ್ಯಾಪ್ತಿಯಲ್ಲಿ ದಿನಪತ್ರಿಕೆಗಳನ್ನು ಮನೆ ಮನೆಗೆ ಹಂಚುವ 50ಕ್ಕೂ ಅಧಿಕ ಮಂದಿ ಹುಡುಗರಿಗೆ ವೈಯಕ್ತಿಕ ವೆಚ್ಚದಲ್ಲಿ ಆಹಾರದ ಕಿಟ್‌ಗಳನ್ನು ನೀಡಿದರು. ಕೊರೋನಾ ಸಂಕಷ್ಟದ ಸಮಯದಲ್ಲೂ ಪತ್ರಿಕೆಗಳನ್ನು ವಿತರಿಸುವವರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವತಃ ಗರ್ಭಿಣಿಯಾಗಿ ನೂರಾರು ಹೆರಿಗೆ ಮಾಡಿಸಿದ ವೈದ್ಯೆ

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಭೇರ್ಯ ಮಹೇಶ್‌, ಪ್ರಧಾನ ಕಾರ್ಯದರ್ಶಿ ಜಿ.ಕೆ. ನಾಗಣ್ಣ, ಪದಾಧಿಕಾರಿಗಳಾದ ಕುಪ್ಪೆ ಮಹದೇವಸ್ವಾಮಿ, ನಾಗೇಶ್‌, ರಾಮಕೃಷ್ಣೇಗೌಡ, ರಾಜೇಂದ್ರ, ರವಿ, ಪುರಸಭಾ ಮಾಜಿ ಸದಸ್ಯ ಸೈಯದ್‌ಅಸ್ಲಾಂ, ಮೂಳೆತಜ್ಞ ಡಾ. ಮೆಹಬೂಬ್‌ಖಾನ್‌, ಜಿಲ್ಲಾ ಬಿಜೆಪಿ ಮುಖಂಡ ಡಿ.ಸಿ. ಮಂಜುನಾಥ್‌ ಇದ್ದರು.

click me!