ಗುಟ್ಕಾ ಬ್ಯಾನ್‌: ಕಂತೆ ಕಂತೆ ಹಣ ತಂದು ಗುಟ್ಕಾ ಖರೀದಿಸಿದ ಜನ!

Kannadaprabha News   | Kannada Prabha
Published : Aug 14, 2026, 04:55 AM IST
Gutkha ban fear people in koppal buying packets worth hundreds of rupees rav

ಸಾರಾಂಶ

ರಾಜ್ಯದಲ್ಲಿ ಗುಟ್ಕಾ ನಿಷೇಧದ ಸುದ್ದಿ ಹಬ್ಬುತ್ತಿದ್ದಂತೆ, ಕೊಪ್ಪಳ ಜಿಲ್ಲೆಯಲ್ಲಿ ಜನರು ಗುಟ್ಕಾ ಖರೀದಿಗೆ ಮುಗಿಬಿದ್ದಿದ್ದಾರೆ. ಸಾಲ ಮಾಡಿಕೊಂಡು ಬಂದು ಚೀಲಗಟ್ಟಲೆ ಗುಟ್ಕಾ ಖರೀದಿಸುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

 ಕೊಪ್ಪಳ (ಆ.14): ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧ ಕುರಿತು ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಕೊಪ್ಪಳ ಜಿಲ್ಲೆಯಲ್ಲಿ ಗುಟ್ಕಾ ಖರೀದಿಗೆ ಜನರು ಮುಗಿಬಿದ್ದಿರುವುದು ಕಂಡು ಬಂದಿತು. ಸಾಲ ಮಾಡಿ ಕಂತೆ ಕಂತೆ ಹಣ ಕೈಯಲ್ಲಿ ಹಿಡಿದುಕೊಂಡು ಬಂದು ಗುಟ್ಕಾ ಖರೀದಿಸಿ ಹೋಗುತ್ತಿರುವುದು ಅಚ್ಚರಿ ಮೂಡಿಸಿತು. ಎಷ್ಟಾದರೂ ಇರಲಿ, ಗುಟ್ಕಾ ಕೊಡಿ ಎಂದು ಚೀಲದಲ್ಲಿ ತುಂಬಿಕೊಂಡು ಸೈಕಲ್, ಬೈಕ್‌ನಲ್ಲಿ ಹೇರಿಕೊಂಡು ಹೋಗುತ್ತಿದ್ದಾರೆ.

ಎಚ್ಚರವಾದ ವ್ಯಾಪಾರಸ್ಥರು:

ಬೆಳಗ್ಗೆ ಗುಟ್ಕಾ ಖರೀದಿಗೆ ಬಂದವರಿಗೆ ಪ್ಯಾಕೆಟ್, ಚೀಲಗಟ್ಟಲೇ ಮಾರಾಟ ಮಾಡಿದವರು ಮಧ್ಯಾಹ್ನದ ವೇಳೆಗೆ ಗುಟ್ಕಾ ಸ್ಟಾಕ್‌ ಇದ್ದರೂ ಮಾರಾಟ ಮಾಡದೆ ಖಾಲಿಯಾಗಿದೆ ಎಂದಿದ್ದಾರೆ. ಗೋದಾಮಿನಲ್ಲಿ ಗುಟ್ಕಾ ಇಟ್ಟರೆ ಸಮಸ್ಯೆಯಾಗುತ್ತದೆ ಎಂದು ಬೇರೆಡೆ ಸಾಗಿಸಿದ್ದಾರೆ.

ದುಬಾರಿ ಬೆಲೆ: ಯಾವುದೇ ಅಂಗಡಿಯಲ್ಲಿ ಗುಟ್ಕಾ ಕೇಳಿದರೂ ಇಲ್ಲ ಎನ್ನುತ್ತಿದ್ದಾರೆ. ಆದರೆ ಕದ್ದು ಮುಚ್ಚಿ ದುಬಾರಿ ಮೊತ್ತಕ್ಕೆ ಮಾರುತ್ತಿದ್ದಾರೆ. ₹25 ರು. ಇದ್ದ ಒಂದು ಗುಟ್ಕಾ ಪ್ಯಾಕೆಟ್‌ನ ಬೆಲೆ ಸದ್ಯ 100 ರು. ತಲುಪಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧ ಕುರಿತು ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಕೊಪ್ಪಳ ಜಿಲ್ಲೆಯಲ್ಲಿ ಗುಟ್ಕಾ ಖರೀದಿಗೆ ಜನರು ಮುಗಿಬಿದ್ದಿರುವುದು ಕಂಡು ಬಂದಿತು. ಸಾಲ ಮಾಡಿ ಕಂತೆ ಕಂತೆ ಹಣ ಕೈಯಲ್ಲಿ ಹಿಡಿದುಕೊಂಡು ಬಂದು ಗುಟ್ಕಾ ಖರೀದಿಸಿ ಹೋಗುತ್ತಿರುವುದು ಅಚ್ಚರಿ ಮೂಡಿಸಿತು. ಎಷ್ಟಾದರೂ ಇರಲಿ, ಗುಟ್ಕಾ ಕೊಡಿ ಎಂದು ಚೀಲದಲ್ಲಿ ತುಂಬಿಕೊಂಡು ಸೈಕಲ್, ಬೈಕ್‌ನಲ್ಲಿ ಹೇರಿಕೊಂಡು ಹೋಗುತ್ತಿದ್ದಾರೆ.

PREV
Read more Articles on
click me!

Recommended Stories

Zameer Ahmed: ಖಾತೆ ಹಂಚಿಕೆ ಬೆನ್ನಲ್ಲೇ ಬಿಗ್ ಟ್ವಿಸ್ಟ್! ಉಸ್ತುವಾರಿ ಬೇಡ, ಧ್ವಜಾರೋಹಣಕ್ಕೂ ಹೋಗಲ್ಲ ಎಂದ ಜಮೀರ್; ಕೊಟ್ಟ ಕಾರಣವೇನು?
ಅಕ್ಟೋಬರ್‌ನಿಂದ ಬೆಂಗಳೂರಿನ ಔಟರ್‌ ರಿಂಗ್‌ ರೋಡ್‌ ವೈಟ್‌ ಟ್ಯಾಪಿಂಗ್‌, ಟೆಕ್ಕಿಗಳಿಗೆ WFH ನೀಡುವಂತೆ ಸರ್ಕಾರ ಸಲಹೆ