ಹೊಸಬೆಟ್ಟು ಶ್ರೀ ರಾಘವೇಂದ್ರ ಮಠ ಶ್ರೀ ಪುತ್ತಿಗೆ ಮಠಕ್ಕೆ ಹಸ್ತಾಂತರ

By Suvarna News  |  First Published Sep 3, 2020, 4:39 PM IST

ದಕ್ಷಿಣ ಕನ್ನಡ ಜಿಲ್ಲೆಯ ಹೊಸಬೆಟ್ಟುವಿನ ನವವೃಂದಾವನ ಸೇವಾ ಪ್ರತಿಷ್ಠಾನವು ಆಯೋಜಿಸಿದ ಗುರು ಸಮರ್ಪಣಾ ಸಮಾರಂಭದಲ್ಲಿ, ದಿವಂಗತ ಹರಿದಾಸರತ್ನ ಹೊಸಬೆಟ್ಟು ವಾದೀಶ ಆಚಾರ್ಯರು ಹೊಸಬೆಟ್ಟುನಲ್ಲಿ ಸ್ಥಾಪಿಸಿದ ಶ್ರೀ ರಾಘವೇಂದ್ರ ಮಠವನ್ನು, ಅದರ ಪೂಜಾ ಕೈಂಕರ್ಯಗಳ ಅಧಿಕಾರವನ್ನು ಅವರ ಇಚ್ಛೆಯಂತೆ, ಮಗ ರಾಘವೇಂದ್ರ ಆಚಾರ್ಯ ಅವರು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದರು. 

ಉಡುಪಿ (ಸೆ.03):  ಹೊಸಬೆಟ್ಟುನಲ್ಲಿ ಸ್ಥಾಪಿಸಿದ ಶ್ರೀ ರಾಘವೇಂದ್ರ ಮಠವನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹೊಸಬೆಟ್ಟುವಿನ ನವವೃಂದಾವನ ಸೇವಾ ಪ್ರತಿಷ್ಠಾನವು ಆಯೋಜಿಸಿದ ಗುರು ಸಮರ್ಪಣಾ ಸಮಾರಂಭದಲ್ಲಿ, ದಿವಂಗತ ಹರಿದಾಸರತ್ನ ಹೊಸಬೆಟ್ಟು ವಾದೀಶ ಆಚಾರ್ಯರು ಹೊಸಬೆಟ್ಟುನಲ್ಲಿ ಸ್ಥಾಪಿಸಿದ ಶ್ರೀ ರಾಘವೇಂದ್ರ ಮಠವನ್ನು, ಅದರ ಪೂಜಾ ಕೈಂಕರ್ಯಗಳ ಅಧಿಕಾರವನ್ನು ಅವರ ಇಚ್ಛೆಯಂತೆ, ಮಗ ರಾಘವೇಂದ್ರ ಆಚಾರ್ಯ ಅವರು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದರು. 

Latest Videos

undefined

ಪೇಜಾವರ ಶ್ರೀಗಳ ಚಾತುರ್ಮಾಸ್ಯ ಸಮಾಪನ : ಸೀತಾ ನದಿಯಲ್ಲಿ ಸೀಮೊಲ್ಲಂಘನ ...

ಇದೀಗ ಹೊಸಬೆಟ್ಟು ಶ್ರೀರಾಘವೇಂದ್ರ ಮಠವು ಪುತ್ತಿಗೆ ಮಠದ 18ನೇ ರಾಘವೇಂದ್ರ ಮಠವಾಗಿ ಸೇರ್ಪಡೆಗೊಂಡಿದೆ.   ಈ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳು, ಕಳೆದ 24 ವರ್ಷದಿಂದ ಪೂಜೆ ಆರಾಧನೆಗಳನ್ನು ನಡೆಯುತ್ತಿದ್ದ ಈ ಮಠದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು  ಸಹಕರಿಸುವುದಾಗಿ ಹೇಳಿದರು. 

  ಕಾರ್ಯಕ್ರಮದಲ್ಲಿ ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ,  ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷ  ಯಶಪಾಲ್ ಸುವರ್ಣ, ಮಾಜಿ ರಾಜ್ಯ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು, ದಕ ಕಸಾಪ ಅಧ್ಯಕ್ಷ ಪ್ರದೀಪ್ ಕಲ್ಕೂರ, ಮಂಗಳೂರು ಮನಪಾ ಉಪಮೇಯರ್ ವೇದಾವತಿ, ಕಾಂಗ್ರೆಸ್ ನಾಯಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಹೊಸಬೆಟ್ಟು ವಾರ್ಡ್ ಕಾರ್ಪೊರೇಟರ್ ವರುಣ್ ಚೌಟ ಹಾಗೂ ರಾಘವೇಂದ್ರ ಆಚಾರ್ಯ ದಂಪತಿಗಳು ಉಪಸ್ಥಿತರಿದ್ದರು.

click me!