ಕೊರೋನಾ ಕಂಟ್ರೋಲ್‌ಗೆ ಟಫ್ ರೂಲ್ಸ್;  ಜಿಮ್, ಈಜುಕೋಳ ಬ್ಯಾನ್, ಬಾರ್‌ಗೂ ಹೋಗಂಗಿಲ್ಲ!

By Suvarna News  |  First Published Apr 2, 2021, 6:54 PM IST

ಕೊರೋನಾ  ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಂದ ಟಫ್ ರೂಲ್ಸ್/ ಈಜುಕೋಳ, ಜಿಮ್ ಗೆ ನಿಷೇಧ/ ಹೆಚ್ಚುತ್ತಿರುವ ಕೊರೋನಾ ತಡೆಗೆ ಟಫ್ ರೂಲ್ಸ್/ ಸಿನಿಮಾ ಮಂದಿರದಲ್ಲಿ ಶೇ.  50 ಸೀಟು ಭರ್ತಿ/ ಮಾಸ್ಕ್ ಕಡ್ಡಾಯ


ಬೆಂಗಳೂರು(ಏ.  02)  ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡಿದೆ. ಹೊಸ ಮಾರ್ಗಸೂಚಿ ಹೊರಡಿಸಲಾಗಿದ್ದು ಜಿಮ್ ಮತ್ತು ಈಜುಕೋಳಕ್ಕೆ ನಿರ್ಬಂಧ ಹೇರಲಾಗಿದೆ.

ಸಿನಿಮಾ ಮಂದಿರದಲ್ಲಿ ಸೀಟು ಭರ್ತಿ ಸಂಖ್ಯೆ ಅರ್ಧಕ್ಕೆ ಇಳಿಸಲಾಗಿದ್ದು ಸಾರ್ವಜನಿಕ ಸಾರಿಗೆ ಮತ್ತು ಧಾರ್ಮಿಕ ಸಭೆ ಸಮಾರಂಭಗಳ ಮೇಲೆಯೂ  ಕ್ರಮ ತೆಗೆದುಕೊಳ್ಳಲಾಗಿದೆ.

Tap to resize

Latest Videos

undefined

ಮಹಾರಾಷ್ಟ್ರದಲ್ಲಿ ಕೊರೋನಾ ಪರಿಸ್ಥಿತಿ ಏನಾಗಿದೆ? 

ಕೊರೋನಾ ಹೊಸ ಮಾರ್ಗಸೂಚಿ ಹೈಲೈಟ್ಸ್

*  6 ರಿಂದ 9  ವಿದ್ಯಾಗಾಮ ಶಾಲೆ‌ ಬಂದ್..
* ಜಿಮ್ ,ಸ್ವಿಮಿಂಗ್ ಪೂಲ್ ಗೆ ನಿರ್ಬಂಧ
* ಯಾವುದೇ ಕಾರಣಕ್ಕೂ ಗುಂಪು ಗೂಡುವುದು, ಕಾರ್ಯಕ್ರಮ ಆಯೋಜನೆ ಮಾಡುವಂತಿಲ್ಲ
* 6 ರಿಂದ 9ನೇ ತರಗತಿ, ವಿದ್ಯಾಗಮ ಸ್ಥಗಿತ 10, 11 ಮತ್ತು 12ನೇ ತರಗತಿ ಮುಂದುವರಿಕೆ. ತರಗತಿಯಲ್ಲಿ ಖುದ್ದು ಹಾಜರಾತಿ ಕಡ್ಡಾಯವಲ್ಲ...
ಯಾವುದೇ ಕಾರಣಕ್ಕೂ ಪ್ರತಿಭಟನೆ, ಜಾಥಾಗಳಿಗೆ ಅವಕಾಶವಿಲ್ಲ
*  ದೇವಾಲಯ, ಪ್ರಾರ್ಥನಾ ಮಂದಿರಕ್ಕೆ ಜನರು ಭೇಟಿ ನೀಡಲು ಅವಕಾಶ ಆದ್ರೆ ಗುಂಪು ಸೇರುವ ಹಾಗಿಲ್ಲ ಮತ್ತು ಕಾರ್ಯಕ್ರಮಗಳನ್ನ ಆಯೋಜನೆ ಮಾಡುವ ಹಾಗಿಲ್ಲ...
* ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿತ್ರಮಂದಿರದಲ್ಲಿ ಶೇ 50ರಷ್ಟು ಸೀಟು ಭರ್ತಿ
* ಮೈಸೂರು, ಕಲಬುರಗಿ ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡಕ್ಕೂ ಇದು ಅನ್ವಯವಾಗಲಿದೆ...
* ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪ ವ್ಯಾಪ್ತಿ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್‌ನಲ್ಲಿ ಶೇ 50ರಷ್ಟು ಜನರು ಸೇರಲು ಮಾತ್ರ ಅವಕಾಶ
* ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ... ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ..
* ನಿಯಮ ಉಲ್ಲಂಘನೆಯಾದರೆ ಕೋವಿಡ್ ಪರಿಸ್ಥಿತಿ ಮುಗಿಯುವ ತನಕ ಬಂದ್ ಮಾಡುವ ಎಚ್ಚರಿಕೆ
* ಸಾರ್ವಜನಿಕ ಸಾರಿಗೆ ಗಳಲ್ಲಿ ಸೀಟಿಂಗ್  ಸಾಮರ್ಥ್ಯ ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕೂರಿಸುವಂತಿಲ್ಲ
* ಜಾತ್ರೆ/ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಜನಸಂದಣಿ ಸೇರುವಂತಿಲ್ಲ
* ಸಾರ್ವಜನಿಕ ಪ್ರದೇಶದಲ್ಲಿ, ವಾಹನ ಚಾಲನೆ ಮಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಪೊಲೀಸ್, ಸ್ಥಳೀಯ ಸಂಸ್ಥೆಗಳು ಗಮನಿಸಬೇಕು.

 

 

 

click me!