ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿಪಿಐ. ಎಸ್‌ಐ ಅಮಾನತು ಮಾಡಿ ಚಿಕ್ಕಬಳ್ಳಾಪುರ ಎಸ್ ಪಿ ಮಿಥುನ್ ಕುಮಾರ್ ಆದೇಶಿಸಿದ್ದಾರೆ.
ಚಿಕ್ಕಬಳ್ಳಾಪುರ (ಫೆ.24): ಸೋಮವಾರ ಮಧ್ಯರಾತ್ರಿ ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಕಡ್ಡಿಗಳ ಮಹಾ ಸ್ಪೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಸಿಪಿಐ, ಎಸ್ ಐ ರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಹಿರೇನಾಗವೇಲಿ ಗ್ರಾಮದಲ್ಲಿ ಸ್ಫೋಟವಾಗಿದ್ದು, ಗುಡಿಬಂಡೆ ಸಿಪಿಐ, ಎಸ್ ಐ ರನ್ನು ಅಮಾನತು ಮಾಡಿ ಚಿಕ್ಕಬಳ್ಳಾಪುರ ಎಸ್ ಪಿ ಮಿಥುನ್ ಕುಮಾರ್ ಆದೇಶಿಸಿದ್ದಾರೆ.
ಹಿರೇನಾಗವೇಲಿ ಸ್ಫೋಟ ತನಿಖೆ ಸಿಐಡಿಗೆ: ಬೊಮ್ಮಾಯಿ ...
ಸೋಮವಾರ ರಾತ್ರಿ ಸಂಭವಿಸಿದ ಸ್ಫೋಟದಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ಭೂಕಂಪನದ ರೀತಿ ಅನುಭವ ಉಂಟಾಗಿ ಮನೆಗಳಿಂದ ಹೊರ ಬಂದಿದ್ದರು. ಘಟನೆಯಿಂದ ಸಾಕಷ್ಟು ಭಯ ಭೀತಿಗೊಂಡಿದ್ದು ಸ್ಫೋಟದ ತೀವ್ರತೆಗೆ ಮನೆಗಳಲ್ಲಿನ ಪಾತ್ರೆ ಸಾಮಾನುಗಳು ನೆಲಕ್ಕೆರುಳಿ ಬಿದ್ದಿದ್ದು ನಿದ್ದತೆಯಲ್ಲಿ ಜನ ಎದ್ದು ರಾತ್ರಿ ಇಡೀ ಜಾಗರಣೆ ಮಾಡುವಂತೆ ಆಗಿತ್ತು.
ಈ ವೇಳೆ ಬರೋಬ್ಬರಿ 16 ಕಿ.ಮೀನಷ್ಟುದೂರ ಭಾರೀ ಶಬ್ದ ಕೇಳಿದೆ. ಮಧ್ಯರಾತ್ರಿ ಸ್ಫೋಟದಲ್ಲಿ ಆರು ಕಾರ್ಮಿಕರು ಸ್ಥಳದಲ್ಲೇ ಬಲಿಯಾಗಿದ್ದರು.