20ರಂದು ಗುಬ್ಬಿ ಬಿಜೆಪಿ ಅಭ್ಯರ್ಥಿ ನಾಮಪತ್ರ

By Kannadaprabha News  |  First Published Apr 17, 2023, 9:30 AM IST

ಇದೇ ಏ.20ರಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಎಸ್‌.ಡಿ.ದಿಲೀಪ್‌ಕುಮಾರ್‌ ಅವರು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು ರಾಜಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಸಂಸದರು ಹಾಗೂ ಇನ್ನಿತರೆ ಮುಖಂಡರು ಆಗಮಿಸುತ್ತಿದ್ದು, ಸಾವಿರಾರು ಕಾರ್ಯಕರ್ತರು ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಮೆರವಣಿಗೆಯಲ್ಲಿ ಸಾಗಿ ನಾಮಪತ್ರವನ್ನು ತಹಸೀಲ್ದಾರ್‌ ಕಚೇರಿಯಲ್ಲಿ ಸಲ್ಲಿಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ತಿಳಿಸಿದರು.


  ಗುಬ್ಬಿ : ಇದೇ ಏ.20ರಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಎಸ್‌.ಡಿ.ದಿಲೀಪ್‌ಕುಮಾರ್‌ ಅವರು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು ರಾಜಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಸಂಸದರು ಹಾಗೂ ಇನ್ನಿತರೆ ಮುಖಂಡರು ಆಗಮಿಸುತ್ತಿದ್ದು, ಸಾವಿರಾರು ಕಾರ್ಯಕರ್ತರು ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಮೆರವಣಿಗೆಯಲ್ಲಿ ಸಾಗಿ ನಾಮಪತ್ರವನ್ನು ತಹಸೀಲ್ದಾರ್‌ ಕಚೇರಿಯಲ್ಲಿ ಸಲ್ಲಿಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಓಬಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಶಂಕರಣ್ಣ ನೇತೃತ್ವದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ದಿಂದ ಬಿಜೆಪಿಗೆ ಆಗಮಿಸಿದ ಕಾಡುಗೊಲ್ಲ ಸಮುದಾಯದ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದರು. ಜಿ.ಎನ್‌.ಬೆಟ್ಟಸ್ವಾಮಿ ಅವರಿಗೆ ಪಕ್ಷ ಎಲ್ಲವೂ ನೀಡಿದೆ. ಎಲ್ಲವನ್ನು ಅನುಭವಿಸಿ ಈಗ ಪಕ್ಷದ ನಾಯಕರ ವಿರುದ್ಧವೇ ಮಾತನಾಡಿ ಹೋಗಿದ್ದಾರೆ. ಹಾಗಾಗಿ ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷ ಸದೃಢವಾಗಿದೆ, ಹಿಂದೆ ಪಕ್ಷ ಅವರಿಗೆ ಹೆಚ್ಚಿನ ಸ್ಥಾನಮಾನವನ್ನು ನೀಡಿತ್ತು. ಮುಂದೆಯೂ ನೀಡುತ್ತಿತ್ತು ಅದನ್ನು ಕಳೆದುಕೊಂಡು ಹೋಗಿದ್ದವರಿಗೆ ಯಾವುದೇ ಬೆಲೆಯೂ ಇಲ್ಲ ಎಂದು ತಿಳಿಸಿದರು.

Tap to resize

Latest Videos

ಕೇಂದ್ರ ತೆಂಗು ಮತ್ತು ನಾರು ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಪಕ್ಷ ಅಧಿಕಾರ ಕೊಟ್ಟಾಗ ಒಂದು ತರ, ಕೊಡದಿದ್ದಾಗ ಇನ್ನೊಂದು ತರ ಮಾತನಾಡುವುದು ಒಳ್ಳೆಯದಲ್ಲ. ಎರಡು ಬಾರಿ ಪಕ್ಷ ಹಿಂದುಳಿದ ಸಮುದಾಯಕ್ಕೆ ಟಿಕೆಟ್‌ ನೀಡಿತ್ತು. ಆಗ 50 ಸಾವಿರಕ್ಕೂ ಹೆಚ್ಚು ಮತವನ್ನು ಪಡೆದಿದ್ದಾರೆ ಎಂದರೆ ಅದು ಕೇವಲ ಒಂದು ಸಮುದಾಯದಿಂದ ಮಾತ್ರವಲ್ಲ. ವೀರಶೈವ ಲಿಂಗಾಯತ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯದವರು ಮತ ಹಾಕಿದ್ದರಿಂದ ಮಾತ್ರ ನೀವು ಬೆಳೆದಿದ್ದು ಎಂಬುದನ್ನು ಮರೆಯಬಾರದು ಎಂದು ಜಿ.ಎನ್‌.ಬೆಟ್ಟಸ್ವಾಮಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಯಶೋಧಮ್ಮ ಮಾತನಾಡಿ, ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಲು ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಾಡುಗೊಲ್ಲ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾನಮಾನ ನೀಡಿದೆ. ಹಾಗಾಗಿ ಸಮುದಾಯ ಬಿಜೆಪಿ ಪಕ್ಷ ನೀಡಿರುವಂತಹ ಸಹಕಾರಕ್ಕೆ ಅವರ ಜೊತೆಯಲ್ಲಿ ಸಾಗುತ್ತೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಗುಡ್ಡದಹಳ್ಳಿ ಬಸವರಾಜು, ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಯತೀಶ್‌, ಗಂಗಣ್ಣ, ಸೇರಿದಂತೆ ಕಾಡುಗೊಲ್ಲ ಸಮುದಾಯದ ಹಲವು ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.

ಸರ್ವೆ ಮಾಡಿಸಿ ಅದರ ಆಧಾರದಲ್ಲಿ ನನಗೆ ಪಕ್ಷ ಟಿಕೆಟ್‌ ನೀಡಿದೆ. ಬಿಜೆಪಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಪಕ್ಷ ಅಲ್ಲವೇ ಅಲ್ಲ. ದೇಶದ ಎಲ್ಲ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿರುವ ಪಕ್ಷವಾಗಿದ್ದು, ಈ ಬಾರಿ ಗುಬ್ಬಿ ವಿಧಾನಸಭಾ ಕ್ಷೇತ್ರ ಎಲ್ಲರ ಸಹಕಾರದಿಂದ ಬಿಜೆಪಿ ಗೆಲ್ಲುವುದು ನಿಶ್ಚಿತ.

ಎಸ್‌.ಡಿ.ದಿಲೀಪ್‌ಕುಮಾರ್‌ ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

click me!