ಲೋಕಸಭಾ ಚುನಾವಣೆವರೆಗೆ ‘ಗ್ಯಾರಂಟಿ’: ಬಿಜೆಪಿ ಮುಖಂಡ ದಿಲೀಪ್‌

By Kannadaprabha News  |  First Published Sep 9, 2023, 9:32 AM IST

ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಎಲ್ಲಾ ಭಾಗ್ಯಗಳು ಲೋಕಸಭಾ ಚುನಾವಣೆವರೆಗೂ ಮಾತ್ರ ಎಂದು ಬಿಜೆಪಿ ಮುಖಂಡ ಎಸ್ .ಡಿ .ದಿಲೀಪ್ ಕುಮಾರ್ ತಿಳಿಸಿದರು.


  ಗುಬ್ಬಿ :  ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಎಲ್ಲಾ ಭಾಗ್ಯಗಳು ಲೋಕಸಭಾ ಚುನಾವಣೆವರೆಗೂ ಮಾತ್ರ ಎಂದು ಬಿಜೆಪಿ ಮುಖಂಡ ಎಸ್ .ಡಿ .ದಿಲೀಪ್ ಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ ವಿರುದ್ಧ ಪ್ರತಿಭಟಿಸಿ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ವರ್ಗಾವಣೆಯ ದೊಡ್ಡ ದಂದೆ ನಡೆಯುತ್ತಿದೆ. ಪ್ರತಿ ಕಚೇರಿಯಲ್ಲೂ ಲಂಚಾವತಾರ ಎದ್ದು ಕಾಣುತ್ತಿದ್ದು, ಇವರು ನೀಡುತ್ತಿರುವ ಭಾಗ್ಯಗಳಿಗೆ ಹಣ ಒದಗಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಅದಕ್ಕಾಗಿ ರೈತರ ಮೇಲೆ ಸಾರ್ವಜನಿಕರ ಮೇಲೆ ಎಲ್ಲಾ ಸರಕು ದವಸ ಧಾನ್ಯಗಳ ಮೇಲೆ ವಿಪರೀತ ಬೆಲೆ ಹೆಚ್ಚಿಸಿ ರಾಜ್ಯದ ಜನರನ್ನ ಕತ್ತಲಿನಲ್ಲಿ ಇಡುವ ಸ್ಥಿತಿಗೆ ಬಂದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದರು.

Tap to resize

Latest Videos

ತಾಲೂಕು ಬಿಜೆಪಿ ಅಧ್ಯಕ್ಷ ಪಂಚಾಕ್ಷರಿ ಮಾತನಾಡಿ, ರೈತ ವಿರೋಧಿ ಸರ್ಕಾರವಾಗಿರುವ ಕಾಂಗ್ರೆಸ್ ಕೇವಲ ೧೦೦ ದಿನದಲ್ಲಿ ಇವರ ಬಂಡವಾಳ ರಾಜ್ಯದ ಜನರಿಗೆ ಗೊತ್ತಾಗಿದೆ. ವಿದ್ಯುತ್ ಬೆಲೆಯನ್ನು ಗಗನಕ್ಕೇರಿಸಿ, 200 ಯೂನಿಟ್ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿ ಶೇಖಡ ನಾಲ್ಕರಷ್ಟು ಮಾತ್ರ ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಬರೆ ಎಳೆದಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೈರಪ್ಪ ಮಾತನಾಡಿ, ಶಾಲಾ ಮಕ್ಕಳು ಇಂದು ಶಾಲಾ-ಕಾಲೇಜುಗಳಿಗೆ ಹೋಗದ ಸ್ಥಿತಿಗೆ ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ. ಭಾಗ್ಯಗಳ ಹೆಸರಿನಲ್ಲಿ ಜನರನ್ನು ಪ್ರತಿನಿತ್ಯ ಕಂದಾಯ ಇಲಾಖೆ ನಾಡಕಚೇರಿ, ಪೋಸ್ಟ್ ಕಚೇರಿಯ ಮುಂದೆ ಸಾಲು ನಿಲ್ಲಿಸುತ್ತಿದ್ದಾರೆ ಬಿಟ್ಟರೆ ಇವರಿಂದ ಬೇರೇನು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಈ ವೇಳೆ ತಾಲೂಕು ಕಾರ್ಯದರ್ಶಿ ಯತೀಶ್, ಮುಖಂಡರಾದ ಎ.ಕೆ. ಪಿ.ರಾಜು, ಗುಡ್ಡದ ಹಳ್ಳಿ ಬಸವರಾಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪ ಸ್ವಾಮಿ, ಬಿ.ಎಸ್.ಎನ್.ಎಲ್ ಕೃಷ್ಣಪ್ಪ, ಸಾಗರನಹಳ್ಳಿ ನಂಜೇಗೌಡ, ಬಲರಾಮಯ್ಯ, ಅ.ನ.ಲಿಂಗಪ್ಪ, ಸಿದ್ದರಾಮಣ್ಣ, ಶಶಿಕುಮಾರ್, ಲೋಕೇಶ್, ಯಶೋಧಮ್ಮ ಶಿವಣ್ಣ, ಲಕ್ಷ್ಮೀ ರಂಗಯ್ಯ, ಶ್ರೀಧರ್, ಬಸವರಾಜು, ಪುಟ್ಟರಾಜು ಸೇರಿದಂತೆ ಹಲವಾರು ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂತೆ ಇನ್ನಿತರರು ಹಾಜರಿದ್ದರು. 

click me!