ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಜಿಲ್ಲೆಯಾದ್ಯಂತ ಸೆ.30 ಕ್ಕೆ 2,95,480 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಆಗಸ್ಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದ 2,77,937 ಫಲಾನುಭವಿಗಳಲ್ಲಿ 2,43,955ಫಲಾನುಭವಿಗಳ ಖಾತೆಗೆ 48,79,10,೦೦೦ ರು.ಗಳು ಜಮಾ ಆಗಿದೆ. ವಿವಿಧ ಕಾರಣಗಳಿಂದ ೩೩,೯೮೨ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗಿಲ್ಲ.
ಕೋಲಾರ : ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಜಿಲ್ಲೆಯಾದ್ಯಂತ ಸೆ.30 ಕ್ಕೆ 2,95,480 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಆಗಸ್ಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದ 2,77,937 ಫಲಾನುಭವಿಗಳಲ್ಲಿ 2,43,955ಫಲಾನುಭವಿಗಳ ಖಾತೆಗೆ 48,79,10,೦೦೦ ರು.ಗಳು ಜಮಾ ಆಗಿದೆ. ವಿವಿಧ ಕಾರಣಗಳಿಂದ ೩೩,೯೮೨ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗಿಲ್ಲ.
ದಿಂದ ಫಲಾನುಭವಿಗಳಿಗಾಗಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಿದ್ದು, 55,58,74,000 ರೂ.ಗಳು ಇದರಲ್ಲಿ ಖರ್ಚಾಗಿರುವುದು 48,79,10,೦೦೦ ರೂ.ಗಳು, ಉಳಿಕೆಯಾಗಿರುವ ಹಣ 6,79,64,000 ರೂ.ಗಳು ವಿವಿಧ ಕಾರಣಗಳಿಂದ 33,982 ಫಲಾನುಭವಿಗಳ ಗೆ ಜಮಾ ಆಗಿಲ್ಲ. ಇದರಲ್ಲಿ 27,743ಫಲಾನುಭವಿಗಳ ಖಾತೆಗಳಿಗೆ ಆಧಾರ್ ಮತ್ತು ಕೆ.ವೈ.ಸಿ. ಆಗದೇ ಇರುವುದರಿಂದ ಇವರುಗಳ ಖಾತೆಗಳಿಗೆ ಹಣ ಜಮಾ ಆಗಿಲ್ಲ.
undefined
ಫಲಾನುಭವಿಗಳಿಗೆ ಹಣ ಬಿಡುಗಡೆ
ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರದಿಂದ 55.5 ಕೋಟಿ ಹಣ ಸರ್ಕಾರದಿಂದ ಫಲಾನುಭವಿಗಳಿಗೆ ಬಿಡುಗಡೆಯಾಗಿದ್ದು, ೧.೧೩ ಲಕ್ಷ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಜಿಲ್ಲಾ ಪಂಚಾಯತ್ ಸಿ.ಇ.ಓ. ಸಹಿ ಹಾಕಿ ಪಟ್ಟಿಯನ್ನು ಖಜಾನೆಗೆ ಕಳುಹಿಸಿಕೊಡಲಾಗಿದ್ದು, ಉಳಿದ 1,29,877 ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಗುರುವಾರ ಜಿಲ್ಲಾ ಪಂಚಾಯತ್ ಸಿ.ಇ.ಓ. ಅವರ ಸಹಿ ಆಗಲಿದ್ದು, ಖಜಾನೆಗೆ ಕಳುಹಿಸಿಕೊಡಲು ಸಿದ್ಧವಾಗಿದೆ.
ಆಗಸ್ಟ್ ತಿಂಗಳಿನಲ್ಲಿ ನೋಂದಣಿ ಮಾಡಿಕೊಂಡಿದ್ದ ಫಲಾನುಭವಿಗಳಿಗಿಂತ ಸೆಪ್ಟೆಂಬರ್ ತಿಂಗಳಿನಲ್ಲಿ ೧೭,೫೪೩ ಫಲಾನುಭವಿಗಳು ಹೆಚ್ಚಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಫಲಾನುಭವಿಗಳು ಇನ್ನೂ ಇದ್ದು, ಕೆಲವರಿಗೆ ಯಾವ ರೀತಿ ನೋಂದಣಿ ಮಾಡಿಕೊಳ್ಳಬೇಕು ಎಂಬುದೇ ತಿಳಿದಿಲ್ಲ.
ನೋಂದಣಿಗೆ ಈಗಲೂ ಅವಕಾಶ
ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕಾಗಿರುವುದು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಒನ್ ಕೇಂದ್ರಗಲ್ಲಿ, ಪಟ್ಟಣ ಪ್ರದೇಶಗಳಲ್ಲಿ ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಪ್ರಾರಂಭದಲ್ಲಿ ಸರ್ವರ್ ಪ್ರಾಬ್ಲಮ್ ಫಲಾನುಭವಿಗಳನ್ನು ಕಾಡುತ್ತಿತ್ತು. ಈಗ ಗ್ರಾಮಒನ್ ಕೇಂದ್ರಗಳಲ್ಲಿ ಕೇಂದ್ರಗಳಲ್ಲಿ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ನೂಕುನುಗ್ಗುಲು ಇಲ್ಲದೇ ಇರುವುದರಿಂದ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ.
ಮನೆಯ ಯಜಮಾನರ ಹೆಸರು ಪಡಿತರ ಚೀಟಿಯಲ್ಲಿ ಇದ್ದ ಕಾರಣ ಕೆಲವರಿಗೆ ನೋಂದಣಿಗೆ ಅವಕಾಶಕ್ಕೆ ಹಿನ್ನೆಡೆಯಾಗಿದೆ. ಈಗ ಸರ್ಕಾರ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿರುವುದರಿಂದ ಮನೆಯ ಯಜಮಾನನ ಹೆಸರನ್ನು ತೆಗೆದು ಒಡತಿಯ ಹೆಸರನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಇದರಿಂದ ಮುಂದಿನ ತಿಂಗಳು ಫಲಾನುಭವಿಗಳ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆ ಇದೆ.
ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಕೆ.ವೈ.ಸಿ. ಜೋಡಣೆ ಮಾಡಿದ್ದರೆ ಅಂಥವರ ಖಾತೆಗಳಿಗೆ ಹಣ ಜಮಾ ಆಗುತ್ತಿದೆ. ಕೆಲವರು ನಾಲ್ಕೈದು ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದು ಅವು ನಿಷ್ಕ್ರಿಯಗೊಂಡಿರುತ್ತವೆ. ಅಂತಹ ಖಾತೆಗಳಿಗೂ ಹಣ ಜಮಾ ಆಗಿರುತ್ತದೆ. ಅಂಥಹವರು ಬ್ಯಾಂಕ್‌ಗಳಿಗೆ ಹೋಗಿ ವಿಚಾರಣೆ ನಡೆಸಿ, ಬ್ಯಾಂಕ್ ಖಾತೆಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು.
- ಮುದ್ದಣ್ಣ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,