ಆಸ್ತಿ ಮೇಲೆ ಕಣ್ಣಿಟ್ಟ ಮೊಮ್ಮಗನೊಬ್ಬ ಅಸಾಹಯಕ ಸ್ಥಿತಿಯಲ್ಲಿದ್ದ ಅಜ್ಜಿಯನ್ನು ಮನೆಯಿಂದ ಹೊರಹಾಕಿದ್ದ ಘಟನೆ ಜಿಲ್ಲೆಯ ಕೊರಟಗೆರೆ ಪಟ್ಟಣ 30ನೇ ವಾರ್ಡ್‌ನಲ್ಲಿ ನಡೆದಿದೆ.
ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು
ತುಮಕೂರು (ಫೆ.01): ಆಸ್ತಿ ಮೇಲೆ ಕಣ್ಣಿಟ್ಟ ಮೊಮ್ಮಗನೊಬ್ಬ ಅಸಾಹಯಕ ಸ್ಥಿತಿಯಲ್ಲಿದ್ದ ಅಜ್ಜಿಯನ್ನು ಮನೆಯಿಂದ ಹೊರಹಾಕಿದ್ದ ಘಟನೆ ಜಿಲ್ಲೆಯ ಕೊರಟಗೆರೆ ಪಟ್ಟಣ 30ನೇ ವಾರ್ಡ್‌ನಲ್ಲಿ ನಡೆದಿದೆ. ಕೊರಟಗೆರೆ ನಿವಾಸಿ ಮಾರುತಿ ಅಜ್ಜಿಯನ್ನು ಮನೆಯಿಂದ ಹೊರ ಹಾಕಿದ ಪಾಪಿ ಮೊಮ್ಮಗ, ಕಾವಲಮ್ಮ ಅನಾಥೆಯಾಗಿದ್ದ ವೃದ್ಧೆ. 8 ತಿಂಗಳ ಹಿಂದೆ ಅಜ್ಜಿ ಕಾವಲಮ್ಮನ ಮಗಳು ಲಕ್ಷ್ಮಮ್ಮ ಕ್ಯಾನರ್ ಗೆ ತುತ್ತಾಗಿ ಸಾವನಪ್ಪಿದ್ದಳು, ತಾಯಿ ತೀರಿಕೊಂಡ ಬಳಿಕ ಆಕೆ ಮಗ ಮಾರುತಿ ಅಜ್ಜಿ ಮನೆಗೆ ಸೇರಿಕೊಂಡ.
ಹೀಗೆ ತಿಂಗಳು ಕಳೆಯುತ್ತಿದ್ದಂತೆ ನಿಧಾನವಾಗಿ ಅಜ್ಜಿ ಕಾವಲಮ್ಮನನ್ನು ಮನೆಯಿಂದ ಹೊರಗೆ ದಬ್ಬಿದ್ದ. ಅಲ್ಲದೆ ಅಜ್ಜಿ ಮನೆಯನ್ನು ಮಾರಾಟ ಮಾಡುವ ಹುನ್ನಾರ ನಡೆಸಿದ್ದ. ಬೀದಿಗೆ ಬಿದ್ದ ಅಜ್ಜಿಯನ್ನು ಸಂಬಂಧಿಕರು ಆಶ್ರಯ ನೀಡಿದ್ದರು. ಜೊತೆಗೆ ಹಿರಿಯ ನಾಗರೀಕ ಸಹಾಯವಾಗಿ ದೂರು ನೀಡಿ ಅಜ್ಜಿಗೆ ನ್ಯಾಯ ಕೊಡಿಸುವಂತೆ ಅಧಿಕಾರಿಗಳಿಗೆ ವಿನಂತಿಸಿಕೊಂಡಿದ್ದರು. ಸಂಬಂಧಿಕರ ಮನವಿಗೆ ಸ್ಪಂದಿಸಿದ ಮಧುಗಿರಿ ಉಪವಿಭಾಗಾಧಿಕಾರಿ ರಿಶಿ ಆನಂದ್, ಅಜ್ಜಿಗೆ ನ್ಯಾಯ ಕೊಡಿಸಲು ಮುಂದಾದರು. ಹೀಗಾಗಿ ಅಜ್ಜಿ ಮೊಮ್ಮಗ ಮಾರುತಿಯನ್ನು ಕರೆದು ಛೀಮಾರಿ ಹಾಕಿದ್ರು.
ಮಾನವ, ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ಅಗತ್ಯ: ರಿಷಬ್ ಶೆಟ್ಟಿ
ಅಲ್ಲದೆ ಅಜ್ಜಿಗೆ ಬಿಟ್ಟುಕೊಡುವಂತೆ ಸೂಚಿಸಿದ್ರು. ಒಂದ್ವೇಳೆ ಮನೆ ವಾಪಸ್ ಕೊಡದಿದ್ದರೆ ಕಾನೂನು ಕ್ರಮ ಜರುಗಿ ಜೈಲಿಗಟ್ಟುವ ಎಚ್ಚರಿಕೆ ನೀಡಿದ್ರು. ಅಧಿಕಾರಿಗಳ ತಾಕೀತಿಗೆ ಹೆದರಿದ ಮಾರುತಿ ಅಜ್ಜಿಗೆ ಮನೆ ಬಿಟ್ಟುಕೊಟ್ಟ. ನಿನ್ನೆ ಕೊರಟಗೆರೆ ತಹಶೀಲ್ದಾರ್, ಎಸಿ ರಿಶಿ ಆನಂದ್ ಹಾಗೂ ಸ್ಥಳೀಯರ ಸಮುಖದಲ್ಲಿ ಅಜ್ಜಿಯನ್ನು ವಾಪಸ್ ಮನೆಗೆ ಕರೆತರಲಾಯ್ತು. ಇನ್ಮುಂದೆ ಅಜ್ಜಿ ತಂಟೆಗೆ ಹೋದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಮೊಮ್ಮಗ ಮಾರುತಿಗೆ ಎಚ್ಚರಿಕೆ ನೀಡಲಾಯ್ತು. ಅಜ್ಜಿಗೆ ನ್ಯಾಯ ಕೊಡಿಸಿದ ಎಸಿ ರಿಶಿ ಆನಂದ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.