ಸುಧೀರ್ಘ ಕಾಲ ದೇಶ ಸೇವೆಗೈದು ಸೇನೆಯಿಂದ ನಿವೃತ್ತರಾಗಿ ಆಗಮಿಸಿದ ಯೋಧರಿಗೆ ದಾವಣಗೆರೆಯಲ್ಲಿ ಅದ್ದೂರಿ ಸ್ವಾಗತ ನೀಡಲಾಗಿದೆ. ದಾವಣಗೆರೆ ಸರಸ್ವತಿ ಬಡಾವಣೆ ನಿವಾಸಿಗಳಾದ ಯೋಧ ಪರಮೇಶ್ ಹಾಗೂ ಪುಟ್ಟಸ್ವಾಮಿ ಅವರಿಗೆ ನಗರದ ರೈಲ್ವೆ ನಿಲ್ದಾಣಕ್ಕೆ ಬೆಳಿಗ್ಗೆ 11 ಗಂಟೆಗೆ ಆಗಮಿಸಿದರು.
ದಾವಣಗೆರೆ (ಏ.01): ಸುಧೀರ್ಘ ಕಾಲ ದೇಶ ಸೇವೆಗೈದು ಸೇನೆಯಿಂದ ನಿವೃತ್ತರಾಗಿ ಆಗಮಿಸಿದ ಯೋಧರಿಗೆ (Soldiers) ದಾವಣಗೆರೆಯಲ್ಲಿ (Davanagere) ಅದ್ದೂರಿ ಸ್ವಾಗತ (Grand Welcome) ನೀಡಲಾಗಿದೆ. ದಾವಣಗೆರೆ ಸರಸ್ವತಿ ಬಡಾವಣೆ ನಿವಾಸಿಗಳಾದ ಯೋಧ ಪರಮೇಶ್ ಹಾಗೂ ಪುಟ್ಟಸ್ವಾಮಿ ಅವರಿಗೆ ನಗರದ ರೈಲ್ವೆ ನಿಲ್ದಾಣಕ್ಕೆ ಬೆಳಿಗ್ಗೆ 11 ಗಂಟೆಗೆ ಆಗಮಿಸಿದರು. ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹಾಗೂ ಮಾಜಿ ಸೈನಿಕರು ಹೂವಿನ ಹಾರ ಹಾಕಿ ಇಬ್ಬರು ಯೋಧರಿಗೆ ಸ್ವಾಗತ ಕೋರಿ ಜೈಕಾರ ಕೂಗಿದರು.
ಸುಧೀರ್ಘ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ದಾವಣಗೆರೆಯ ಪರಮೇಶ್ ಹಾಗೂ ಪುಟ್ಟಸ್ವಾಮಿ ದೇಶದ ಅಹ್ಮದ್ ನಗರ, ಸೂರತ್, ಪಂಜಾಬ್, ಕಾಶ್ಮೀರಗಳಲ್ಲಿ ಸೇವೆ ಸಲ್ಲಿಸಿದ್ದರು. ತೆರೆದ ವಾಹನದಲ್ಲಿ ಇಬ್ಬರು ಯೋಧರನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಮಾತನಾಡಿದ ಯೋಧ ಪರಮೇಶ್ ಅದ್ದೂರಿ ಸ್ವಾಗತ ನೋಡಿ ಅತ್ಯಂತ ಸಂತಸವಾಗುತ್ತಿದೆ. ಪ್ರತಿಯೊಬ್ಬರು ಸೇನೆಗೆ ಹೋಗಿ ದೇಶ ಭದ್ರತೆ ಮಾಡಬೇಕು. ದೇಶ ಇದ್ದರೆ ನಾವು, ಇಲ್ಲವಾದ್ರೆ ಉಕ್ರೇನ್ (Ukraine) ಪರಿಸ್ಥಿತಿ ಉಂಟಾಗುತ್ತದೆ.
ಐದಾರು ವರ್ಷಗಳಿಂದ ಭಾರತ ಸೇನೆ ಎಂದರೆ ಬೇರೆ ದೇಶಗಳಿಗೂ ಭಯ ಇದೆ. ಆದ್ದರಿಂದ ಪ್ರತಿಯೊಬ್ಬ ಯುವಕರೂ ಕೂಡ ಸೇನೆ ಸೇರಿ ದೇಶ ಸೇವೆ ಮಾಡುವಂತೆ ಮನವಿ ಮಾಡಿದರು. ಈ ಯೋಧ ಸ್ವಾಗತ ಸನ್ಮಾನ ಸಮಾರಂಭದಲ್ಲಿ ದೂಡಾ ಅದ್ಯಕ್ಷ ದೇವರಮನೆ ಶಿವಕುಮಾರ್, ಬಿಜೆಪಿ ಮುಖಂಡರಾದ ಯಶವಂತ್ ರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.
Hassan: ಹುಟ್ಟೂರು ಹರದನಹಳ್ಳಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರಿನಲ್ಲಿ ಮ್ಯೂಸಿಯಂ
ಕನ್ನಡಿಗ ಹುತಾತ್ಮ ಯೋಧ ಕಾಶಿರಾಯ್‌ಗೆ ಶೌರ್ಯ ಪ್ರಶಸ್ತಿ: 2021ರ ಜುಲೈ 1ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಜತೆ ಹೋರಾಡಿಪ್ರಾಣತ್ಯಾಗ ಮಾಡಿದ ಕರ್ನಾಟಕದ (Karnataka) ಯೋಧ ಕಾಶಿರಾಯ್ (Kashiray) ಬಮ್ಮನಳ್ಳಿ ಅವರಿಗೆ ಕೇಂದ್ರ ಸರ್ಕಾರ (Central Government) ಮರಣೋತ್ತರವಾಗಿ ಶೌರ್ಯ (Shaurya Chakra Award) ಪ್ರಶಸ್ತಿ ಪ್ರಕಟಿಸಿದೆ.
ಹುತಾತ್ಮ ಕಾಶಿರಾಯ್‌ಗೆ ಶೌರ್ಯ ಪುರಸ್ಕಾರ: ಜಮ್ಮು- ಕಾಶ್ಮೀರದ (Jammu Kashmir) ಪುಲ್ವಾಮಾ (Pulwama) ಜಿಲ್ಲೆಯಲ್ಲಿ ಉಗ್ರರು (Terrorist) ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ 2021ರ ಜು.1ರಂದು ಸೇನಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ಕಾರ್ಯಾಚರಣೆ ಮುಂದಾಳತ್ವವನ್ನು 44ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ನ 37 ವರ್ಷದ ಹವಾಲ್ದಾರ್ ಕಾಶಿರಾಯ್ ಬಮ್ಮನಳ್ಳಿ ಅವರು ವಹಿಸಿಕೊಂಡಿದ್ದರು. ಈ ವೇಳೆ ಯೋಧರ ಮೇಲೆ ಗ್ರೆನೇಡ್ ಮತ್ತು ಗುಂಡಿನ ದಾಳಿ ಮೂಲಕ ಉಗ್ರರು ಪರಾರಿಯಾಗಲು ಯತ್ನಿಸಿದ್ದರು. ಆಗ ಕಾಶಿರಾಯ್ ಅವರು ಉಗ್ರರ ಮೇಲೆ ದಾಳಿ ನಡೆಸಿ, ಉಗ್ರರು ತಾವು ಅಡಗಿದ್ದ ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಿದ್ದರು.
ಆದರೆ ಕೊನೆಗೆ ಭಯೋತ್ಪಾದಕರು ಹವಾಲ್ದಾರ್ ಕಾಶಿರಾಯ್ ಅವರನ್ನು ಗುರಿಯಾಗಿಸಿಕೊಂಡು ನಡೆಸಿದರು. ತೀವ್ರ ಗಾಯಗೊಂಡಿದ್ದರೂ ಅವರು ಓರ್ವ ಉಗ್ರನನ್ನು ಬಲಿಪಡೆದು, ಹುತಾತ್ಮರಾದರು. ತನ್ಮೂಲಕ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ತನ್ನ ಪಡೆಯನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ಕಾಶಿರಾಯ್ ಅವರ ಹೆಸರನ್ನು ಮರಣೋತ್ತರ ಶೌರ್ಯ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಕಾಶಿರಾಯ್ ಕರ್ನಾಟಕದ ವಿಜಯಪುರ (Vijayapura) ಜಿಲ್ಲೆಯ ಬಸವನ ಬಾಗೇವಾಡಿಯ ಉಕ್ಕಲಿ ಗ್ರಾಮದವರಾಗಿದ್ದಾರೆ. ಅವರಿಗೆ ಓರ್ವ ಮಗ, ಮಗಳು ಮತ್ತು ಪತ್ನಿಯಿದ್ದಾರೆ.
Pariksha Pe Charcha: ಭಯ ಬಿಟ್ಟು ಪರೀಕ್ಷೆ ಎದುರಿಸಿ: ದೇಶದ ವಿದ್ಯಾರ್ಥಿಗಳಿಗೆ ಪ್ರಧಾನಿಗಳ ಧೈರ್ಯದ ಮಾತು
128 ಸಾಧಕರಿಗೆ ಪದ್ಮ ಗೌರವ-ಯೋಧರಿಗೆ ಶೌರ್ಯ ಪದಕ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ದೇಶ- ವಿದೇಶಗಳ 128 ಗಣ್ಯರಿಗೆ ಕೇಂದ್ರ ಸರ್ಕಾರ, ಗಣರಾಜ್ಯೋತ್ಸವದ ಮುನ್ನಾ ದಿನವಾದ ಮಂಗಳವಾರ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪೈಕಿ 4 ಜನರಿಗೆ ಪದ್ಮವಿಭೂಷಣ, 17 ಜನರಿಗೆ ಪದ್ಮಭೂಷಣ, 107 ಜನರಿಗೆ ಪದ್ಮಶ್ರೀ ನೀಡಲಾಗಿದೆ. ಪುರಸ್ಕೃತರಲ್ಲಿ 34 ಮಹಿಳೆಯರು, 10 ವಿದೇಶಿಯರು/ ಅನಿವಾಸಿ ಭಾರತೀಯರು/ ಭಾರತೀಯ ಮೂಲದ ವಿದೇಶಿಯರು/ ಸಾಗರೋತ್ತರ ಭಾರತೀಯರು ಸೇರಿದ್ದಾರೆ. ಜೊತೆಗೆ 13 ಜನರಿಗೆ ಮರಣೋತ್ತರವಾಗಿ ಗೌರವ ಪ್ರಕಟಿಸಲಾಗಿದೆ.