ಕೊರೋನಾ ಭೀತಿ: ಕರ್ಫ್ಯೂ ಇದ್ರೂ ಮಗಳ ಅದ್ಧೂರಿ ವಿವಾಹ ಮಾಡಿದ ಸರ್ಕಾರಿ ನೌಕರ

By Suvarna NewsFirst Published Mar 20, 2020, 2:56 PM IST
Highlights

ಮಡಿಕೇರಿಯಲ್ಲಿ ಈಗಾಗಲೇ ಕೊರೋನಾ ವೈರಸ್ ಪ್ರಕರಣ ದೃಢಪಟ್ಟಿದ್ದು, ಈ ನಡುವೆಯೇ ಸರ್ಕಾರಿ ನೌಕರರೊಬ್ಬರು ತಮ್ಮ ಮಗಳ ವಿವಾಹವನ್ನು ಅದ್ಧೂರಿಯಾಗಿ ಮಾಡುವ ಮೂಲಕ ಬೇಜವಾಬ್ದಾರಿ ತೋರಿಸಿದ್ದಾರೆ.

ಮಡಿಕೇರಿ(ಮಾ.20): ಮಡಿಕೇರಿಯಲ್ಲಿ ಈಗಾಗಲೇ ಕೊರೋನಾ ವೈರಸ್ ಪ್ರಕರಣ ದೃಢಪಟ್ಟಿದ್ದು, ಈ ನಡುವೆಯೇ ಸರ್ಕಾರಿ ನೌಕರರೊಬ್ಬರು ತಮ್ಮ ಮಗಳ ವಿವಾಹವನ್ನು ಅದ್ಧೂರಿಯಾಗಿ ಮಾಡುವ ಮೂಲಕ ಬೇಜವಾಬ್ದಾರಿ ತೋರಿಸಿದ್ದಾರೆ.

ಕೊಡಗಿನಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹೆಲ್ತ್‌ ಎಮರ್ಜೆನ್ಸಿ ಘೋಷಿಸಲಾಗಿದ್ದರೂ ಅದ್ದೂರಿಯಾಗಿ ಮಗಳ ಮದುವೆ ಮಾಡಿದ ಸರ್ಕಾರಿ ಅಧಿಕಾರಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

KPCC ಅಧ್ಯಕ್ಷರಾದ ಮೇಲೆ ವಿನಯ್ ಗುರೂಜಿ ಭೇಟಿ ಮಾಡಿದ ಡಿಕೆಶಿ

ಹೆಚ್ಚು ಜನ ಸೇರದಂತೆ ಡಿಸಿ ಮನವಿ ಮಾಡಿದ್ದರೂ ಇದನ್ನು ನಿರ್ಲಕ್ಷಿಸಿರುವ ಅಧಿಕಾರಿ ಡೋಂಟ್ ಕೇರ್ ಎನ್ನುವಂತೆ ವರ್ತಿಸಿದ್ದಾರೆ. ನೂರಾರು ಜನರನ್ನು ಸೇರಿಸಿ ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದಾರೆ. ಸೋಮವಾರಪೇಟೆ ಸರ್ವೆ ಇಲಾಖೆ ನಿವೃತ್ತ ಅಧಿಕಾರಿ ಹರೀಶ್ ಕುಮಾರ್ ಕುಶಾಲನಗರದ ರೈತ ಭವನದಲ್ಲಿ ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದಾರೆ.

ಅಧಿಕಾರಿ ಮಗಳ ಮದುವೆಗೆ ಒಂದೇ ಕಡೆ ನೂರಾರು ಜನ ಸೇರಿದ್ದಾರೆ. ಜನರಿಗೆ ಬುದ್ದಿ ಹೇಳಬೇಕಾದ ಅಧಿಕಾರಿಯಿಂದಲೇ ನಿಯಮ ಉಲ್ಲಂಘನೆ ನಡೆದಿದೆ. ಜಿಲ್ಲಾಧಿಕಾರಿಯೇ ಮನವಿ ಮಾಡಿದ್ದರೂ ಅಧಿಕಾರಿ ಮಾತ್ರ ಕ್ಯಾರೇ ಅಂದಿಲ್ಲ.

"

click me!