ಮನೆಕೆಲಸದವನಿಗೆ ಕಿರುಕುಳ: ಗುಡ್ಡೆಯಲ್ಲಿ ಉಳಿದು, ಗೇರುಹಣ್ಣು ತಿಂದು ಬದುಕಿದ

By Kannadaprabha NewsFirst Published Apr 30, 2020, 8:16 AM IST
Highlights

ಕೊರೋನಾ ವೈರಸ್‌ ಕಾರಣವನ್ನಿಟ್ಟು ಗ್ರಾ. ಪಂ. ಸದಸ್ಯನೊಬ್ಬ ಕೆಲಸದಾಳುವನ್ನು ಮನೆಯಿಂದ ಹೊರಗಟ್ಟಿದ ಘಟನೆ ಮೂಲ್ಕಿಯ ಕಲ್ಲಮುಂಡ್ಕೂರು ಗ್ರಾ. ಪಂ. ವ್ಯಾಪ್ತಿಯ ನೀರುಡೆಯಲ್ಲಿ ನಡೆದಿದೆ.

ಮಂಗಳೂರು(ಏ.30): ಕೊರೋನಾ ವೈರಸ್‌ ಕಾರಣವನ್ನಿಟ್ಟು ಗ್ರಾ. ಪಂ. ಸದಸ್ಯನೊಬ್ಬ ಕೆಲಸದಾಳುವನ್ನು ಮನೆಯಿಂದ ಹೊರಗಟ್ಟಿದ ಘಟನೆ ಮೂಲ್ಕಿಯ ಕಲ್ಲಮುಂಡ್ಕೂರು ಗ್ರಾ. ಪಂ. ವ್ಯಾಪ್ತಿಯ ನೀರುಡೆಯಲ್ಲಿ ನಡೆದಿದೆ.

ಕಲ್ಲಮುಂಡ್ಕೂರು ಪಂಚಾಯಿತಿಯ ನೀರುಡೆ ಗ್ರಾಮದಲ್ಲಿ ಮೂರನೇ ಅವಧಿಗೆ ಸದಸ್ಯನಾಗಿ ಆಯ್ಕೆಯಾದ ಲಾಜರಸ್‌ ಡಿಕೋಸ್ತ ಮನೆಯಲ್ಲಿ ಕಳೆದ ಮೂರು ತಿಂಗಳಿಂದ ಜಾರ್ಖಂಡ್‌ ನಿವಾಸಿ ರಾಜೇಶ್‌ ದುಂಗುರು ಕೆಲಸ ಮಾಡುತ್ತಿದ್ದಾರೆ.

ಉಡುಪಿ: ತಿಂಗಳಾದರೂ ಘೋಷಣೆಯಾಗಿಲ್ಲ ಹಸಿರು ವಲಯ

ಕಳೆದ ಮೂರು ದಿನಗಳ ಹಿಂದೆ ನಿನಗೆ ಕೊರೋನಾ ಬಾಧಿಸಿದೆ ಎಂದು ಮನೆಯಿಂದ ಲಾಜರಸ್‌ ಡಿಕೋಸ್ತ ಹೊರಹಾಕಿದ್ದಾರೆ. ರಾಜೇಶ್‌ ಮೂರು ದಿನಗಳಿಂದ ಸಮೀಪದ ಗುಡ್ಡೆಯಲ್ಲಿ ದಿನಕಳೆಯುತ್ತಿ​ದ್ದಾರೆ. ಹೊಟ್ಟೆಗಿಲ್ಲದೆ ಗೇರು ಹಣ್ಣನ್ನು ತಿಂದು ಬದುಕಿದ್ದಾರೆ. ನಂತರ ಮಂಗಳವಾರ ರಾತ್ರಿ ಅದೇ ಗ್ರಾಮದ ಜೊಸ್ಸಿ ಪ್ರವೀಣ್‌ ಸಲ್ಡಾನಾ ಮನೆ ಸಮೀಪ ವಾಸ್ತವ್ಯ ಹೂಡಿ, ಊಟ ನೀಡು​ವಂತೆ ವಿನಂತಿಸಿದ್ದಾರೆ.

ಬೆಂಗಳೂರಲ್ಲಿ ದಾಖಲೆಯ ಮಳೆ: ಒಂದೇ ದಿನ 11 ಸೆಂ.ಮೀ ವರ್ಷಧಾರೆ!

ಜೊಸ್ಸಿ ಪ್ರವೀಣ್‌ ಸಲ್ಡಾನಾ ಊಟ ನೀಡಿ, ರಾತ್ರಿ ಮನೆಯಲ್ಲಿ ಮಲಗಲು ಅವ​ಕಾಶ ನೀಡಿ​ದ್ದಾರೆ. ಬುಧವಾರ ಬೆಳಗ್ಗೆ ಗ್ರಾ. ಪಂ. ಮತ್ತು ಸಂಬಂಧಪಟ್ಟವರಿಗೆ ಮಾಹಿ​ತಿ ನೀಡಿ​ದ್ದಾ​ರೆ. ಪಂಚಾಯಿತಿ ಅಭಿ​ವೃದ್ಧಿ ಅಧಿಕಾರಿ ಪಂಚಾಯಿತಿಗೆ ಆತನನ್ನು ಕರೆಸಿ ವಿಚಾರಿಸಿದ್ದಾರೆ.

‘ರಾಜೇಶ್‌ ಕೆಲಸ ಬಿಟ್ಟು ಹೋಗಿದ್ದಾನೆ. ನಾನು ಹೊರ ಹಾಕಿದಲ್ಲ’ ಎಂದು ಲಾಜರಸ್‌ ಡಿ’ಕೋಸ್ತ ವಿಚಾರಣೆ ಸಂದರ್ಭ ತಿಳಿ​ಸಿ​ದ್ದಾರೆ. ಯಾವುದೇ ಕಾರಣಕ್ಕೂ ರಾಜೇಶ್‌ನನ್ನು ಮನೆ ಕೆಲಸಕ್ಕೆ ಸೇರಿಸಿಕೊಳ್ಳಲ್ಲ ಎಂದು ಹೇಳಿ​ದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಮಾಜಿ ಯೋಧ, ಪತ್ನಿಯ ಬರ್ಬರ ಹತ್ಯೆ..!

ಪಂಚಾಯಿತಿಗೆ ತಹಸೀಲ್ದಾರ್‌ ಅನಿತಾ ಲಕ್ಷ್ಮೇ ಮತ್ತು ಕಾರ್ಯನಿರ್ವಹಣಾಧಿಕಾರಿ ದಯಾವತಿ ಎಂ. ಮತ್ತು ಸಂಬಂಧಪಟ್ಟಅಧಿಕಾರಿಗಳು ಭೇಟಿ ನೀಡಿ ರಾಜೇಶ್‌ನನ್ನು ವಿಚಾರಿಸಿದ್ದಾರೆ. ಸರ್ಕಾರದ ವತಿಯಿಂದ ರಾಜೇಶ್‌ಗೆ ಬೇಕಾದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ದಯಾವತಿ ಎಂ. ತಿಳಿಸಿದ್ದಾರೆ.

click me!