ರಾಜ್ಯದಲ್ಲೇ ಮೊದಲು: ಗ್ರಾಮೀಣ ಪ್ರದೇಶದ ಕಸ ವಿಲೇವಾರಿ ವಾಹನಕ್ಕೆ ಜಿಪಿಎಸ್‌..!

Published : Jul 06, 2022, 09:58 PM IST
ರಾಜ್ಯದಲ್ಲೇ ಮೊದಲು: ಗ್ರಾಮೀಣ ಪ್ರದೇಶದ ಕಸ ವಿಲೇವಾರಿ ವಾಹನಕ್ಕೆ ಜಿಪಿಎಸ್‌..!

ಸಾರಾಂಶ

*   ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮೂರು ಗ್ರಾಪಂಗಳಲ್ಲಿ ಚಾಲನೆ *  ಗ್ರಾಪಂ ಮಟ್ಟದಲ್ಲಿ ಕಸ ವಿಲೇವಾರಿ ವಾಹನದವರು ಕೆಲವೆಡೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರು  *  ಇದರಿಂದ ಕಸ ವಿಲೇವಾರಿ ವಾಹನದ ಕಾರ್ಯವೈಖರಿ ತಿಳಿಯುತ್ತದೆ 

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕೊಪ್ಪಳ(ಜು.06): ಗ್ರಾಮೀಣ ಪ್ರದೇಶದ ಕಸ ಸಂಗ್ರಹ ವ್ಯವಸ್ಥೆಯನ್ನು ಉತ್ತಮಗೊಳಿಸಲು ಕುಕನೂರು ತಾಲೂಕಿನ ಮಸಬಹಂಚಿನಾಳ, ಮಂಡಲಗೇರಿ ಮತ್ತು ಇಟಗಿ ಗ್ರಾಮದಲ್ಲಿ ಗ್ರಾಪಂನ ಕಸ ವಿಲೇವಾರಿ ವಾಹನಗಳಿಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಪಿಎಸ್‌ ಅಳವಡಿಸಲಾಗಿದೆ.

ಗ್ರಾಪಂ ಮಟ್ಟದಲ್ಲಿ ಕಸ ವಿಲೇವಾರಿ ವಾಹನದವರು ಕೆಲವೆಡೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಕೇಳಿಬಂದಿದ್ದವು. ಹೀಗಾಗಿ ಕಸ ನಿರ್ವಹಣೆಯಲ್ಲಿನ ನ್ಯೂನತೆ ಸರಿಪಡಿಸಲು ನೂತನ ವ್ಯವಸ್ಥೆ ಜಾರಿಗೆ ತರಲಾಗಿದೆ.
ಮಂಗಳವಾರ ತಾಪಂ ಇಒ ರಾಮಣ್ಣ ದೊಡ್ಮನಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಕಸ ವಿಲೇವಾರಿ ವಾಹನಕ್ಕೆ ಜಿಪಿಎಸ್‌ ಅಳವಡಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ಸಹ ನೀಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಒಣ ಕಸವನ್ನು ಗ್ರಾಮಗಳಿಂದ ಸ್ವಚ್ಛ ಸಂಕೀರ್ಣ ಘಟಕಗಳಿಗೆ ಹಾಕಲು ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ‘ಸ್ವಚ್ಛ ವಾಹಿನಿ’ಗಳನ್ನು ವಿತರಿಸಲಾಗಿದ್ದು, ಇವುಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ಜಿಪಿಎಸ್‌ ವ್ಯವಸ್ಥೆ ಅಳವಡಿಸಲಾಗಿದೆ.

ಕಲ್ಯಾಣ ಕರ್ನಾಟಕ ಶಿಕ್ಷಣ ‌ಇಲಾಖೆಯ ಸಭೆ, ‌ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ‌ಕೊಟ್ಟ ನಾಗೇಶ್

ಇವೆಲ್ಲಾ ಅನುಕೂಲ:

‘ಸ್ವಚ್ಛ ವಾಹಿನಿ’ಯು ಪ್ರತಿನಿತ್ಯ ಎಷ್ಟುದೂರ ಕ್ರಮಿಸಿದೆ, ಎಷ್ಟುವೇಗದಲ್ಲಿ ಚಲಿಸಿದೆ. ಯಾವ ಗ್ರಾಮದಲ್ಲಿ ಕಸ ಸಂಗ್ರಹಣೆ ಮಾಡಿದೆ, ಯಾವ ಗ್ರಾಮದಲ್ಲಿ ಎಷ್ಟುದಿನ ಓಡಾಟ ಮಾಡಿದೆ ಎಂಬೆಲ್ಲಾ ಮಾಹಿತಿ ಜಿಪಿಎಸ್‌ನಿಂದ ಲಭ್ಯವಾಗುತ್ತವೆ.

ಸಾರ್ವಜನಿಕರ ನಂಬಿಕೆಗೆ ಪಾತ್ರ:

ಗ್ರಾಮೀಣ ಮಟ್ಟದಲ್ಲಿ ಸ್ವ- ಸಹಾಯ ಸಂಘದ ಮೂಲಕ ಒಡಂಬಡಿಕೆ ಮಾಡಿಕೊಂಡು ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿನಿತ್ಯ ವಾಹನ ಓಡಾಟ ಮತ್ತು ನಿರ್ವಹಣೆ ಮಾಡುವ ಸಲುವಾಗಿ ತಿಂಗಳಿಗೆ ಮನೆಯವರು ಹಾಗೂ ಅಂಗಡಿಯವರಿಂದ ತಲಾ .10 ವಂತಿಕೆ ಪಡೆಯಲಾಗುತ್ತಿದೆ. ಹಣ ಕೇಳಲು ಹೋದಾಗ ವಾಹನವೇ ಬಂದಿಲ್ಲ ಎಂಬ ಅಪವಾದ ಬಾರದು ಎಂಬ ಉದ್ದೇಶವೂ ಜಿಪಿಎಸ್‌ ಅಳವಡಿಕೆಯಲ್ಲಿದೆ. ಅಲ್ಲದೆ ವಾಹನ ಸಂಚರಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು ಅನುಕೂಲ ಆಗಲಿದೆ.

ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶ ಹಾಗೂ ಕಸ ವಿಲೇವಾರಿ ವಾಹನಗಳ ಸಕ್ರೀಯ ಕಾರ್ಯಕ್ಕೆ ಜಿಪಿಎಸ್‌ ಅಳವಡಿಸಲಾಗಿದೆ. ಇದರಿಂದ ಕಸ ವಿಲೇವಾರಿ ವಾಹನದ ಕಾರ್ಯವೈಖರಿ ತಿಳಿಯುತ್ತದೆ ಅಂತ ಕುಕನೂರು ತಾಲೂಕು ತಾಪಂ ಇಒ ರಾಮಣ್ಣ ದೊಡ್ಮನಿ ತಿಳಿಸಿದ್ದಾರೆ.  
 

PREV
Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ