ಡಿಸಿಎಂ ಪೋಸ್ಟ್: ಹಲವು ನಾಯಕರು ಸಾಲಿನಲ್ಲಿ..!

Published : Jul 25, 2019, 01:12 PM ISTUpdated : Jul 25, 2019, 01:46 PM IST
ಡಿಸಿಎಂ ಪೋಸ್ಟ್: ಹಲವು ನಾಯಕರು ಸಾಲಿನಲ್ಲಿ..!

ಸಾರಾಂಶ

ಮೈತ್ರಿ ಸರ್ಕಾರ ಪತನವಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಇದೀಗ ಡಿಸಿಎಂ ಕುರ್ಚಿಗೆ ಯಾರು ಎಂಬ ಚರ್ಚೆ ಆರಂಭವಾಗಿದೆ. ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಹುದ್ದೆಇಲ್ಲ ಅನ್ನೋ ಮಾತು ಕೇಳಿ ಬರ್ತಿದ್ರೂ ಡಿಸಿಎಂ ಸೀಟಿಗಾಗಿ ಪೈಪೋಟಿ ಕಂಡುಬಂದಿದೆ. ಒಂದೆಡೆ ಬಳ್ಳಾರಿಯ ಜನರು ನಾಯಕ ಸಮುದಾಯದ ಶ್ರೀರಾಮುಲು ಹೆಸರು ಹೇಳಿದ್ರೆ ಇತ್ತ ಬಾಗಲಕೋಟೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳಗೆ ಡಿಸಿಎಂ ಸ್ಥಾನ ನೀಡಬೇಕು ಜನ ಒತ್ತಾಯಿಸಿದ್ದಾರೆ.

ಬಾಗಲಕೋಟೆ(ಜು.25) : ಮುಧೋಳ ಶಾಸಕ, ಮಾಜಿ ಸಚಿವ ಗೋವಿಂದ ಕಾರಜೋಳಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ರಾಜ್ಯ ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಮುತ್ತಣ್ಣ ಬೆನ್ನೂರು ಬಾಗಲಕೋಟೆಯಲ್ಲಿ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಮುತ್ತಣ್ಣ ಬೆನ್ನೂರು ಮಾತನಾಡಿ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿದ್ದು, ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನುಮಾಜಿ ಸಚಿವ ಗೋವಿಂದ ಕಾರಜೋಳ ಅವರಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಡೌಟ್!

ಪರಿಶಿಷ್ಟರಲ್ಲಿ ಬಹುಸಂಖ್ಯಾತ ಮಾದಿಗ ಸಮುದಾಯದಿಂದ ಬಿಜೆಪಿಯಲ್ಲಿ ಅತೀ ಹೆಚ್ಚು ಶಾಸಕರಾಗಿದ್ದಾರೆ. ಹಾಗಾಗಿ ಹಿರಿಯ ಮುಖಂಡ ಕಾರಜೋಳ ಅವರನ್ನ ಡಿಸಿಎಂ ಮಾಡಬೇಕು ಎಂದು ಹೇಳಿದ್ದಾರೆ.

ರಾಜ್ಯ ಮಾದಿಗ ಮಹಾಸಭಾದಿಂದ ಮೈತ್ರಿ ಸರ್ಕಾರದ ಪತನವನ್ನು ಸ್ವಾಗತಿಸಿದ ದಲಿತ ಸಂಘಟನೆ ಮುಖಂಡರು  ಸಿಎಂ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಮ್ಮ ಹೋರಾಟಗಳಿಗೆ ಕಿವಿಗೊಡಲಿಲ್ಲ ಎಂದಿದ್ದಾರೆ.

ದಲಿತ ಸಮುದಾಯ ಒಡೆದು ಆಳಿದ್ರು:

ಸಿಎಂ ಎಚ್ ಡಿಕೆ ಹಾಗೂ ಸಿದ್ದರಾಮಯ್ಯ ದಲಿತ ಸಮುದಾಯ ಒಡೆದು ಆಳಿದ್ರು. ಮೈತ್ರಿ ಸರ್ಕಾರ ಶೋಷಿತ ಒಳಮೀಸಲಾತಿ ವಿರುದ್ಧವಿತ್ತು. ಈಗ ಬಿಜೆಪಿ ಸರ್ಕಾರ ರಚಿಸುವ ಹಿನ್ನೆಲೆ ಉತ್ತರ ಕರ್ನಾಟಕದಲ್ಲಿ ಸಮುದಾಯಕ್ಕೆ ಎರಡು ಸಚಿವ ಸ್ಥಾನ ನೀಡಬೇಕು ಎಂದು ಗೋವಿಂದ ಕಾರಜೋಳ ಪರ ದಲಿತ ಸಂಘಟನೆ ಮುಖಂಡರ ಆಗ್ರಹಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!