Mahadayi Project: ಮತ್ತೊಂದು ರೈತ ಬಂಡಾಯಕ್ಕೂ ಸಿದ್ಧ: ಬೊಮ್ಮಾಯಿ ಸರ್ಕಾರಕ್ಕೆ ಸೊಬರದಮಠ ಎಚ್ಚರಿಕೆ

By Kannadaprabha News  |  First Published Dec 8, 2021, 2:08 PM IST

*   ಮಹದಾಯಿಗಾಗಿ 7 ವರ್ಷದಿಂದ ಹೋರಾಟ ಮಾಡುತ್ತಿರುವ ರೈತರು
*  ನರಗುಂದದಲ್ಲಿ ರೈತ ಬಂಡಾಯ ಮಾಡಲು ಸಿದ್ಧ 
*  ಯೋಜನೆ ಜಾರಿಗೆ ಮುಖ್ಯಮಂತ್ರಿಗಳು ಮುಂದಾಗಬೇಕು 


ನರಗುಂದ(ಡಿ.08):  ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ(Belagavi Session) ಮಹದಾಯಿ(Mahadayi) ಯೋಜನೆ ಜಾರಿ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೊಂದು ರೈತ ಬಂಡಾಯ ಮಾಡುತ್ತೇವೆ ಎಂದು ರಾಜ್ಯ ರೈತ ಸೇನಾ ಸಂಘಟನೆ ಅಧ್ಯಕ್ಷ ವೀರೇಶ ಸೊಬರದಮಠ(Veeresh Sobaradamatha) ಎಚ್ಚರಿಸಿದರು.

ಪಟ್ಟಣದ ಎ.ಪಿ. ಪಾಟೀಲ ಗೋದಾಮಿನಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯಲ್ಲಿ(Farmers Meeting) ಮಾತನಾಡಿದ ಅವರು, ಕಳೆದ 7 ವರ್ಷದಿಂದ ಮಹದಾಯಿಗಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ(Government of Karnataka) ಮಹದಾಯಿ ಹೋರಾಟವನ್ನು ಹಗುರವಾಗಿ ಪರಿಗಣಿಸಿದರೆ ಮುಂದಿನ ದಿನಗಳಲ್ಲಿ ಮತ್ತೊಂದು ನರಗುಂದದಲ್ಲಿ(Nargund) ರೈತ ಬಂಡಾಯ ಮಾಡಲು ಸಿದ್ಧ ಎಂದರು.

Tap to resize

Latest Videos

undefined

'ರೈತರ ಕೊಂದ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ'

ರೈತ ಮುಖಂಡ ಶಿವಪ್ಪ ಹೊರಕೇರಿ ಮಾತನಾಡಿ, ಈ ಹಿಂದೆ ಮಹದಾಯಿ ಕಳಸಾ- ಬಂಡೂರಿ(Kalasa Banduri) ಯೋಜನೆ ಜಾರಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಈ ಹಿಂದೆ ಹೋರಾಟ ಮಾಡಿದ್ದರು. ಅದನ್ನು ಮರೆಯಬಾರದು. ಆದಷ್ಟು ಬೇಗ ಯೋಜನೆ ಜಾರಿಗೆ ಮುಖ್ಯಮಂತ್ರಿಗಳು ಮುಂದಾಗಬೇಕೆಂದು ಮನವಿ ಮಾಡಿದರು.

ಹನಮಂತ ಮಡಿವಾಳರ, ಯಲ್ಲಪ್ಪ ಸಾಬಳೆ, ಎ.ಪಿ. ಪಾಟೀಲ, ವೀರಬಸಪ್ಪ ಹೂಗಾರ, ಎಸ್‌.ಬಿ. ಜೋಗಣ್ಣವರ, ಪರಶುರಾಮ ಜಂಬಗಿ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಅರ್ಜುನ ಮಾನೆ, ನಾಗರತ್ನ ಸವಳಭಾವಿ, ಅನಸವ್ವ ಶಿಂದೆ, ಮಲ್ಲವ್ವ ಭೋವಿ, ಬಸವ್ವ ಪೂಜಾರ, ವಾಸು ಚವಾಣ, ರಾಮಚಂದ್ರ ಸಾಬಳೆ, ಎಲ್‌.ಬಿ. ಮನನೇಕೊಪ್ಪ, ಪರಮೇಶ ಅಣ್ಣಿಗೇರಿ, ಶಿವಪ್ಪ ಸಾತಣ್ಣವರ, ಯಲ್ಲಪ್ಪ ಚಲವಣ್ಣವರ, ವೆಂಕಪ್ಪ ಹುಜರತ್ತಿ ಇದ್ದರು.

‘ಕಳಸಾ ಬಂಡೂರಿ’ ಕಾಮಗಾರಿಗೆ ಚಾಲನೆ ದೊರೆಯಲಿ

ನರಗುಂದ: ಕಳೆದ ಏಳು ವರ್ಷಗಳಿಂದ ರೈತರು ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಹೋರಾಟ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಯೋಜನೆಯ(Project) ಕಾಮಗಾರಿಗೆ ಚಾಲನೆ ನೀಡಬೇಕೆಂದು ನ.26 ರಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀ ಆಗ್ರಹಿಸಿದ್ದರು. 

2324ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದ್ದ ಅವರು, ರಾಜ್ಯದ ಉತ್ತರ ಕರ್ನಾಟಕ(North Karnataka) ಭಾಗದ ಮಲಪ್ರಭಾ(Malaprabha River) ಅಚ್ಚುಕಟ್ಟು ಪ್ರದೇಶದ ರೈತರು(Farmers) ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರನ್ನು ತಂದು ಮಲಪ್ರಭಾ ಜಲಾಶಯಕ್ಕೆ(Malaprabha Dam) ಜೋಡಣೆಗೆ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಕಾಮಗಾರಿಗೆ ಚಾಲನೆ ನೀಡುತ್ತಿಲ್ಲ. ಈಗಾಗಲೇ ಮಹದಾಯಿ ಜಲ ವಿವಾದಕ್ಕೆ(Water Dispute) ನೇಮಕವಾದ ನ್ಯಾಯಾಧಿಕರಣ ನ್ಯಾಯಾಧೀಶರು ಕರ್ನಾಟಕ ರಾಜ್ಯ 13.40 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ(Permission ನೀಡಿದೆ ಎಂದರು.

ಕಳಸಾ-ಬಂಡೂರಿಗಾಗಿ ಸಿಎಂ ಭೇಟಿಯಾದ ರೈತರು

ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಲ್ಲಿ ಹರಿಯುವ ನೀರಿನಲ್ಲಿ ನಮ್ಮ ಪಾಲಿನ ನೀರು ಪಡೆದುಕೊಳ್ಳಲು ಕೂಡಲೇ ಮುಂದಾಗದಿದ್ದರೆ ಮಹದಾಯಿ ಹೋರಾಟಗಾರರು ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಇಳಿಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು. 

ಈ ಸಂದರ್ಭದಲ್ಲಿ ವೀರಬಸಪ್ಪ ಹೂಗಾರ, ಎಸ್‌.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ರಾಮಚಂದ್ರ ಸಾಬಳೆ, ಅರ್ಜುನ ಮಾನೆ, ಯಲ್ಲಪ್ಪ ಚಲವಣ್ಣವರ, ಈರಣ್ಣ ಗಡಗಿ, ವಾಸು ಚವಾಣ, ಅನಸವ್ವ ಶಿಂಧೆ, ನಾಗರತ್ನ ಸವಳಭಾವಿ, ಮಲ್ಲವ್ವ ಭೋವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
 

click me!