ಭವಿಷ್ಯದ ವಿದ್ಯುತ್ ಭಾರ ನಿಭಾಯಿಸಲು ಸರ್ಕಾರ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ

By Kannadaprabha News  |  First Published Jan 28, 2024, 10:03 PM IST

ಬೆಳಗಾವಿಯ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ಹತ್ತು ವರ್ಷಗಳ ವಿದ್ಯುತ್‌ ಬೇಡಿಕೆ ಮುಂದಿರಿಸಿ ಇಂದು ನಗರದಲ್ಲಿ ಹಾಲಿ ಇರುವ 33/11 ಕೆ.ವಿ ಕಿಲ್ಲಾ ವಿದ್ಯುತ್‌ ಉಪಕೇಂದ್ರವನ್ನು₹ 33.91 ಕೋಟಿ ವೆಚ್ಚದಲ್ಲಿ 110/11 ಕೆ.ವಿ ವಿದ್ಯುತ್‌ ಉಪಕೇಂದ್ರವಾಗಿ ಉನ್ನತೀಕರಿಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.


ಬೆಳಗಾವಿ (ಜ.28): ಬೆಳಗಾವಿಯ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ಹತ್ತು ವರ್ಷಗಳ ವಿದ್ಯುತ್‌ ಬೇಡಿಕೆ ಮುಂದಿರಿಸಿ ಇಂದು ನಗರದಲ್ಲಿ ಹಾಲಿ ಇರುವ 33/11 ಕೆ.ವಿ ಕಿಲ್ಲಾ ವಿದ್ಯುತ್‌ ಉಪಕೇಂದ್ರವನ್ನು₹ 33.91 ಕೋಟಿ ವೆಚ್ಚದಲ್ಲಿ 110/11 ಕೆ.ವಿ ವಿದ್ಯುತ್‌ ಉಪಕೇಂದ್ರವಾಗಿ ಉನ್ನತೀಕರಿಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಬೆಳಗಾವಿ ಗಾಂಧಿ ನಗರದಲ್ಲಿ ಕೆಪಿಟಿಸಿಎಲ್‌ ನ ಹಾಲಿ ಇರುವ 33/11 ಕೆ.ವಿ ಕಿಲ್ಲಾ ವಿದ್ಯುತ್‌ ಉಪಕೇಂದ್ರವನ್ನು 110/11 ಕೆ.ವಿ ವಿದ್ಯುತ್‌ ಉಪಕೇಂದ್ರದ ಉನ್ನತೀಕರಣಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ಈ ವಿದ್ಯುತ್‌ ಉಪಕೇಂದ್ರದ ನಿರ್ಮಾಣದಿಂದ ಫೋರ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಗುಣಮಟ್ಟದ ಗೃಹ, ಕೈಗಾರಿಕೆ ಹಾಗೂ ನೀರಾವರಿ ಚಟುವಟಿಕೆಗಳಿಗೆ ವಿದ್ಯುತ್ ಬೇಡಿಕೆ ಈಡೇರಿಸಬಹುದಾಗಿದೆ ಎಂದು ತಿಳಿಸಿದರು. ಭವಿಷ್ಯದ ವಿದ್ಯುತ್ ಭಾರವನ್ನು ನಿಭಾಯಿಸಬಹುದಾಗಿದೆ. ವಿದ್ಯುತ್ ಪೂರೈಕೆಯಲ್ಲಿನ ಅಡಚಣೆಗಳು, ವೋಲ್ವೇಜ್ ಸಮಸ್ಯೆಗಳನ್ನು ಹಾಗೂ ವಿದ್ಯುತ್ ನಷ್ಟವನ್ನು ನಿವಾರಿಸಬಹುದಾಗಿದೆ. 

Tap to resize

Latest Videos

ಇದರಿಂದ ವಿದ್ಯುತ್ ವಿತರಣೆ ವ್ಯವಸ್ಥೆಯಲ್ಲಿ ಸುಧಾರಣೆಯಾಗುವುದು. ಉದ್ದೇಶಿತ ವಿದ್ಯುತ್ ಉಪ-ಕೇಂದ್ರದಿಂದ ಆಝಾದ ನಗರ, ಫೋರ್ಟ್‌ ರೋಡ, ಬಸವನ ಕುಡಚಿ, ಶೆಟ್ಟಿ ಗಲ್ಲಿ ರೆಸಿಡ್ಯು ಯಲ್, ಧಾರವಾಡ ರೋಡ, ಫೋರ್ಟ ರೋಡ, ಮಾಳಿಗಲ್ಲಿ, ಶೆಟ್ಟಿ ಗಲ್ಲಿ, ಮಹಾಂತೇಶ ನಗರ, ಪ್ರಸ್ತಾಪಿತ ಶಿವಾಜಿ ನಗರ, ಪ್ರಸ್ತಾಪಿತ ಶಿವಬಸವ ನಗರ, ಚಂದನ ಹೊಸೂರ ಪ್ರದೇಶಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಶಾಸಕ ಆಸೀಪ್‌ ಸೇಠ್‌ ಮಾತನಾಡಿ, ಬೆಳಗಾವಿ ತಾಲೂಕಿನ 33/11 ಕೆ.ವಿ ಫೋರ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಲಿ ಇರುವ 110 ನೆಹರು ನಗರ ಹಾಗೂ 110 ಕೆ.ವಿ ವಡಗಾಂವ ವಿದ್ಯುತ್ ಉಪ-ಕೇಂದ್ರದಿಂದ 33ಕೆ.ವಿ. ಮಾರ್ಗಗಳ ಮುಖಾಂತರ ವಿದ್ಯುತ್ ಪೂರೈಸಲಾಗುತ್ತಿದೆ. 

ಅಧಿಕಾರಕ್ಕೆ ಬಂದು 7 ತಿಂಗಳಲ್ಲಿ ಸಿದ್ದರಾಮಯ್ಯನವರು ಏನು ಕಡಿದು ಕಟ್ಟೆಹಾಕಿಲ್ಲ: ಸಂಸದ ಪ್ರತಾಪ್ ಸಿಂಹ

ಸದರಿ ಫೋರ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಗೃಹ ಬಳಕೆ, ಕೈಗಾರಿಕೆ ಹಾಗೂ ಕೃಷಿ ಚಟುವಟಿಕೆಗಳು ಹೆಚ್ಚು ಆಗುತ್ತಿದ್ದು, 33ಕೆ.ವಿ ಮಾರ್ಗಗಳ ಉದ್ದವು ತುಂಬಾ ಇರುವುದರಿಂದ ಉತ್ತಮವಾದ ವೋಲೈಜ್ ದೊರೆಯುತ್ತಿಲ್ಲ. ಆದ್ದರಿಂದ ಈ ಫೋರ್ಟ ವಿದ್ಯುತ್ ಉಪ-ಕೇಂದ್ರದ ಉನ್ನತೀಕರಣದಿಂದ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಮಹೇಂದ್ರ ತಮ್ಮಣ್ಣವರ್‌, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌ , ಜಿಪಂ ಸಿಇಓ ರಾಹುಲ ಶಿಂಧೆ, ಹೆಸ್ಕಾ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶ್ವಿನ ಶಿಂಧೆ ಮೊದಲಾದವರು ಉಪಸ್ಥಿತರಿದ್ದರು.

click me!