ಉತ್ತರ ಕನ್ನಡಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರ ಬದ್ಧ: ಸುಧಾಕರ್‌

By Kannadaprabha NewsFirst Published Sep 23, 2022, 6:00 AM IST
Highlights

ಶೀಘ್ರ ಶಾಸಕರ ಜತೆ ಸಭೆ ನಡೆಸಿ ತೀರ್ಮಾನ, ವಿಧಾನಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್‌ ಭರವಸೆ, ಆಸ್ಪತ್ರೆಗೆ ಆಗ್ರಹಿಸಿ ಬಿಜೆಪಿಗರಿಂದಲೇ ಧರಣಿ

ವಿಧಾನಸಭೆ(ಸೆ.23):  ಉತ್ತರ ಕನ್ನಡ ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಹಣಕಾಸು ಮಂತ್ರಿಗಳೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಸದ್ಯದಲ್ಲೇ ಆ ಭಾಗದ ಜನಪ್ರತಿನಿಧಿಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಮಂಜೂರಾತಿ ನೀಡಬೇಕೆಂದು ಆಗ್ರಹಿಸಿ ಆಡಳಿತರೂಢ ಬಿಜೆಪಿ ಸದಸ್ಯರೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಯತ್ನಿಸಿದರು. ಉತ್ತರ ಕನ್ನಡ ಜಿಲ್ಲೆಯ ಮನವಿಗೆ ಪೂರಕವಾಗಿ ಸ್ಪಂದಿಸದೆ ಜಿಲ್ಲೆಗೆ ಸರ್ಕಾರ ಅನ್ಯಾಯ ಮಾಡುತ್ತಿದ್ದು, ತಾತ್ವಿಕ ಒಪ್ಪಿಗೆಯಂತಹ ಮಾತು ಹೇಳದೆ ಕೂಡಲೇ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು.

ಸ್ಪೀಕರ್‌ ವಿರುದ್ಧ ಮಾಧುಸ್ವಾಮಿ ಗರಂ

ಪ್ರಶ್ನೋತ್ತರ ಅವಧಿಯಲ್ಲಿ ಸೀಮಿತ ಉಪ ಪ್ರಶ್ನೆಗೆ ಮಾತ್ರ ಅವಕಾಶವಿದ್ದರೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಚರ್ಚೆಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆಗೆ ಅವಕಾಶ ನೀಡಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆಗೆ ಸಚಿವ ಮಾಧುಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Uttara Kannada: ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯರ ನೇಮಕವೇ ಸವಾಲು!

ಇದಕ್ಕೆ ಸ್ಪೀಕರ್‌ ಕಾಗೇರಿ, ‘ನಾನು ಆ ಭಾಗದಿಂದಲೇ ಬಂದಿದ್ದೇನೆ. ನಾನು ಅವಕಾಶ ನೀಡದಿದ್ದರೆ ಹೊರಗಿನ ನಮ್ಮ ಸ್ನೇಹಿತರು ಕಾಗೇರಿ ಅವಕಾಶ ನೀಡಲಿಲ್ಲ ಎಂದು ಬರೆಯುತ್ತಾರೆ. ಹೀಗಾಗಿ ಹೆಚ್ಚು ಮಾತನಾಡಲು ಅವಕಾಶ ನೀಡುತ್ತಿದ್ದೇನೆ’ ಎಂದು ಸಮಜಾಯಿಷಿ ನೀಡಿದರು.

ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ರೂಪಾಲಿ ನಾಯ್‌್ಕ, ಉತ್ತರ ಕನ್ನಡ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲದೆ ಅಪಘಾತ ಮತ್ತಿತರ ಗಂಭೀರ ಪ್ರಕರಣಗಳಲ್ಲಿ ದೂರದ ಜಿಲ್ಲೆಗಳಿಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಮುಖ್ಯಮಂತ್ರಿಗಳು ತಾತ್ವಿಕ ಒಪ್ಪಿಗೆ ನೀಡಿರುವಂತೆ ಕೂಡಲೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಮಂಜೂರಾತಿ ನೀಡಬೇಕು. ಅಲ್ಲಿಯವರೆಗೆ ಕಾರವಾರದಲ್ಲಿನ ಜಿಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ 30 ಕೋಟಿ ರು. ಅನುದಾನ ನೀಡಿ ಹೆಚ್ಚುವರಿ ವೈದ್ಯಕೀಯ ಸೇವೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮತ್ತೊಬ್ಬ ಬಿಜೆಪಿ ಸದಸ್ಯ ದಿನಕರ್‌ ಶೆಟ್ಟಿಬೆಂಬಲಿಸಿದರು. ಸಚಿವ ಸುಧಾಕರ್‌ ಮಾತನಾಡಿ, ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿಗಳೇ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಗೊತ್ತಿದ್ದರೂ ಈ ವಿಚಾರವನ್ನು ಎಳೆದಾಡುವುದು ಸರಿಯಲ್ಲ. ಆ ಭಾಗದ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಜಾಗ ನಿಗದಿ ಸೇರಿದಂತೆ ರೂಪುರೇಷೆಗಳ ಬಗ್ಗೆ ಚರ್ಚಿಸಿ ಅಂತಿಮ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ದೇಶಪಾಂಡೆ, ಶಿವರಾಂ ವಾಗ್ವಾದ:

ಇದಕ್ಕೂ ಮೊದಲು ಆರ್‌.ವಿ. ದೇಶಪಾಂಡೆ ಅವರು, ‘ಸರ್ಕಾರಕ್ಕೆ ಹಣದ ಕೊರತೆಯಿದೆ. ಕಾರ್ಮಿಕ ಇಲಾಖೆಯಲ್ಲಿ ಹೆಚ್ಚು ಹಣ ಲಭ್ಯವಿರುವುದರಿಂದ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಮಾಡಿದಂತೆ ಇಎಸ್‌ಐ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಶಿವರಾಂ ಹೆಬ್ಬಾರ್‌ ಅವರು ಸರ್ಕಾರಕ್ಕೆ ಸಹಾಯ ಮಾಡಬಹುದು’ ಎಂದು ಸಲಹೆ ನೀಡಿದರು. ಇದು ಶಿವರಾಂ ಹೆಬ್ಬಾರ್‌ ಹಾಗೂ ದೇಶಪಾಂಡೆ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಸ್ಪೀಕರ್‌ ವಿರುದ್ಧ ಮಾಧುಸ್ವಾಮಿ ಗರಂ

ಪ್ರಶ್ನೋತ್ತರ ಅವಧಿಯಲ್ಲಿ ಸೀಮಿತ ಉಪ ಪ್ರಶ್ನೆಗೆ ಮಾತ್ರ ಅವಕಾಶವಿದ್ದರೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಚರ್ಚೆಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆಗೆ ಅವಕಾಶ ನೀಡಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆಗೆ ಸಚಿವ ಮಾಧುಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಹತ್ವದ ತೀರ್ಮಾನ:ಉ.ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು ನನಸು

ಇದಕ್ಕೆ ಸ್ಪೀಕರ್‌ ಕಾಗೇರಿ, ‘ನಾನು ಆ ಭಾಗದಿಂದಲೇ ಬಂದಿದ್ದೇನೆ. ನಾನು ಅವಕಾಶ ನೀಡದಿದ್ದರೆ ಹೊರಗಿನ ನಮ್ಮ ಸ್ನೇಹಿತರು ಕಾಗೇರಿ ಅವಕಾಶ ನೀಡಲಿಲ್ಲ ಎಂದು ಬರೆಯುತ್ತಾರೆ. ಹೀಗಾಗಿ ಹೆಚ್ಚು ಮಾತನಾಡಲು ಅವಕಾಶ ನೀಡುತ್ತಿದ್ದೇನೆ’ ಎಂದು ಸಮಜಾಯಿಷಿ ನೀಡಿದರು.

ಸ್ಪೀಕರ್‌ ಮಾತಿಗೆ ಗರಂ ಆದ ಮಾಧುಸ್ವಾಮಿ, ‘ಹಾಗಂತ ಮಾತನಾಡಿಕೊಳ್ಳಿ ಎಂದು ಬಿಟ್ಬಿಡ್ತೀರಾ? ಇದೇನು ಸದನನಾ? ಒಂದು ಪ್ರಶ್ನೆಯ ಮೇಲೆ ಎಷ್ಟೊತ್ತಾದರೂ ಚರ್ಚಿಸಬಹುದಾ? ಬೇರೆ ಜಿಲ್ಲೆಗಳವರೂ ಇದೇ ರೀತಿ ಕೇಳಿದರೆ ಕೊಡುತ್ತೀರಾ’ ಎಂದು ಕಿಡಿ ಕಾರಿದರು.
 

click me!