ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನದ ಸಿಬ್ಬಂದಿಗೆ ಕೊರೋನಾ..!

Published : Jul 26, 2020, 11:17 AM IST
ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನದ ಸಿಬ್ಬಂದಿಗೆ ಕೊರೋನಾ..!

ಸಾರಾಂಶ

ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆಗಸ್ಟ್ 5ರವರೆಗೂ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ತುಮಕೂರು(ಜು.26): ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆಗಸ್ಟ್ 5ರವರೆಗೂ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ವರಮಹಾಲಕ್ಷ್ಮಿ ಹಬ್ಬದಂದು ಗೊರವನಹಳ್ಳಿ ಲಕ್ಷ್ಮೀ ದರ್ಶನಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ ಈ ಬಾರಿ ಭಕ್ತರಿಗೆ ದೇವಿ ದರ್ಶನ ಸಿಗುವುದು ಅನುಮಾನ.

ತುಮಕೂರಿನಲ್ಲಿ ಒಂದೇ ಕುಟುಂಬದ 11 ಮಂದಿಗೆ ಸೋಂಕು!

ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬದಂದು ಭಕ್ತರು ಗೊರವನಹಳ್ಳಿ ಲಕ್ಷ್ಮಿ ದರ್ಶನ ಪಡೆಯುತ್ತಿದ್ದರು. ಈ ಭಾರಿ ಭಕ್ತರಿಗೆ ದೇವಿಯ ದರ್ಶನವಿಲ್ಲದೆ ನಿರಾಸೆಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಮುಂದಿನ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಬರಲಿದೆ.

PREV
click me!

Recommended Stories

'ಅಮ್ಮಾ ಕ್ರಿಕೆಟ್ ಆಡಲು ಹೋಗ್ತೀನಿ' ಎಂದು ಹೊರಟಿದ್ದ ಮಗ ದುರಂತ ಅಂತ್ಯ, ದಾವಣಗೆರೆಯಲ್ಲಿ ವಿದ್ರಾವಕ ಘಟನೆ
ಕಾಡು ಮರೆತು ಊರ ಮನೆ ಗೇಟ್ ಕಾಯ್ತಿದೆ ನರಭಕ್ಷಕ ಚಿರತೆ! ರಾಮನಗರದಲ್ಲಿ ಬೆಚ್ಚಿಬಿದ್ದ ಗ್ರಾಮಸ್ಥರು!