ನನ್ನ ತಾಯಿ ಶಾಕ್‌ನಲ್ಲಿದ್ದಾರೆ : 15 ದಿನ ಟೈಂ ಬೇಕು

Kannadaprabha News   | Asianet News
Published : Oct 12, 2021, 08:15 AM IST
ನನ್ನ ತಾಯಿ ಶಾಕ್‌ನಲ್ಲಿದ್ದಾರೆ : 15 ದಿನ ಟೈಂ ಬೇಕು

ಸಾರಾಂಶ

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ನನ್ನ ತಾಯಿ ಹಿಂದೂ ಧರ್ಮಕ್ಕೆ ವಾಪಾಸಾಗಿದ್ದಾರೆ. ಸದ್ಯ ಆಘಾತಕ್ಕೊಳಗಾಗಿರುವುದರಿಂದ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಇನ್ನೂ 15 ದಿನಗಳ ಕಾಲ ಕಾಲಾವಕಾಶ ಬೇಕಿದೆ

 ಹೊಸದುರ್ಗ (ಅ.12):  ಕ್ರೈಸ್ತ ಧರ್ಮಕ್ಕೆ ( christian ) ಮತಾಂತರಗೊಂಡಿದ್ದ ನನ್ನ ತಾಯಿ ಹಿಂದೂ ಧರ್ಮಕ್ಕೆ (Hindu religion) ವಾಪಾಸಾಗಿದ್ದಾರೆ. ಸದ್ಯ ಆಘಾತಕ್ಕೊಳಗಾಗಿರುವುದರಿಂದ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಇನ್ನೂ 15 ದಿನಗಳ ಕಾಲ ಕಾಲಾವಕಾಶ ಬೇಕಿದೆ ಎಂದು ಶಾಸಕ ಗೂಳಿ ಹಟ್ಟಿಶೇಖರ್‌ (Goolihatti shekhar) ತಿಳಿಸಿದ್ದಾರೆ.

ಹಾಲುರಾಮೇಶ್ವರ (Halurameshwara) ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ್ದ ಶಾಸಕ ಗೂಳಿ ಹಟ್ಟಿಶೇಖರ್‌ (Goolihatti shekar) ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ನಾಲ್ಕು ಕುಟುಂಬಗಳನ್ನು ಮನವೊಲಿಸಿ ಹಿಂದೂ ಧರ್ಮಕ್ಕೆ ವಾಪಸ್‌ ಕರೆ ತಂದಿದ್ದರು. ಈ ಕಾರ್ಯಕ್ಕೆ ತಮ್ಮ ತಾಯಿಯೇ ಪ್ರೇರಣೆ ಎಂದು ಶಾಸಕರು ಹೇಳಿದ್ದರೂ ಅದರಲ್ಲಿ ತಮ್ಮ ತಾಯಿ ಇರುವ ಬಗ್ಗೆ ಎಲ್ಲೂ ಹೇಳಿರಲಿಲ್ಲ. ಅವರ ತಾಯಿಯೂ ಎಲ್ಲೂ ಪ್ರತ್ಯಕ್ಷ ಕೂಡ ಆಗಿರಲಿಲ್ಲ. ಆದರೆ ಸೋಮವಾರ ಅವರ ಸ್ವಗ್ರಾಮ ಗೂಳಿಹಟ್ಟಿಯ ನಿವಾಸದಲ್ಲಿ ಅವರ ತಾಯಿ ಪ್ರತ್ಯಕ್ಷವಾಗಿದ್ದು, ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ.

'ಘರ್ ವಾಪ್ಸಿ' ಗೂಳಿಹಟ್ಟಿ ಶೇಖರ್ ತಾಯಿ ಮತ್ತು ಕುಟುಂಬಗಳು ಹಿಂದು ಧರ್ಮಕ್ಕೆ

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಗೂಳಿಹಟ್ಟಿಶೇಖರ್‌ ‘ನನ್ನ ತಾಯಿ ಶಾಕ್‌ನಲ್ಲಿದ್ದಾರೆ. ಹಾಗಾಗಿ ಎಂದಿನಂತೆ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ಜನರೊಂದಿಗೆ ಬೆರೆಯಲು ಇನ್ನೂ 15 ದಿನ ಕಾಲಾವಕಾಶ ಬೇಕಾಗಿದೆ ಎಂದು ತಿಳಿಸಿದರು.

ಸದನದಲ್ಲಿ ಅವರು ಇತ್ತೀಚೆಗೆ ತನ್ನ ಕ್ಷೇತ್ರದಲ್ಲಿ ಕ್ರೈಸ್ತ ಮಿಷನರಿಗಳಿಂದ (missionary ) ವ್ಯಾಪಕ ಮತಾಂತರ ನಡೆಯುತ್ತಿದ್ದು ತನ್ನ ತಾಯಿ ಸಹ ಮತಾಂತರವಾಗಿದ್ದಾರೆ ಎಂದು ಹೇಳಿದ್ದರು.

ನಾಲ್ಕು ಕುಟುಂಬಗಳು ವಾಪಸ್

ಬೇರೊಂದು ಧರ್ಮಕ್ಕೆ ಮತಾಂತರಗೊಂಡಿದ್ದ (convert) ನಾಲ್ಕು ಕುಟುಂಬಗಳನ್ನು ಮತ್ತೆ ಹಿಂದೂ (Hindu)  ಧರ್ಮಕ್ಕೆ ಕರೆತರಲಾಗಿದೆ.

ನನ್ನ ತಾಯಿಯನ್ನೂ ಮತಾಂತರ ಮಾಡಿದ್ದಾರೆ ಎಂದು ಸದನದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದ ಬಿಜೆಪಿ (BJP) ಶಾಸಕ ಗೂಳಿಹಟ್ಟಿ ಶೇಖರ್ (Gulihatti shekar), ಕ್ರೈಸ್ತ ಮತಾಂತರವಾಗಿದ್ದವರನ್ನು ತಮ್ಮ ನೇತೃತ್ವದಲ್ಲಿ ಮರಳಿ ಹಿಂದು ಧರ್ಮಕ್ಕೆ (religion) ಕರೆಸಿಕೊಂಡಿದ್ದಾರೆ.

ವಿಧಾನಸಭೆಯಲ್ಲಿ 'ಕವರ್ ಸ್ಟೋರಿ' ಸದ್ದು, ಮತಾಂತರದ ಬಗ್ಗೆ ಧ್ವನಿ ಎತ್ತಿದ ಗೂಳಿಹಟ್ಟಿ!

ಹೊಸದುರ್ಗ (Hosadurga) ತಾಲೂಕಿನ ಬಲ್ಲಾಳ ಸಮುದ್ರ ಗ್ರಾಮದ ಸುಡುಗಾಡು ಸಿದ್ದ ಸಮುದಾಯದವರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದರು. ಅವರೆಲ್ಲರನ್ನೂ ಇಂದು (ಅ.10) ಹಾಲುರಾಮೇಶ್ವರ ದೇವಾಲಯದಲ್ಲಿ ಘರ್​ ವಾಪಸಿ ಮಾಡಲಾಗಿದೆ

ಹೊಸದುರ್ಗ (Hosadurga) ತಾಲೂಕಿನ ಬಿಜೆಪಿ (BJP) ಶಾಸಕ ಗೂಳಿಹಟ್ಟಿ ಶೇಖರ್ ನೇತತ್ವದಲ್ಲಿ ಪ್ರದೀಪ್ ಕುಟುಂಬ ಸೇರಿದಂತೆ ಒಟ್ಟು 4 ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರಲಾಗಿದೆ.

ಹಾಲುರಾಮೇಶ್ವರ ದೇವಸ್ಥಾನದಲ್ಲಿ ಮೈಮೇಲೆ ನೀರು ಚಿಮುಕಿಸಿಕೊಂಡು ಶಿಲುಬೆ ತೆಗೆದಿಟ್ಟ ಬಳಿಕ ಕಂಕಣ ಕಟ್ಟಿಸಿ ಜತೆಗೆ  ಮಂಜುನಾಥಸ್ವಾಮಿ ಫೋಟೋ ನೀಡಿ  ಮಾತೃಧರ್ಮಕ್ಕೆ ಸ್ವಾಗತಿಸಿಕೊಳ್ಳಲಾಯಿತು.

ಇತ್ತೀಚೆಗೆ ತಾನೆ ಗೂಳಿಹಟ್ಟಿ ಶೇಖರ್ ಅವರ ತಾಯಿಯನ್ನೇ ಮತಾಂತರ ಮಾಡಲಾಗಿತ್ತು. ಈ ಬಗ್ಗೆ ಗೂಳಿಹಟ್ಟಿ ಶೇಖರ್ ಧ್ವನಿ ಎತ್ತಿದ್ದು, ನಮ್ಮ ತಾಯಿ ಮಾತ್ರವಲ್ಲ ನೂರಾರು ಅಮಾಯಕರನ್ನೂ ಮತಾಂತರ ಪಿಡುಗಿಗೆ ಸಿಲುಕಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಇದು ಭಾರೀ ಗಂಭೀರ ಸ್ವರೂಪ ಪಡೆದುಕೊಂಡಿತ್ತು.

PREV
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್