ಆನ್‌ಲೈನ್‌ ಕ್ಲಾಸ್‌: ಸರ್ಕಾರಿ ಶಾಲಾ ಮಕ್ಕಳಿಗೂ ಗೂಗಲ್‌ ಮೀಟ್‌ ತರಗತಿ

By Kannadaprabha News  |  First Published Jul 23, 2020, 7:12 AM IST

ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜು.1ರಿಂದಲೇ ಆರಂಭವಾಗಿದೆ|ಅಗಸ್ತ್ಯ ಫೌಂಡೇಷನ್‌ ಪ್ರಯತ್ನ ವ್ಯಾಟ್ಸ್‌ಗ್ರೂಪ್‌, ಗೂಗಲ್‌ ಮೀಟ್‌ ಮೂಲಕ ತರಗತಿ| 6 ರಿಂದ 10ನೇ ತರಗತಿಯ 7 ಸಾವಿರಕ್ಕೂ ಅಧಿಕ ಮಕ್ಕಳಿಗೆ ಪಾಠ|


ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.23): ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಪ್ರಾರಂಭಿಸುತ್ತಿದ್ದಂತೆ ಸರ್ಕಾರಿ ಶಾಲೆಗಳ ಮಕ್ಕಳ ಗತಿಯೇನು ಎಂಬ ಪ್ರಶ್ನೆ ಶಿಕ್ಷಣ ಪ್ರೇಮಿಗಳಲ್ಲಿ ಉಂಟಾಗಿತ್ತು. ಸರ್ಕಾರ ಇದೀಗಷ್ಟೇ ಚಂದನ ವಾಹಿನಿಯಲ್ಲಿ ಪ್ರೌಢಶಾಲೆ ಮಕ್ಕಳಿಗೆ ತರಗತಿ ನಡೆಸುವ ಮೂಲಕ ಈ ಪ್ರಶ್ನೆಗೆ ಉತ್ತರಿಸಿದೆ. ಆದರೆ, ಸರ್ಕಾರಕ್ಕೂ ಮುಂಚೆಯೇ ಇಲ್ಲಿನ ಪ್ರತಿಷ್ಠಾನವೊಂದು ಗ್ರಾಮೀಣ ಪ್ರದೇಶ ಹಾಗೂ ಶಹರಗಳಲ್ಲಿನ ಮಕ್ಕಳಿಗೆ ಜು. 1ರಿಂದಲೇ ಆನ್‌ಲೈನ್‌ ತರಗತಿ ನಡೆಸುತ್ತಿದೆ. ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗೂ ಕಡಿಮೆಯಿಲ್ಲದಂತೆ ತರಗತಿಗಳು ನಡೆಯುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Tap to resize

Latest Videos

undefined

ಹೌದು! ಹುಬ್ಬಳ್ಳಿ ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡು ಸರ್ಕಾರಿ ಮಕ್ಕಳಲ್ಲಿನ ಬುದ್ಧಿಮತ್ತೆ ಹೆಚ್ಚಿಸುವ ಉದ್ದೇಶದಿಂದ ಕೆಲಸ ನಿರ್ವಹಿಸುತ್ತಿರುವ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಏಕಸ್‌ ಪ್ರತಿಷ್ಠಾನ, ಸೋನಾಟಾ ಸಾಫ್ಟ್‌ವೇರ್‌, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಅನುಸೂಯಾ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಮತ್ತು ಸಂಚಾರಿ ವಿಜ್ಞಾನ ಪ್ರಯೋಗಾಲಯವೇ ಈ ಕೆಲಸ ನಿರ್ವಹಿಸುತ್ತಿದೆ.

ಏನಿದು ಫೌಂಡೇಷನ್‌?

ಅಗಸ್ತ್ಯ ಅಂತಾರಾಷ್ಟ್ರೀಯ ಫೌಂಡೇಷನ್‌ ಪ್ರತಿವರ್ಷ ಮಕ್ಕಳನ್ನು ಪ್ರಯೋಗಾಲಯಕ್ಕೆ ಕರೆದುಕೊಂಡು ಬಂದು ಪ್ರಯೋಗಗಳನ್ನು ಮಾಡಿಸುತ್ತಿತ್ತು. ಅಗಸ್ತ್ಯ ಫೌಂಡೇಷನ್‌ ಹುಬ್ಬಳ್ಳಿ, ಗದಗ, ಯಾದಗಿರಿ, ಕಲಬುರಗಿ, ರಾಯಚೂರು, ಬೆಳಗಾವಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಇಲ್ಲಿ 41 ಜನ ಶಿಕ್ಷಕರಿದ್ದಾರೆ. ಈ ಫೌಂಡೇಷನ್‌ನ ಉದ್ದೇಶ ಸರ್ಕಾರಿ ಶಾಲೆಗಳ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸಿ ಅವರಲ್ಲಿ ಈ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಬರುವಂತೆ ಮಾಡುವುದಾಗಿದೆ. ಮುಂದೆ ಕಾಲೇಜ್‌ಗಳಲ್ಲಿ ಈ ಎರಡು ವಿಷಯಗಳಲ್ಲಿ ಅವರಿಗೆ ಸಮಸ್ಯೆಯಾಗಬಾರದೆಂಬ ಸದುದ್ದೇಶ ಹೊಂದಿ ಕೆಲಸ ನಿರ್ವಹಿಸುತ್ತಿದೆ.

ಸ್ವಾಬ್ ಟೆಸ್ಟ್ ಕೇಂದ್ರಗಳೇ ಜನರಿಗೆ‌ ಕೊರೊನಾ ಸೋಂಕು..!

ಸದ್ಯ ಕೊರೋನಾ ಹಾವಳಿ ವಿಪರೀತವಾಗಿದೆ. ಶಾಲೆಗಳು ಇನ್ನೂ ಪ್ರಾರಂಭವಾಗಿಲ್ಲ. ಹೀಗಾಗಿ ಮಕ್ಕಳನ್ನು ಪ್ರಯೋಗಾಲಯಕ್ಕೆ ಕರೆದುಕೊಂಡು ಬಂದು ಪ್ರಯೋಗಗಳನ್ನು ಮಾಡಿ ತೋರಿಸಲು ಸಾಧ್ಯವಿಲ್ಲ. ಜೊತೆಗೆ ಮಕ್ಕಳನ್ನು ಹಾಗೆ ಬಿಟ್ಟರೆ ಬರೀ ಆಟವಾಡುತ್ತಾ ಕಾಲ ಕಳೆಯುತ್ತಾರೆ. ಆಟದ ಜೊತೆಗೆ ಅವರು ಪಾಠವನ್ನೂ ಮಾಡುವಂತಾಗಬೇಕು ಎಂಬ ಉದ್ದೇಶದಿಂದ ಆನ್ವೇಷಣೆ, ಆಟ, ಕಲಿಕೆ ಎಂಬ ಘೋಷವಾಕ್ಯದೊಂದಿಗೆ ಆನ್‌ಲೈನ್‌ ತರಗತಿಗಳನ್ನು ಪ್ರಾರಂಭಿಸಿದೆ.
ತಮ್ಮ ಪ್ರಯೋಗಾಲಯಕ್ಕೆ ಬರುತ್ತಿದ್ದ 6ರಿಂದ 10ನೇ ತರಗತಿಯ ಮಕ್ಕಳಲ್ಲಿ ಯಾರ ಬಳಿ ಸ್ಮಾರ್ಟ್‌ಫೋನ್‌ಗಳಿವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಆಯಾ ತರಗತಿಗಳದ್ದು ಪ್ರತ್ಯೇಕ ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿಕೊಂಡಿದ್ದಾರೆ. ವಾರಕ್ಕೆರಡು ದಿನ ಬೆಳಗ್ಗೆ ಎರಡು ಗಂಟೆ, ಸಂಜೆ ಎರಡು ಗಂಟೆಯಂತೆ ಒಟ್ಟು ಒಂದು ತರಗತಿಗೆ 8 ಗಂಟೆ ಗೂಗಲ್‌ ಮಿಟ್‌ನಲ್ಲಿ ತರಗತಿ ನಡೆಸಲಾಗುತ್ತಿದೆ. ಹೀಗೆ ಸೋಮವಾರದಿಂದ ಶುಕ್ರವಾರದ ವರೆಗೆ 6ರಿಂದ 10ನೇ ತರಗತಿ ವರೆಗೆ ಪಾಠಗಳು ನಡೆಯುತ್ತವೆ. ಉಳಿದ ನಾಲ್ಕು ದಿನ ಮನೆಯಲ್ಲಿ ಕುಳಿತು ಯಾವ ಚಟುವಟಿಕೆ ಮಾಡಬೇಕು. ಯಾವ ರೀತಿ ಅಭ್ಯಾಸ ಮಾಡಬೇಕು ಎಂಬುದನ್ನು ಹೇಳಲಾಗುತ್ತದೆ. ಇನ್ನೂ ಮಕ್ಕಳಿಗೆ ಏನಾದರೂ ಸಂಶಯವಿದ್ದರೆ ಗೂಗಲ್‌ ಮಿಟ್‌ ಪಾಠ ನಡೆಯುವಾಗಲೂ ಕೇಳಬಹುದು. ಇಲ್ಲವೇ ಯಾವ ತರಗತಿ ಇಲ್ಲದ ಶನಿವಾರ ವ್ಯಾಟ್ಸ್‌ಗ್ರೂಪ್‌ಲ್ಲಿ ಪ್ರಶ್ನೆ ಬರೆದು ಶಿಕ್ಷಕರಿಂದ ಉತ್ತರ ಪಡೆದುಕೊಳ್ಳಬಹುದಾಗಿದೆ.

ಸರ್ಕಾರಿ ಶಾಲೆಗಳಿಗೆ ಹೋಗುವ ಮಕ್ಕಳೆಂದರೆ ಬಡವರು, ಎಲ್ಲ ಮಕ್ಕಳ ಪಾಲಕರ ಬಳಿ ಸ್ಮಾರ್ಟ್‌ಫೋನ್‌ ಇರಲ್ಲ. ಹೀಗೆ ಸ್ಮಾರ್ಟ್‌ಫೋನ್‌ ಇಲ್ಲದ ಮಕ್ಕಳು ತಮ್ಮ ಮನೆಗೆ ಹತ್ತಿರ ಇರುವ ಸ್ಮಾರ್ಟ್‌ಫೋನ್‌ ಹೊಂದಿದ ಸಹಪಾಠಿಗಳ ಮನೆಗೆ ತೆರಳಿ ಗೂಗಲ್‌ಮಿಟ್‌ನಲ್ಲಿ ನಡೆಯುವ ತರಗತಿಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.

ಯಾವ್ಯಾವ ಜಿಲ್ಲೆ:

ಧಾರವಾಡ, ಗದಗ, ಬೆಳಗಾವಿ, ಯಾದಗಿರಿ, ಕಲಬುರಗಿ ಜಿಲ್ಲೆಗಳ 6995ಕ್ಕೂ ಹೆಚ್ಚು ಮಕ್ಕಳು ಅಗಸ್ತ್ಯ ಫೌಂಡೇಷನ್‌ನ ಗೂಗಲ್‌ ಮಿಟ್‌ ತರಗತಿಯ ಲಾಭ ಪಡೆಯುತ್ತಿದ್ದಾರೆ. ಜು. 1ರಿಂದಲೇ ನಾವು ಗೂಗಲ್‌ ಮಿಟ್‌, ವ್ಯಾಟ್ಸ್‌ ಆ್ಯಪ್‌ ಮೂಲಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪಾಠ ಮಾಡುತ್ತಿದ್ದೇವೆ. ಒಂದೊಂದು ತರಗತಿಗೆ ವಾರಕ್ಕೆರಡು ದಿನ ಎಂಟು ಗಂಟೆ ತರಗತಿ ನಡೆಸಲಾಗುತ್ತಿದೆ. ಮಕ್ಕಳು, ಪಾಲಕರೂ ಇದಕ್ಕೆ ಬೆಂಬಲಿಸಿದ್ದಾರೆ. ಸದ್ಯ ಇದು ಪ್ರಯೋಗಾತ್ಮಕವಾಗಿದೆ. ಮಕ್ಕಳ ಸಂಖ್ಯೆಯನ್ನು ಇನ್ನಷ್ಟುಹೆಚ್ಚಿಸುವ ಯೋಜನೆ ಇದೆ ಎಂದು ಅಗಸ್ತ್ಯ ಅಂತಾರಾಷ್ಟ್ರೀಯ ಫೌಂಡೇಷನ್‌ ವಲಯ ಮುಖ್ಯಸ್ಥ ಶಿವಾನಂದ ಚಲುವಾದಿ ಅವರು ತಿಳಿಸಿದ್ದಾರೆ.

click me!