ಪ್ಲಾಟ್ ಫಾರ್ಮ್ ಗೆ ನುಗ್ಗಿದ ಗೂಡ್ಸ್ ರೈಲು| ರಸಗೊಬ್ಬರ ಅನ್ ಲೋಡ್ ಮಾಡಲು ಸ್ಟೇಷನ್ ಗೆ ಬಂದಿದ್ದ ಗೂಡ್ಸ್ ರೈಲು| ಗೂಡ್ಸ್ ಯಾರ್ಡ್ ಬಳಿ ರಿವರ್ಸ್ ತೆಗೆದುಕೊಳ್ಳಲು ಮುಂದಾಗಿದ್ದ ವೇಳೆ ಸಂಭವಿಸಿದ ದುರ್ಘಟನೆ| ಪ್ಲಾಟ್ ಫಾರ್ಮ್ ನಲ್ಲಿದ್ದ ಮಳಿಗೆಗೆ ಗುದ್ದಿದ ಗೂಡ್ಸ್ ರೈಲು|
ಯಾದಗಿರಿ(ನ.20): ಗೂಡ್ಸ್ ರೈಲೊಂದು ಪ್ಲಾಟ್ ಫಾರ್ಮ್ ಗೆ ನುಗ್ಗಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗ್ಗೆ (ಬುಧವಾರ) ನಡೆದಿದೆ.
ರಸಗೊಬ್ಬರ ಅನ್ ಲೋಡ್ ಮಾಡಲು ಸ್ಟೇಷನ್ ಗೆ ಬಂದಿದ್ದ ಗೂಡ್ಸ್ ರೈಲು, ಗೂಡ್ಸ್ ಯಾರ್ಡ್ ಬಳಿ ರಿವರ್ಸ್ ತೆಗೆದುಕೊಳ್ಳಲು ಮುಂದಾಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ರೈಲಿನ ಲೋಕೋ ಪೈಲೆಟ್ ಹಿಂಬದಿಯಿಂದ ಸಿಗ್ನಲ್ ನೀಡದ ಹಿನ್ನೆಲೆಯಲ್ಲಿ ರೈಲು ನಿಲ್ದಾಣದೊಳಗೆ ನುಗ್ಗಿದೆ. ಗೂಡ್ಸ್ ರೈಲು ಪ್ಲಾಟ್ ಫಾರ್ಮ್ ನಲ್ಲಿದ್ದ ಮಳಿಗೆಗೆ ಗುದ್ದಿದೆ. ಇದರಿಂದ ಮಳಿಗೆಗೆ ಹಾನಿ ಉಂಟಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರೈಲು ನುಗ್ಗಿದ್ದರಿಂದ ಮಳಿಗೆ ಸುಮಾರು ಹತ್ತು ಅಡಿ ಹಿಂದೆ ಸರಿದಿದೆ. ಅಂಗಡಿಯಲ್ಲಿದ್ದ ಕೆಲಸಗಾರ ಅಪಾಯದಿಂದ ಪಾರಾಗಿದ್ದಾರೆ. ಗೂಡ್ಸ್ ರೈಲು ನುಗ್ಗಿದ್ದರಿಂದ ಕಾಂಪೌಂಡ್ ಕಸಿತವಾಗಿದೆ. ಗೂಡ್ಸ್ ರೈಕು ಏಕಾಏಕಿ ನುಗ್ಗಿದ್ದರಿಂದ ಪ್ಲಾಟ್ ಫಾರ್ಮ್ ನಲ್ಲಿದ್ದ ಪ್ರಯಾಣಿಕರು ಕೂದಲೆಳೆಯಲ್ಲಿ ಅಂತರದಲ್ಲಿ ಪಾರಾಗಿದ್ದಾರೆ. ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.