ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್; ಉಚಿತ ವಿದ್ಯುತ್ ಯೋಜನೆಯ ಮಹತ್ವದ ಅಪ್‌ಡೇಟ್ ಕೊಟ್ಟ ಬೆಸ್ಕಾಂ ಎಂಡಿ

Published : Aug 30, 2026, 04:13 PM IST
Gruha jyothi

ಸಾರಾಂಶ

ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಸರ್ವೆಯ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಫಲಾನುಭವಿಗಳಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ಮತ್ತು ಸರ್ವೆ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬೆಸ್ಕಾಂ ಮನವಿ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೊತಿ ಯೋಜನೆಗಳ ಪರಿಷ್ಕರಣೆ ನಡೆಯುತ್ತಿದೆ. ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ದೂರವಿಡಲು ಸರ್ಕಾರ ಯೋಜನೆಯ ಪರಿಷ್ಕರಣೆ ಮಾಡಲಾಗುತ್ತಿದೆ. ಇದರ ನಡುವೆಯೇ ಗೃಹಜ್ಯೋತಿ ಪರಿಷ್ಕರಣೆಗೆ ಇನ್ನೂ ಒಂದು ತಿಂಗಳು ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಬೆಸ್ಕಾಂ ಎಂಡಿ ಶಿವಶಂಕರ್ ತಿಳಿಸಿದ್ದಾರೆ.

ಜುಲೈ 1 ರಿಂದ ಗೃಹಜ್ಯೋತಿ ಪರಿಷ್ಕರಣೆ ಕಾರ್ಯ

ಗೃಹಜ್ಯೋತಿ ಪರಿಷ್ಕರಣೆ ಫಲಾನುಭವಿಗಳಿಂದ ಸರಿಯಾದ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಗೃಹಜ್ಯೋತಿ ಪರಿಷ್ಕರಣೆಗೆ ಇನ್ನೂ ಒಂದು ತಿಂಗಳು ಗಡುವು ವಿಸ್ತರಣೆ ಮಾಡಲಾಗಿದೆ. ಜುಲೈ 1 ರಿಂದ ಗೃಹಜ್ಯೋತಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಆಗಸ್ಟ್ 31 ರವರೆಗೆ ಸರ್ವೆ ಕಾರ್ಯಕ್ಕೆ ಸರ್ಕಾರ ಅವಧಿ ನಿಗದಿ ಮಾಡಿತ್ತು. ಆದರೆ ಇದೀಗ ಸರ್ಕಾರ ಇನ್ನೂ ಒಂದು ತಿಂಗಳ ಗಡುವು ವಿಸ್ತರಣೆ ಮಾಡಿದೆ.

ಶೇಕಡಾ 70ರಷ್ಟು ಸರ್ವೆ ಕಾರ್ಯ ಮುಕ್ತಾಯ

ಬೆಸ್ಕಾಂ ಸೇರಿ ಎಲ್ಲಾ ಎಸ್ಕಾಂ ಗಳಲ್ಲೂ ಗೃಹಜ್ಯೋತಿ ಪರಿಷ್ಕರಣೆ ಮುಂದುವರಿದಿದ್ದು, ಪ್ರತಿದಿನ ಸಿಬ್ಬಂದಿಗಳು ದಿನ ಬೆಸ್ಕಾಂ ಎಸ್ಕಾಂ ವ್ಯಾಪ್ತಿಯಲ್ಲಿ ಮನೆ ಮನೆ ಸರ್ವೆ ನಡೆಸುತ್ತಿದ್ದಾರೆ. ಈಗಾಗಲೇ ಶೇಕಡಾ 70ರಷ್ಟು ಸರ್ವೆ ಮುಕ್ತವಾಗಿದೆ. ಆದರೆ ವಿದ್ಯುತ್ ಗ್ರಾಹಕರು ಸರಿಯಾಗಿ ಸ್ಪಂಧಿಸದ ಹಿನ್ನಲೆ ಇನ್ನೂ ಶೇಕಡಾ 30 ಸರ್ವೆ ಕಾರ್ಯ ಬಾಕಿ ಉಳಿದುಕೊಂಡಿದೆ. ಸಿಬ್ಬಂದಿಗಳು ಗ್ರಾಹಕರ ಮನೆಗಳಿಗೆ ಹೋದರೂ ಮಾಲೀಕರು ಸಿಗದ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ತಡವಾಗಿದೆ. ಹೀಗಾಗಿ ಡೋರ್ ಲಾಕ್ ಆಪ್ಶನ್ ಮೂಲಕ ಸಿಬ್ಬಂದಿಗಳು ಸಂದೇಶವನ್ನು ಕಳುಹಿಸಿದ್ದಾರೆ.

ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ

ಅಕೌಂಟ್ ಐಡಿ ಎಂಟ್ರಿ ಮಾಡಿದರೆ ಸಿಬ್ಬಂದಿಯ ಕಾಂಟ್ಯಾಕ್ಟ್ ನಂಬರ್ ಸಹಿತ ಸಂದೇಶ ರವಾನೆ ಆಗಲಿದೆ. ಕೆಲ ಅಪಾರ್ಟ್ಮೆಂಟ್ ನಿವಾಸಿಗಳಿಂದ ಗೃಹಜ್ಯೋತಿ ಸರ್ವೆ ಕಾರ್ಯಕ್ಕೆ ಭಾರೀ ತೊಂದರೆ ಆಗಿದ್ದು, ಅಪಾರ್ಟ್ಮೆಂಟ್ ನಿವಾಸಿಗಳು ಸರ್ವೆ ಸಿಬ್ಬಂದಿಗಳಿಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಇದರಿಂದ ಸರಿಯಾಗಿ ಮಾಹಿತಿ ಸಿಗದೆ ಸಿಬ್ಬಂದಿಗಳು ಹೈರಾಣಾಗಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಇನ್ನು ಒಂದು ತಿಂಗಳ ಕಾಲಾವಕಾಶವನ್ನು ಬೆಸ್ಕಾಂ ಕೇಳಿದೆ.

ರಾಜ್ಯಾದ್ಯಂತ 1,65,32,652 ಫಲಾನುಭವಿಗಳು

ಇದರಂತೆ ಸೆಪ್ಟೆಂಬರ್ 30ರವರೆಗೂ ಸರ್ಕಾರ ಅವಧಿ ವಿಸ್ತರಣೆ ಮಾಡಿದೆ, ಸೆಪ್ಟೆಂಬರ್ ‌30ಕ್ಕೆ ಗೃಹಜ್ಯೋತಿ ಪರಿಷ್ಕರಣೆ ಸರ್ವೆ ಕೊನೆ‌ ದಿನ ಆಗಲಿದೆ. ಅಕ್ಟೋಬರ್ ನಲ್ಲಿ ಎಸ್ಕಾಂಗಳು ರಾಜ್ಯ ಸರ್ಕಾರಕ್ಕೆ ನೋಂದಣಿ ಮಾಹಿತಿ ನೀಡಿದೆ. ಹಾಗಾದರೆ ವೋಟರ್ ಐಡಿ ನೀಡದ ಗೃಹಜ್ಯೋತಿ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯಲಿದ್ದಾರಾ? ರಾಜ್ಯಾದ್ಯಂತ ಒಟ್ಟು 1,65,32,652 ಗೃಹಜ್ಯೋತಿ ಫಲಾನುಭವಿಗಳಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 68,86,860 ಫಲಾನುಭವಿಗಳಿದ್ದಾರೆ.

PREV
Read more Articles on
click me!

Recommended Stories

Koppal: 'ಬೇರೆ ಧರ್ಮಗಳಿಗಿಂತ ಇಸ್ಲಾಂ ಶ್ರೇಷ್ಠ, ನಾನು ದೇವಸ್ಥಾನ-ಮಠಮಾನ್ಯಗಳಿಗೆ ಜಾಸ್ತಿ ಹೋಗೋದಿಲ್ಲ', ಸಚಿವ ಬಸವರಾಜ ರಾಯರೆಡ್ಡಿ
ಕೊಲ್ಲಾಪುರದಿಂದ ಧಾರವಾಡಕ್ಕೆ ಬಂದ ರೈಲಿನ ಬೋಗಿಯಲ್ಲಿ ಅರೆಬೆತ್ತಲೆ ಮಹಿಳೆಯ ಶವ ಪತ್ತೆ! ಬೆಚ್ಚಿಬಿದ್ದ ರೈಲ್ವೆ ಸಿಬ್ಬಂದಿ!