ಬೆಂಗಳೂರು (ಜೂ.30): ಮೆಟ್ರೋ ಪ್ರಯಾಣಿಕರಿಗೆ ಇಲ್ಲಿದೆ ಸಿಹಿಸುದ್ದಿ. ಶೀಘ್ರದಲ್ಲೆ ಮೆಟ್ರೋದಲ್ಲಿ ಟಿಕೆಟ್ ಟೋಕನ್ ವ್ಯವಸ್ಥೆ ಶುರುವಾಗಲಿದೆ. ಕೋವಿಡ್ ಸೋಂಕು ಹರಡ ಬಹುದುದೆಂದು ಸ್ಥಗಿತಗೊಳಿಸಲಾಗಿದ್ದ ಟೋಕನ್ ಸಿಸ್ಟಮ್ ಮತ್ತೆ ಜಾರಿಯಾಗಲಿದೆ.
ಸ್ಮಾರ್ಟ್ ಕಾರ್ಡ್ ಕಡ್ಡಾಯದಿಂದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದ್ದು, ಹೀಗಾಗಿ ಟೋಕನ್ ನೀಡಲು ಬಿಎಂಆರ್ ಸಿ ಎಲ್ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
undefined
ಮೆಟ್ರೋದಲ್ಲಿ ಕಾಡುಹಂದಿ ಸಂಚಾರ, ಪ್ರಯಾಣಿಕರಿಗೆ ಪುಕಪುಕ..! .
ಕೋವಿಡ್ ಪೂರ್ವದಲ್ಲಿ ಪ್ರತಿದಿನ 5 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರು. 2021 ರ ಮಾರ್ಚ್ ಏಪ್ರಿಲ್ ನಲ್ಲಿ ಸರಾಸರಿ ಒಂದೂವರೆ ಲಕ್ಷ ಪ್ರಯಾಣಿಕರು ಮಾತ್ರ ಪ್ರಯಾಣಿಸಿದ್ದಾರೆ. ನಿನ್ನೆ ಕೇವಲ 59 ಸಾವಿರ ಜನ ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಪ್ರಯಾಣಿಕರ ಸಂಖ್ಯೆ ಕುಸಿಯಲು ಟೋಕನ್ ವ್ಯವಸ್ಥೆ ಕಾರಣವಾಗಿದ್ದು
ಸದ್ಯದಲ್ಲೆ ಟೋಕನ್ ವ್ಯವಸ್ಥೆ ಮಾಡಲು ಸಿದ್ದತೆ ನಡೆಯುತ್ತಿದೆ.
ಬೆಂಗಳೂರಿಗರಿಗೆ ಗುಡ್ ನ್ಯೂಸ್: ಮೆಟ್ರೋ 2A, 2B ಹಂತದ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ .
ಕೋವಿಡ್ ಪೂರ್ವದಲ್ಲಿ ಶೇ 40 ಪ್ರಯಾಣಿಕರು ಟೋಕನ್ ಬಳಸಿಯೇ ಪ್ರಯಾಣಿಸುತ್ತಿದ್ದರು. ಸದ್ಯ ಟೋಕನ್ ಇಲ್ಲದೆ ಇರುವ ಕಾರಣ ಸ್ಮಾರ್ಟ್ ಕಾರ್ಡ್ ಗೆ 150 ರೂಪಾಯಿ ನೀಡಿ ಪ್ರಯಾಣಿಸಬೇಕಾಗಿದೆ. ಹೀಗಾಗಿ ಬೆಂಗಳೂರಿಗೆ ಬಂದು ಹೋಗುವ ಪ್ರಯಾಣಿಕರು ಮೆಟ್ರೋದತ್ತ ಸುಳಿಯುತ್ತಿಲ್ಲ.
ಸದ್ಯ ಮೆಟ್ರೋದಲ್ಲಿ 50% ರಷ್ಟು ಜನರು ಸಂಚರಿಸಲು ಮಾತ್ರ ಅವಕಾಶ ನೀಡಲಾಗಿದೆ. ಮೂರನೇ ಹಂತದ ಅನ್ ಲಾಕ್ ನಲ್ಲಿ ದಿನವಿಡೀ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ಬೆಳಗ್ಗೆಯಿಂದ ಸಂಜೆಯರೆಗೆ ಸಂಚಾರ : ಮೆಟ್ರೋ ಪ್ರಯಾಣಿಕರ ಒತ್ತಡಕ್ಕೆ ಮಣಿದ ಬಿಎಂಆರ್ಸಿಎಲ್ ನಾಳೆಯಿಂದ ನಮ್ಮ ಮೆಟ್ರೋ ಬೆಳಗ್ಗೆಯಿಂದ ಸಂಜೆಯರೆಗೆ ಸಂಚಾರ ನಡೆಸಲು ತೀರ್ಮಾನಿಸಿದೆ. ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ವರಿಗೆ ಮೆಟ್ರೋ ಓಡಾಟ ನಡೆಸಲಿದೆ.
ಸ್ಮಾರ್ಟ್ ಕಾರ್ಡ್ ಬದಲಾಗಿ ಟೋಕನ್ ವಿತರಣೆ ಮಾಡಲು ನಿರ್ಧಾರ ಮಾಡಿದ್ದು ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನಲೆ ಬಿಎಂಆರ್ ಸಿಎಲ್ ಮೆಟ್ರೋ ಅವಧಿ ವಿಸ್ತರಣೆ ಮಾಡುತ್ತಿದೆ.