ಬೀದರ್: ಗ್ರಾಮ ಪಂಚಾಯತಿಯಲ್ಲಿ ಕೋಟಿ ಕೋಟಿ ಪಂಗನಾಮ..!

By Girish Goudar  |  First Published Jan 20, 2023, 11:30 PM IST

ರಸ್ತೆ, ಚರಂಡಿ, ಬಾವಿ ಹೆಸರಲ್ಲಿ ಕೋಟಿ ಕೋಟಿ ರೂ. ಲೂಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷನಿಂದ ಸರ್ಕಾರದ ಖಜಾನೆ ಲೂಟಿ. ಬೀದರ್‌ನ ಚಿಮಕೋಡ ಪಂಚಾಯತ್‌ನಲ್ಲಿ ಭಾರೀ ಗೋಲ್ಮಾಲ್. 
 


ವರದಿ: ಲಿಂಗೇಶ್ ಮರಕಲೆ

ಬೀದರ್(ಜ.20): ದೇವರು ವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತ ಪರಿಸ್ಥಿತಿ ಬೀದರ್ ತಾಲೂಕಿನ ಚಿಮಕೋಡ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ಕೋಟಿ ಕೋಟಿ ಬಜೆಟ್ ನೀಡುತ್ತಿದೆ. ಆದರೆ ಭ್ರಷ್ಟ ಅಧಿಕಾರಿಗಳು, ಪಂಚಾಯತಿ ಅಧ್ಯಕ್ಷರ ಕರ್ಮಕಾಂಡದಿಂದ ಗ್ರಾಮಗಳ ಅಭಿವೃದ್ಧಿಗಾಗಿ ಬಳಕೆಯಾಗಬೇಕಿದ್ದ ಹಣ ಭ್ರಷ್ಟರ ಜೇಬು ಸೇರುತ್ತಿದೆ. ಈ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡದೇ ಕೋಟಿ ಕೋಟಿ ಬಿಲ್ ಲಪಟಾಯಿಸಿಕೊಂಡು ಮನೆ ತುಂಬಿಸಿಕೊಂಡಿದ್ದಾರೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Latest Videos

undefined

ಹೌದು, ಬೀದರ್‌ನ ಚಿಮಕೋಡ ಗ್ರಾಮ ಪಂಚಾಯತಿಯಲ್ಲಿ ರಸ್ತೆ ಕಾಮಗಾರಿ, ಚರಂಡಿ, ರೈತರ ಹೊಲಗಳಲ್ಲಿ ಬಾವಿ, ರೈತರ ಜಮೀನುಗಳಿಗೆ ಹೋಗುವ ದಾರಿಯ ಮಧ್ಯ ಇರುವ ಕಾಲುವೇ ನೀರು ಹೋಗಲು ಪೈಪ್ ಅಳವಡಿಕೆ ಸೇರಿದಂತೆ ಹತ್ತು ಹಲವಾರು ಕಾಮಗಾರಿಗಳು ಮಾಡದೇ ಭೋಗಸ್ ಬಿಲ್ ಮಾಡಿಕೊಂಡು ಕೋಟ್ಯಾಂತರ ರೂ. ಪಂಗನಾಮ ಹಾಕಿದ್ದಾರೆ. ಚಿಮಕೋಡ್ ಗ್ರಾಮ ಪಂಚಾಯತಿ ಪಿಡಿಒ, ಅಧ್ಯಕ್ಷ ಸೇರಿಕೊಂಡು ಸುಮಾರು 2 ಕೋಟಿ ರೂ. ಕಾಮಗಾರಿ ಮಾಡದೇ ಬೋಗಸ್ ಬಿಲ್ ಮಾಡಿಕೊಂಡು ಜನರ ತೆರಿಗೆ ದುಡ್ಡು ಲೂಟಿ ಹೊಡೆದಿದ್ದಾರೆ.

ಕಾಂಗ್ರೆಸ್‌ನಿಂದ ಶೀಘ್ರ ರಾಜ್ಯಮಟ್ಟದ ಒಬಿಸಿ ಸಮಾವೇಶ: ಮಧು ಬಂಗಾರಪ್ಪ

ಚಿಮಕೋಡ ಗ್ರಾಮದಿಂದ ರೈತರ ಜಮೀನಿಗೆ ಹೋಗಲು ರಸ್ತೆ ಮಾಡಿದ್ದೇವೆಂದು 15 ಲಕ್ಷ. ಅದೇ ದಾರಿಯಲ್ಲಿ ಬರುವ ಹಳ್ಳದ ನೀರು ಹರಿದು ಹೋಗಲು ಪೈಪ್ ಅಳವಡಿಕೆ ಮಾಡಿದ್ದು ಕೇವಲ ನಾಮಕೆ ವಾಸ್ತೆಯಂತೆ ಹಳೆಯ ಪೈಪ್ ಬೇಕಾಬಿಟ್ಟಿಯಾಗಿ ಅಳವಡಿಕೆ ಮಾಡಿ ಹೋಗಿದ್ದಾರೆ. ಇನ್ನು ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ಮಾಡಲಾಗಿದೆ ಎಂದು ಯಾವುದೇ ಕಾಮಗಾರಿ ಮಾಡದೇ 9 ಲಕ್ಷ ರೂ. ಲಪಟಾಯಿಸಿದಾರೆ. ಇದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಫತೇಪುರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿದೆ ಎಂದು ಕಾಮಗಾರಿ ನಡೆಸದೇ ಬಿಲ್ ಪಾಸ್ ಮಾಡಿಕೊಂಡಿದ್ದಾರೆ,. ಫತೇಪುರ ಗ್ರಾಮದ ರೈತರ ಜಮೀನಿನಲ್ಲಿ 4 ಬಾವಿ ಕೊರೆದಿದ್ದೇವೆಂದು ಲಕ್ಷ ಲಕ್ಷ ಲೂಟಿ ಮಾಡಲಾಗಿದೆ ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಕಾಮಗಾರಿಗಳು ಮಾಡದೇ ಕೇವಲ ದಾಖಲೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸುಮಾರು 2 ಕೋಟಿಗೂ ಅಧಿಕ ಹಣ ಪಂಚಾಯತ್ ಪಿಡಿಒ, ಅಧ್ಯಕ್ಷ ಸೇರಿಕೊಂಡು ಲೂಟಿ ಹೊಡೆದಿದ್ದಾರೆ.

ಈ ಬಗ್ಗೆ ವಿಚಾರಿಸಲು ಹೋದರೆ ಪಿಡಿಒ ನಾನು ಬಂದ ಮೇಲೆ ಯಾವುದೇ ಕಾಮಗಾರಿಗಳೇ ನಡೆದಿಲ್ಲ ಹಿಂದೇ ಏನೇನು ಆಗಿದೆ ಎಂದು ನನಗೆ ಗೊತ್ತಿಲ್ಲ ಎಂದು ಬೇಜವಬ್ದಾರಿ ಉತ್ತರ ನೀಡುತ್ತಾರೆ ಗ್ರಾಮ ಪಂಚಾಯತಿ ಪಿಡಿಒ ಅಮೃತ್. 

click me!