ಹತ್ತಾರು ವರ್ಷಗಳಿಂದ ಹಿಂದುಳಿದಿದ್ದ ಗೊಲ್ಲರಹಟ್ಟಿ ನನ್ನಿಂದ ಅಭಿವೃದ್ಧಿ ಆಗಿದೆ : ರಾಜೇಶ್ ಗೌಡ

By Kannadaprabha News  |  First Published Dec 15, 2023, 9:06 AM IST

ಹತ್ತಾರು ವರ್ಷಗಳಿಂದ ಅಭಿವೃದ್ಧಿ ಕಾಣದ ಗೊಲ್ಲರಹಟ್ಟಿಗಳಿಗೆ ಶಾಸಕನಾಗಿದ್ದ ಸಂದರ್ಭದಲ್ಲಿ ಅನುದಾನ ತಂದು ಸಿಸಿ ರಸ್ತೆ ಮತ್ತು ಚರಂಡಿ ಸೇರಿದಂತೆ ದೇವಸ್ಥಾನಗಳ ಅಭಿವೃದ್ಧಿಗೆ ಶ್ರಮಿಸಿದ್ದರ ಫಲವಾಗಿ ಇಂದು ಗೊಲ್ಲರಹಟ್ಟಿಗಳಲ್ಲಿ ರಸ್ತೆಗಳು ಪೂರ್ಣಗೊಂಡಿರುವುದು ಸಾರ್ಥಕತೆ ತಂದು ಕೊಟ್ಟಿದೆ ಎಂದು ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಹೇಳಿದರು.


  ಶಿರಾ :  ಹತ್ತಾರು ವರ್ಷಗಳಿಂದ ಅಭಿವೃದ್ಧಿ ಕಾಣದ ಗೊಲ್ಲರಹಟ್ಟಿಗಳಿಗೆ ಶಾಸಕನಾಗಿದ್ದ ಸಂದರ್ಭದಲ್ಲಿ ಅನುದಾನ ತಂದು ಸಿಸಿ ರಸ್ತೆ ಮತ್ತು ಚರಂಡಿ ಸೇರಿದಂತೆ ದೇವಸ್ಥಾನಗಳ ಅಭಿವೃದ್ಧಿಗೆ ಶ್ರಮಿಸಿದ್ದರ ಫಲವಾಗಿ ಇಂದು ಗೊಲ್ಲರಹಟ್ಟಿಗಳಲ್ಲಿ ರಸ್ತೆಗಳು ಪೂರ್ಣಗೊಂಡಿರುವುದು ಸಾರ್ಥಕತೆ ತಂದು ಕೊಟ್ಟಿದೆ ಎಂದು ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಹೇಳಿದರು.

ತಾಲೂಕಿನ ಹಾರೋಗೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಶ್ರೀ ಯಡ್ಡಪ್ಪ ಸ್ವಾಮಿ ದಲ್ಲಿ ನಡೆದ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

Tap to resize

Latest Videos

undefined

ಹಾರೋಗೆರೆ ಗೊಲ್ಲರಹಟ್ಟಿ ಶ್ರೀ ಯಡ್ಡಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಇರಲಿ ಎಂಬ ಉದ್ದೇಶದಿಂದ ಸುಮಾರು 30 ಲಕ್ಷ ರು. ವೆಚ್ಚದಲ್ಲಿ ಹೈಮಾಸ್ಟ್ ದೀಪ ಹಾಗೂ ದೇವಸ್ಥಾನ ಸುತ್ತ ಸಿಸಿ ರಸ್ತೆಗೆ ಅನುದಾನ ನೀಡಲಾಗಿತ್ತು. ಇಂದು ಕಾಮಗಾರಿ ಪೂರ್ಣಗೊಂಡಿದೆ. ಅಲ್ಲದೆ ಈ ಗ್ರಾಮದಲ್ಲಿ 1.5 ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದು ತೃಪ್ತಿ ನೀಡಿದೆ.

ಕಳೆದ ವರ್ಷ ಐತಿಹಾಸಿಕ ಪ್ರಸಿದ್ಧ ಮದಲೂರು ಕೆರೆಗೆ ಹೇಮಾವತಿ ನೀರು ಹರಿದಿದ್ದು, ಕೆರೆ ಭರ್ತಿಯಾದ ಕಾರಣ ಇಂದಿಗೂ ಕೆರೆಯಲ್ಲಿ ನೀರು ಇದೆ. ಇದರಿಂದ ಶಿರಾ ತಾಲೂಕಿನ ಗೌಡಗೆರೆ ಮತ್ತು ಹುಲಿಕುಂಟೆ ಸೇರಿದಂತೆ ಕಸಬಾ ಹೋಬಳಿಯ ನೂರಾರು ಗ್ರಾಮಗಳಲ್ಲಿ ಅಂತರ್ಜಲ ಸ್ಥಿರವಾಗಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿದೆ. ಇಂತಹ ಜನಪರ ಕಾಳಜಿಯ ಯೋಜನೆಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿವೆ ಎಂದರು.

ಈ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಸೇರಿದಂತೆ ಹಲವಾರು ಮುಖಂಡರು ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.

click me!