ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಮಾಜಿ ಶಾಸಕಿ ಪೂರ್ಣಿಮಾ ಮತಯಾಚನೆ

By Kannadaprabha News  |  First Published Dec 15, 2023, 9:00 AM IST

ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಟಿ. ಶ್ರೀನಿವಾಸ್ ಅವರನ್ನು ನಿಲ್ಲಿಸುತ್ತಿದ್ದು, ಅವರಿಗೆ ಹೆಚ್ಚಿನ ರೀತಿಯಲ್ಲಿ ಮತ ನೀಡಿ, ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮಾಜಿ ಶಾಸಕಿ ಪೂರ್ಣಿಮಾ ಮನವಿ ಮಾಡಿದರು.


  ಗುಬ್ಬಿ:  ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಟಿ. ಶ್ರೀನಿವಾಸ್ ಅವರನ್ನು ನಿಲ್ಲಿಸುತ್ತಿದ್ದು, ಅವರಿಗೆ ಹೆಚ್ಚಿನ ರೀತಿಯಲ್ಲಿ ಮತ ನೀಡಿ, ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮಾಜಿ ಶಾಸಕಿ ಪೂರ್ಣಿಮಾ ಮನವಿ ಮಾಡಿದರು.

ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರ ಕ್ಷೇತ್ರದ ಸಮಸ್ಯೆಗಳು ಪ್ರತಿಯೊಂದು ಕೂಡ ಗೊತ್ತಿದೆ. ಇದುವರೆಗೂ ಗೆಲುವು ಪಡೆದಿರುವಂತಹ ಅಭ್ಯರ್ಥಿ ಶಿಕ್ಷಕರ ಪರವಾಗಿ, ಉಪನ್ಯಾಸಕರ ಪರವಾಗಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹಾಗಾಗಿ ಈ ಬಾರಿ ಆಗ್ನೆಯ ಕ್ಷೇತ್ರದ ಶಿಕ್ಷಕರು ಖಂಡಿತವಾಗಿಯೂ ಬದಲಾವಣೆಯನ್ನು ಬಯಸಿದ್ದು ಡಿ.ಟಿ. ಶ್ರೀನಿವಾಸ್ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

Latest Videos

undefined

2015 ರಿಂದ ಹಿಂದೆ ಇರುವ ಅನುದಾನಿತ ಶಾಲೆಗಳಿಗೆ ಮಾತ್ರ ಶಿಕ್ಷಕರನ್ನು ನೇಮಕ ಮಾಡಬೇಕು ಎಂಬ ಮಾಹಿತಿ ಇದ್ದು, ಅದನ್ನು ಬದಲವಣೆ ಮಾಡಿ ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ಕೊಡಿಸುವಂತಹ ಕಾಳಜಿ ಮಾಡುತ್ತಿದ್ದೇವೆ. ಅತಿಥಿ ಉಪನ್ಯಾಸಕರು ಪ್ರಥಮ ದರ್ಜೆ ಕಾಲೇಜಿಗೆ ಹೋಗದೆ ಪ್ರತಿಭಟನೆಯಲ್ಲಿ ತೊಡಗಿರುವುದು ನೋಡಿದಾಗ ಬೇಸರವಾಗುತ್ತದೆ. ಆದರೂ ಸಹ ವಿದ್ಯಾರ್ಥಿಗಳಿಗೆ ಪಾಠ ಮಾಡದೆ ಇರುವುದರಿಂದ ಅವರ ಭವಿಷ್ಯ ಕೂಡ ಹಾಳಾಗುತ್ತದೆ. ಹಾಗಾಗಿ ಸರಕಾರ ಖಂಡಿತವಾಗಿ ಅವರನ್ನು ಪರಿಗಣನೆಗೆ ತೆಗೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ನಮ್ಮ ಸಂಸ್ಥೆಯಲ್ಲಿ ಸಹ ಸುಮಾರು 10000 ವಿದ್ಯಾರ್ಥಿಗಳು ಶಿಕ್ಷಣವನ್ನ ಪಡೆಯುತ್ತಿದ್ದಾರೆ. ಹಾಗಾಗಿ ಎಲ್ಲಾ ಶಿಕ್ಷಕರ ಸಮಸ್ಯೆಗಳು ಶಾಲೆಯ ಸಮಸ್ಯೆಗಳು ನಮಗೆ ತಿಳಿದಿದ್ದು, ಖಂಡಿತವಾಗಿಯೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡುವುದಕ್ಕಾಗಿ ಈ ಬಾರಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಗುಬ್ಬಿ ತಾಲೂಕಿನಲ್ಲಿ 360 ಮತಗಳಿದ್ದು ಹೆಚ್ಚಿನ ಮತಗಳನ್ನು ಡಿ.ಟಿ. ಶ್ರೀನಿವಾಸ್ ಅವರಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಜಗನ್ನಾಥ್, ಮುಖಂಡರಾದ ಅಶೋಕ್, ರಾಘವೇಂದ್ರ, ದಿವಾಕರ್, ಸೋಮಣ್ಣ ಸೌಭಾಗ್ಯಮ್ಮ, ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.

click me!